Advertisement

ರಮೇಶ್‌ ಭ್ರಷ್ಟಾಚಾರದ ವೀಡಿಯೋ ಶೀಘ್ರ ಬಿಡುಗಡೆ: ಸತೀಶ್‌

12:37 PM Nov 03, 2019 | Sriram |

ಬೆಳಗಾವಿ: ಉಪಚುನಾವಣೆ ಸಮೀಪಿಸುತ್ತಿದ್ದಂತೆ ಜಾರಕಿಹೊಳಿ ಸಹೋದರರ ನಡುವೆ ಮಾತಿನ ಸಮರ ಮತ್ತೆ ತೀವ್ರಗೊಂಡಿದೆ. ಗೋಕಾಕ ತಾ.ಪಂ. ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಹಿಡಿತದಲ್ಲಿರುವುದರಿಂದ ಅವರು ತಾ.ಪಂ. ಸದಸ್ಯರ ರಾಜೀನಾಮೆ ಕೊಡಿಸಿರಬಹುದು. ಆದರೆ ಇದರಿಂದ ಗೋಕಾಕದಿಂದ ಕಾಂಗ್ರೆಸ್‌ ಖಾಲಿ ಮಾಡಿಸುವುದು ಅಸಾಧ್ಯ ಎಂದು ಶಾಸಕ ಸತೀಶ್‌ ಜಾರಕಿಹೊಳಿ ನೇರ ಸವಾಲು ಹಾಕಿದ್ದಾರೆ.

Advertisement

ಪತ್ರಕರ್ತರ ಜತೆ ಮಾತನಾಡಿದ ಅವರು, ಗೋಕಾಕ ತಾ.ಪಂ. ಸದಸ್ಯರು ರಾಜೀನಾಮೆ ನೀಡಿರುವ ಬಗ್ಗೆ ಅಚ್ಚರಿ ಪಡಬೇಕಾಗಿಲ್ಲ. ಅದು ದಬ್ಟಾಳಿಕೆಯಿಂದ ಆಗಿರುವ ಬೆಳವಣಿಗೆ. ಆದರೆ ಇದರಿಂದ ಕಾಂಗ್ರೆಸ್‌ ಪಕ್ಷವನ್ನು ಗೋಕಾಕದಿಂದ ಸಂಪೂರ್ಣ ತೆಗೆದುಹಾಕುತ್ತೇವೆ ಎಂದು ತಿಳಿದುಕೊಂಡಿದ್ದರೆ ಆದಕ್ಕಿಂತ ದೊಡ್ಡ ಭ್ರಮೆ ಬೇರೆ ಇಲ್ಲ. ಕಾಂಗ್ರೆಸ್‌ ಪಕ್ಷವನ್ನು ಅಲ್ಲಿಂದ ಖಾಲಿ ಮಾಡಿಸುವುದು ಸಾಧ್ಯವಾಗದ ಮಾತು ಎಂದರು.

ಗೋಕಾಕ ನನ್ನ ಹಿಡಿತದಲ್ಲಿದೆ ಎಂದು ರಮೇಶ್‌ ತಿಳಿದುಕೊಂಡಿದ್ದಾರೆ. ಆದಷ್ಟು ಬೇಗ ಗೋಕಾಕದಲ್ಲಿನ ಭ್ರಷ್ಟಾಚಾರದ ಕುರಿತು ವೀಡಿಯೋ ಬಿಡುಗಡೆ ಮಾಡಲಾಗುವುದು. ನಾವು ಉಪಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಜಯ ನಮ್ಮದೇ ಎಂದರು.

ಮಾವ-ಅಳಿಯನ ಆಟ ಡಿ.5ರವರೆಗೆ ಮಾತ್ರ: ಲಖನ್‌
ಗೋಕಾಕದಲ್ಲಿ ಲಖನ್‌ ಜಾರಕಿಹೊಳಿ ಮಾತನಾಡಿ, ಸಹೋದರ ರಮೇಶ್‌ ಮತ್ತು ಆಳಿಯ ಅಂಬಿರಾವ್‌ ಪಾಟೀಲ್‌ ಅವರ ಆಟ ಗೋಕಾಕ ಕ್ಷೇತ್ರದಲ್ಲಿ ಡಿ.5ರವರೆಗೆ ಮಾತ್ರ ನಡೆಯಲಿದೆ. ಸ್ಥಳೀಯ ಸಂಸ್ಥೆಗಳಲ್ಲಿರುವ ರಮೇಶ್‌ ಬೆಂಬಲಿತ ಸದಸ್ಯರು ರಾಜೀನಾಮೆ ಕೊಟ್ಟು ಹೋದರೆ ನಮಗೇನೂ ಭಯವಿಲ್ಲ. 22, 42 ಮತ್ತು 52 ಸದಸ್ಯರು ಹೋದರೆ ಹೋಗಲಿ. ನಮ್ಮ ಜತೆ ಕ್ಷೇತ್ರದ 2.40 ಲಕ್ಷ ಮತದಾರರಿದ್ದಾರೆ. ಈ ಬೆಂಬಲದ ಮುಂದೆ ಮಾವ-ಅಳಿಯನ ಆಟ ಏನೂ ನಡೆಯದು ಎಂದರು.

ಸತೀಶ್‌ ಜಾರಕಿಹೊಳಿ ಎಲ್ಲ ಪಂಚಾಯತ್‌ಗಳ ಹಗರಣಗಳನ್ನು ಹೊರತೆಗೆಯುತ್ತಿದ್ದಾರೆ. ಇದರಿಂದ ಅವರ ಬೆಂಬಲಿಗರಿಗೆ ಅಂಜಿಕೆ ಆರಂಭವಾಗಿದೆ. ಮೇಲಾಗಿ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತೂಬ್ಬ ಅಳಿಯ ಸೋತಿದ್ದಾರೆ. ಇವೆಲ್ಲದರಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ತಮ್ಮ ಬೆಂಬಲಿತ ಸದಸ್ಯರ ರಾಜೀನಾಮೆ ಕೊಡಿಸುವ ನಾಟಕ ಆರಂಭಿಸಿದ್ದಾರೆ. ಚುನಾವಣೆ ಬಂದಿರುವುದರಿಂದ ಬ್ಲ್ಯಾಕ್‌ವೆುàಲ್‌ ಮಾಡಿ ರಾಜೀನಾಮೆ ಕೊಡಿಸುತ್ತಿದ್ದಾರೆ. ಮುಂದೆ ಜಿ.ಪಂ. ಸದಸ್ಯರ ರಾಜೀನಾಮೆಯನ್ನೂ ಕೊಡಿಸುತ್ತಾರೆ. ಇದರಿಂದ ನಮಗೇನೂ ಸಮಸ್ಯೆ ಇಲ್ಲ ಎಂದರು.

Advertisement

ನಾನು 25 ವರ್ಷಗಳಿಂದ ಇವರ ಜತೆ ರಾಜಕಾರಣ ಮಾಡುತ್ತ ಬಂದಿದ್ದೇನೆ. ಇವರ ಆಟವೆಲ್ಲ ಗೊತ್ತು. ಮಾವ-ಅಳಿಯನ ಭ್ರಷ್ಟಾಚಾರ ಮತ್ತು ಬ್ಲ್ಯಾಕ್‌ವೆುàಲ್‌ ಬಂದ್‌ ಮಾಡಲು ನಾನು ಮತ್ತು ಸತೀಶ್‌ ಹೋರಾಟ ಆರಂಭ ಮಾಡಿದ್ದೇವೆ. ಇದರಿಂದ ಹಿಂದೆ ಸರಿಯುವುದಿಲ್ಲ ಎಂದರು.

ಒಮ್ಮೆ ಸತೀಶ್‌ ನಾನು ಸಾವಿರಾರು ಕೋ. ರೂ. ಆಸ್ತಿ ಮಾಡಿದ್ದೇನೆ ಎನ್ನುತ್ತಾನೆ. ಇನ್ನೊಮ್ಮೆ ಸಾಲಗಾರನಾಗಿದ್ದೇನೆ ಎಂದು ಹೇಳುತ್ತಾರೆ. ಹೀಗಾಗಿ ಇಂಥ ಆರೋಪಗಳಿಗೆ ಬಹಿರಂಗ ಸಭೆಯಲ್ಲಿ ಉತ್ತರ ಕೊಡುತ್ತೇನೆ.
– ರಮೇಶ್‌ ಜಾರಕಿಹೊಳಿ, ಅನರ್ಹ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next