Advertisement

ರಮೇಶ್‌ ಜಾರಕಿಹೊಳಿ ಮನವೊಲಿಕೆ ಪ್ರಯತ್ನ: ಪರಂ

11:06 PM Apr 23, 2019 | Lakshmi GovindaRaju |

ಬೆಂಗಳೂರು: “ರಮೇಶ್‌ ಜಾರಕಿಹೊಳಿ ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತೇನೆಂದು ಹೇಳಿದ್ದಾರೋ ಗೊತ್ತಿಲ್ಲ. ಅವರ ಮನವೊಲಿಕೆಗೆ ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಕೂಡ ಪ್ರಯತ್ನ ಪಟ್ಟಿದ್ದಾರೆ. ನಾನೂ ಅವರೊಂದಿಗೆ ಮಾತನಾಡುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದರು.

Advertisement

ಮಾಧ್ಯಮಗಳೊಂದಿಗೆ ಮಾತನಾಡಿ, “ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿದ ಬಳಿಕ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅವರಿಗೆ ನಮ್ಮ ಪಕ್ಷ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನೂ ನೀಡಿತ್ತು.

ಆದರೂ ಅವರು ರಾಜೀನಾಮೆ ಕೊಡುವ ಕಾರಣ ಸ್ಪಷ್ಟವಾಗಿಲ್ಲ. ಕೆಲವು ಕಾರಣದಿಂದ ಅವರಿಗೆ ನೀಡಿದ್ದ ಸಚಿವ ಸ್ಥಾನ ಹಿಂಪಡೆಯಲಾಗಿತ್ತು. ಆದರೆ, ಮತ್ತೆ ಅವರಿಗೆ ರಾಜಕೀಯವಾಗಿ ಜವಾಬ್ದಾರಿಗಳನ್ನು ಪಕ್ಷ ಕೊಡುತ್ತದೆ. ಮಂತ್ರಿ ಸ್ಥಾನ ಕೈ ಬಿಟ್ಟಿರುವುದೇ ರಾಜೀನಾಮೆಗೆ ಕಾರಣವಾದರೆ ನಮ್ಮ ಮುಖಂಡರು ಅವರೊಂದಿಗೆ ಮಾತನಾಡಲಿದ್ದಾರೆ’ ಎಂದರು.

ಶಾಸಕರ ಅಸಮಾಧಾನದ ವಿಚಾರದಲ್ಲಿ ಸಾಕಷ್ಟು ಘಟನೆ ನಡೆದಿರಬಹುದು, ಬಿಜೆಪಿಯಲ್ಲೂ ವೈಮನಸ್ಸಿರುವ ಶಾಸಕರು ಸಾಕಷ್ಟಿದ್ದಾರೆ. ಅವರೂ ರಾಜೀನಾಮೆ ನೀಡಬಹುದು ಎಂದು ನಾನು ಹೇಳಬಹುದಲ್ಲವೇ? ಹಾಗಾಗಿ ನಮ್ಮ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ನಾವು ಬೀಳುವುದೂ ಇಲ್ಲ, ನಿಮ್ಮ ಕೈಲಿ ಬೀಳಿಸುವುದಕ್ಕೂ ಆಗುವುದಿಲ್ಲ ಎಂದು ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಇದೇ ವೇಳೆ, ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಪ್ರತಿಕ್ರಿಯಿಸಿದ ಅವರು, ಧರ್ಮದ ವಿಚಾರದಲ್ಲಿ ರಾಜಕೀಯ ಪಕ್ಷಗಳು ದೂರವಿರುವುದು ಒಳ್ಳೆಯದು. ನಾನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಈ ವಿಚಾರ ದೊಡ್ಡ ಮಟ್ಟಕ್ಕೆ ಹೋಗಿತ್ತು. ಆಗಲೂ ಪಕ್ಷ ಇದರಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದೆ. ಎಂ.ಬಿ. ಪಾಟೀಲ್ ನಮ್ಮ ಪಕ್ಷದವರೇ ಆದರೂ ಈ ವಿಚಾರದಲ್ಲಿ ಅವರು ಪಕ್ಷವನ್ನು ಪ್ರತಿನಿಧಿಸುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next