ವಿಜಯಪುರ: ಸಿಂದಗಿ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31088 ಮತಗಳ ಭಾರೀ ಅಂತರದಿಂದ ಐತಿಹಾಸಿಕ ವಿಜಯ ಸಾಧಿಸಿದ್ದಾರೆ.
ಜೆಡಿಎಸ್ ಶಾಸಕರಾಗಿದ್ದ ಎಂ.ಸಿ.ಮನಗೂಳಿ ಅವರ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಹೀನಾಯ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಐದನೇ ಬಾರಿ ಕ್ಷೇತ್ರದಲ್ಲಿ ಸತತ ಸೋಲು ಅನುಭವಿಸಿದೆ.
ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪಕ್ಷ ನಾಯಕರು ಕ್ಷೇತ್ರದಲ್ಲಿ ಹತ್ತಾರು ದಿನ ಠಿಕಾಣಿ ಹೂಡಿದ್ದರೂ ಜೆಡಿಎಸ್ ಪಕ್ಷ ಕ್ಷೇತ್ರವನ್ನು ಕಳೆದು ಕೊಂಡಿದೆ. ಜೊತೆಗೆ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಿದೆ.
ಬಿಜೆಪಿಯ ರಮೇಶ ಭೂಸನೂರ 93380 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಅಶೋಕ ಮನಗೂಳಿ 62292 ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ ಅವರು ಕೇವಲ 4321 ಮತಗಳನ್ನಷ್ಟೇ ಪಡೆದರು.
Related Articles
ಇದನ್ನೂ ಓದಿ:ಹಾನಗಲ್ ಮೊದಲಿಂದಲೂ ಕಾಂಗ್ರೆಸ್ ಬೆಲ್ಟ್..: ಫಲಿತಾಂಶಕ್ಕೂ ಮೊದಲೇ ಸಿಎಂ ಹೇಳಿಕೆ
ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರು ಗೆಲುವು ಖಚಿತವಾಗುತ್ತಲೇ ಮತ ಎಣಿಕೆ ಕೇಂದ್ರದ ಎದುರು ಹಾಗೂ ಸಿಂದಗಿ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ ಆಚರಣೆಗೆ ಮುಂದಾದರು.
– BY Vijayendra (@byvijayendra) 2 Nov 2021