ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸು ತ್ತಿರುವಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತಕ್ಷಣಬಂಧಿಸಬೇಕು. ದಿನಕ್ಕೊಂದು ಹೇಳಿಕೆ ನೀಡಿ ಪ್ರಕರಣದದಿಕ್ಕು ತಪ್ಪಿಸುತ್ತಿರುವ ಅವರ ರಕ್ಷಣೆಗೆ ಸರ್ಕಾರವೇನಿಂತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಮೊದಲು ನನಗೆ ಯುವತಿಪರಿಚಯ ಇಲ್ಲ ಷಡ್ಯಂತ್ರ ಅಂತಾರೆ, ಇದೀಗ ಪರಿಚಯಆದರೆ ಅತ್ಯಾಚಾರ ಮಾಡಿಲ್ಲ ಅಂತಾರೆ. ಪೊಲೀಸರುಸರಿಯಾದ ರೀತಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿಲ್ಲ.ಸಾಕ್ಷ್ಯನಾಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದುಹೇಳಿದರು.
ಸಿದ್ದರಾಮಯ್ಯ ಮಾತನಾಡಿ, ರಮೇಶ್ ಜಾರಕಿಹೊಳಿ ಲೈಂಗಿಕ ಹಗರಣ ನಡೆದು ಮೂರು ತಿಂಗಳುಆಗಿದೆ. ಮೊದಲು ನಕಲಿ ಸಿಡಿ, ತೇಜೋವಧೆ ಮಾಡಲುಷಡ್ಯಂತ್ರ. ರಾಜೀನಾಮೆ ಕೊಡಲ್ಲ ಎಂದು ಹೇಳಿ ನಂತರರಾಜೀನಾಮೆ ಕೊಟ್ಟರು. ಇದೀಗ ಮತ್ತೂಂದು ರೀತಿಯಹೇಳಿಕೆ ಕೊಟ್ಟಿದ್ದಾರೆ ಇದೆಲ್ಲವೂ ನೋಡಿದರೆ ಸಾಕಷ್ಟುಅನುಮಾನಗಳು ಬರುತ್ತಿವೆ ಎಂದು ತಿಳಿಸಿದರು.ಖುದ್ದು ಸಂತ್ರಸ್ತೆ ಲೈಂಗಿಕವಾಗಿ ನನ್ನನ್ನುದುರುಪಯೋಗ ಮಾಡಿಕೊಂಡರು ಎಂದು ಆರೋಪಿಸಿ ವಿಡಿಯೊ ಬಿಡುಗಡೆ ಸಹ ಮಾಡಿದ್ದಾಳೆ.
ನ್ಯಾಯಾಲಯದಲ್ಲೂ ಹೇಳಿಕೆ ದಾಖಲು ಮಾಡಲಾಗಿದೆ.ಹೀಗಾಗಿ, ಅತ್ಯಾಚಾರ ಪ್ರಕರಣ ದಾಖಲಿಸಲುಒತ್ತಾಯಿಸಿದ್ದೆವು. ಆದರೆ, ಗೃಹ ಸಚಿವರು ಹಾರಿಕೆಉತ್ತರ ಕೊಟ್ಟಿದ್ದರು. ಎಸ್‌ಐಟಿ ರಚನೆ ಮಾಡಿದರೂಸರಿಯಾದ ತನಿಖೆಯೇ ಆಗಲಿಲ್ಲ. ನಿಯಮ ಪ್ರಕಾರ90 ದಿನಗಳಲ್ಲಿ ತನಿಖೆ ಆಗಬೇಕಿತ್ತು. ಎಸ್‌ಐಟಿ ವಿಚಾರಣೆನಡೆಸಿದ ನಂತರ ರಮೇಶ್‌ಜಾರಕಿಹೊಳಿಯನ್ನು ಬಂಧಿಸಬೇಕಿತ್ತು. ಇಡೀ ದೇಶದಲ್ಲಿಇಂತಹ ಪ್ರಕರಣದಲ್ಲಿಬಂಧನವಾಗದಿರುವುದುಇದೊಂದೇ ಪ್ರಕರಣ ಎಂದು ಹೇಳಿದರು.
ಸರ್ಕಾರವೇ ರಕ್ಷಣೆ: ಡಿ.ಕೆ.ಶಿವಕುಮಾರ್ ಮಾತನಾಡಿ,ರಮೇಶ್ ಜಾರಕಿಹೊಳಿ ಲೈಂಗಿಕಕಿರುಕುಳ ಪ್ರಕರಣದಲ್ಲಿ ರಾಜ್ಯದಪೊಲೀಸ್ ಇಲಾಖೆ ಗೌರವ ಮುಖ್ಯ. ಪೊಲೀಸ್‌ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲಾಗದ ಸ್ಥಿತಿನಿರ್ಮಾಣವಾಗುತ್ತಿದೆ. ಆರೋಪಿಯನ್ನುಸ್ವತಂತ್ರವಾಗಿ ತಿರುಗಾಡಿಕೊಂಡಿರಲು ಬಿಟ್ಟಿದ್ದಾರೆ.ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ರಕ್ಷಣೆಗೆನಿಲ್ಲುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ಬುನಾದಿಹಾಕಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.