Advertisement

ಇದು ಒಂದು ರಾಜಕೀಯ ಷಡ್ಯಂತ್ರದ ಭಾಗ : ಸಿ.ಡಿ ಪ್ರಕರಣಕ್ಕೆ ರಮೇಶ್ ಜಾರಕಿಹೊಳಿ ಸ್ಪಷ್ಟನೆ

10:08 PM Mar 02, 2021 | Team Udayavani |

ಬೆಂಗಳೂರು : ಮಾಧ್ಯಮದಲ್ಲಿ ಭಿತ್ತರವಾಗಿರುವ ರಾಸಲೀಲೆ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಸಚಿವ ರಮೇಶ್ ಜಾರಕಿಹೊಳಿ ಇದೊಂದು ರಾಜಕೀಯ ಷಡ್ಯಂತ್ರದ ಭಾಗ ಮಾಧ್ಯಮದಲ್ಲಿ ಭಿತ್ತರವಾಗುತ್ತಿರುವ ಸುದ್ದಿಯನ್ನು ನೋಡಿದ್ದು ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟನೆಯನ್ನು ನೀಡಿದ್ದಾರೆ.

Advertisement

ಈ ಕುರಿತು ಮಾತನಾಡಿದ ಸಚಿವರು ನಾನೇ ನೇರವಾಗಿ ಮಾಧ್ಯಮಗಳ ಮುಂದೆ ಬಂದು ಎಲ್ಲಾ ಸಂದೇಹಗಳಿಗೂ ಉತ್ತರಿಸಲಿದ್ದೇನೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸಂತ್ರಸ್ತೆ ಅನ್ನುವವರು ದೂರು ಕೊಡದೇ ಯಾರೋ ಮೂರನೇ ವ್ಯಕ್ತಿ ದೂರು ನೀಡಿರುವುದು ನನ್ನ ವಿರುದ್ಧದ ವ್ಯವಸ್ಥಿತ ಪಿತೂರಿಯೇ ಹೊರತು ಬೇರೆ ಏನು ಇಲ್ಲ ಎಂದು ರಮೇಶ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ :ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ : ಯತ್ನಾಳಗೆ ಜಿಗಜಿಣಗಿ ಎಚ್ಚರಿಕೆ

Advertisement

Udayavani is now on Telegram. Click here to join our channel and stay updated with the latest news.

Next