ಲಂಡನ್: ನೀವೆನಾದರೂ ಕೆಲ ದಿನಗಳಲ್ಲಿ ಮೇಡಮ್ ಟುಸ್ಸಾಡ್ ಮ್ಯೂಸಿಯಂಗೆ ತೆರಳಿದರೆ ಅಲ್ಲಿ ಯೋಗಾಸನ ಮಾಡುತ್ತಿರುವ ಭಂಗಿಯಲ್ಲಿ ಯೋಗಿಯೋರ್ವರನ್ನು ನೋಡಿ ಅಚ್ಚರಿ ಪಡಬೇಕಾಗಬಹುದು. ಹೌದು ಲಂಡನ್‌ನ ವಿಶ್ವ ಪ್ರಸಿದ್ಧ ಮ್ಯೂಸಿಯಂನಲ್ಲಿ ಪತಂಜಲಿ ಯೋಗ ಪೀಠದ ಯೋಗ ಗುರು ಬಾಬಾ ರಾಮ್ ದೇವ್ ಅವರ ಮೇಣದ ಪ್ರತಿಮೆ ದಿಗ್ಗಜರ ಪ್ರತಿಮೆಯ ಜೊತೆಗೆ ಕಾಣಿಸಿಕೊಳ್ಳಲಿದೆ.
ರಾಮ್‌ದೇವ್ ಅವರು ಇತ್ತೀಚೆಗೆ ಲಂಡ್‌ನಗೆ ತೆರಳಿ ಪ್ರತಿಮೆಗೆ ಬೇಕಾಗಿ ಅಳತೆ ನೀಡಿದ್ದಾರೆ. ಮ್ಯೂಸಿಯಂನಲ್ಲಿ ಇದೇ ಮೊದಲ ಬಾರಿಗೆ ಯೋಗಿಯೊಬ್ಬರ ಪ್ರತಿಮೆ ಇಡಲಾಗುತ್ತಿದೆ.
ಈ ವಿಚಾರವನ್ನು ರಾಮ್‌ದೇವ್ ಅವರು ಟ್ವೀಟ್ ಮಾಡಿದ್ದು, ‘ಪ್ರತಿಮೆ ಯೋಗದ ವೈಜ್ಞಾನಿಕ ವೈಭವಕ್ಕೆ ಮತ್ತಷ್ಟು ಬಲ ನೀಡುತ್ತದೆ ಮತ್ತು ಪ್ರಪಂಚದಾದ್ಯಂತ ಜನರು ಯೋಗದ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ’ ಎಂದು ಬರೆದಿದ್ದಾರೆ.
ರಾಮ್ ದೇವ್ ಅವರಿಗೆ ಕೆಲ ದಿನಗಳ ಹಿಂದೆ ಮ್ಯೂಸಿಯಂನವರೇ ಕರೆ ಮಾಡಿ ಪ್ರತಿಮೆ ಸ್ಥಾಪಿಸುವ ಕುರಿತು ಮನವಿ ಮಾಡಿದ್ದರು ಎಂದು ಪತಂಜಲಿ ಸಂಸ್ಥೆ ತಿಳಿಸಿದೆ.