Advertisement

ರಂಭಾಪುರಿ-ಕೇದಾರ ಜಗದ್ಗುರುಗಳಿಂದ ಸದಸ್ಯತ್ವಕ್ಕೆ ಚಾಲನೆ

08:33 AM Feb 12, 2019 | |

ಕಲಬುರಗಿ: ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕಕ್ಕೆ ಸಾವಿರಕ್ಕಿಂತ ಕಡಿಮೆ ಸದಸ್ಯತ್ವ ಇರುವುದರಿಂದ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಸದಸ್ಯತ್ವ ಹೆಚ್ಚಿಸುವ ಕಾರ್ಯಕ್ಕೆ ಬಾಳೆಹೊನ್ನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಭಗವತ್ಪಾದರು ಮಹಾಸಭೆ ಸದಸ್ಯತ್ವಕ್ಕೆ ಚಾಲನೆ ನೀಡಿದರು.

Advertisement

ಮಹಾಸಭೆಗೆ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ದೊಡ್ಡ ಮಟ್ಟದಲ್ಲಿ ಮಹಾಸಭೆ ಬೆಳೆಯಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರು ಮಹಾಸಭೆ ಸದಸ್ಯರಾಗಿ ಧರ್ಮದ ಕೆಲಸದಲ್ಲಿ ನಿರತರಾಗಬೇಕು ಎಂದು ಉಭಯ ಜಗದ್ಗುರುಗಳು ಹೇಳಿದರು. ಮಹಾಸಭೆ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರೀಯ ಘಟಕಗಳಿಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಆದರೆ ಕಲಬುರಗಿ ಮಹಾಸಭೆಗೆ ಚುನಾವಣೆ ನಡೆಯುತ್ತಿಲ್ಲ. ಸದಸ್ಯರು ಸಾವಿರಕ್ಕಿಂತ ಕಡಿಮೆ ಇರುವುದರಿಂದ ಚುನಾವಣೆಗೆ ಮುಂದಾಗಿಲ್ಲ. ಮಹಾಸಭೆ ಸ್ಥಾಪನೆಯಾಗಿ 115 ವರ್ಷಗಳಾದರು ಕಲಬುರಗಿಯಲ್ಲಿ ಮಹಾಸಭೆಗೆ ಸಾವಿರ ಸದಸ್ಯರು ಆಗದಿರುವುದು ವಿಚಿತ್ರವಾಗಿದೆ ಎಂದು ಸಂಘಟಕರು ಕಳವಳ ವ್ಯಕ್ತಪಡಿಸಿದರು.

ಅರುಣಕುಮಾರ ಪಾಟೀಲ, ಜಿ.ಡಿ. ಅಣಕಲ್‌, ಧರ್ಮಪ್ರಕಾಶ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಭೀಮರಾವ ಓಕಳಿ, ಶಿವಶರಣಪ್ಪ ಸಾಹು ಸಿರಿ, ಮಚ್ಚೆಂದ್ರನಾಥ ಮೂಲಗೆ, ರಾಜೇಶ ಹಾಗರಗಿ, ದಿವ್ಯಾ ಹಾಗರಗಿ ಇದ್ದರು. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಬೇಕು. ಸದಸ್ಯರಾಗಲು ಬಯಸುವವರು 9591794555, 9900948316, 9449309811 ಸಂಪರ್ಕಿಸಬೇಕು ಎಂದು ಎಂ. ಎಸ್‌. ಪಾಟೀಲ ನರಿಬೋಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next