Advertisement
ಸೇತುಬಂಧದ ಕುರಿತು ರಾಮಾಯಣ ಏನು ಹೇಳುತ್ತದೆ?ಬಿಲ್ಲಿನ ಹೆದೆಯೇರಿಸಿ ಕೋಪಗೊಂಡ ರಾಮನೆದುರು ಸಮುದ್ರರಾಜನು ನತಮಸ್ತಕನಾಗಿ “ಸೇತು ನಿರ್ಮಾಣಕ್ಕೆ ಯೋಗ್ಯವಾದ ಸ್ಥಳವೊಂದನ್ನು ನಾನು ಗುರುತಿಸಿಕೊಡುತ್ತೇನೆ’ ಎಂದು ಅರಿಕೆ ಮಾಡಿಕೊಳ್ಳುತ್ತಾನೆ. ವಿಶ್ವಕರ್ಮನ ಮಗನಾದ ನಳನು, ಸೇತು ನಿರ್ಮಾಣದ ಪೂರ್ಣ ಯೋಜನೆಯನ್ನು ತಾನು ವಹಿಸಿಕೊಳ್ಳುತ್ತಾನೆ. ಅವನ ಮಾರ್ಗದರ್ಶನದಂತೆ ಅಗಾಧವಾಗಿದ್ದ ಕಪಿಸೇನೆಯು ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳುತ್ತದೆ. ಪರ್ವತದ ತುದಿ ಭಾಗವನ್ನೂ, ಲೆಕ್ಕ ಸಂಖ್ಯೆಯಿಲ್ಲದಷ್ಟು ಮರಗಳನ್ನೂ ಆ ವಾನರಸೇನೆಯು ಸಮುದ್ರದಡಕ್ಕೆ ಸಾಗಿಸುತ್ತದೆ. ಕೆಲವು ಮರಗಳನ್ನು ಬುಡ ಸಮೇತವಾಗಿಯೂ, ಕೆಲವನ್ನು ಬುಡವಿಲ್ಲದೆಯೂ ತಂದು ತಂದು ಸಮುದ್ರದಲ್ಲಿ ಕ್ರಮವಾಗಿ ರಾಶಿಗೊಳಿಸುತ್ತಾರೆ. ಈ ಹಂತದಲ್ಲಿ ಆ ಮರಗಳಲ್ಲಿ ಕೆಲವಷ್ಟರ ಹೆಸರನ್ನೂ ವಾಲ್ಮೀಕಿ ರಾಮಾಯಣದಲ್ಲಿ ಕಾಣಬಹುದು. ಆನೆಗಳಷ್ಟು ದೊಡ್ಡ ದೊಡ್ಡ ಬಂಡೆಗಳನ್ನು, ಪರ್ವತಗಳಿಂದ ಸಮುದ್ರ ತೀರಕ್ಕೆ ತರುವುದಕ್ಕೆ ಕಪಿ ಸೇನಾನಿಗಳು ಯಂತ್ರಗಳನ್ನು ಬಳಸಿದರಂತೆ!
ರಾಮಸೇತುವಿನ ವಿಚಾರದಲ್ಲಿ ಹೇಳಿಕೊಳ್ಳಬಹುದಾದಂಥ ಸಂಶೋಧನೆಗಳು ಭಾರತೀಯ ಪುರಾತಣ್ತೀ ಇಲಾಖೆಯ ವತಿಯಿಂದ ನಡೆದಿಲ್ಲವೆಂದೇ ಹೇಳಬೇಕು. ಆದರೆ, ಕೆಲವು ಸ್ವತಂತ್ರ ಸಂಶೋಧಕರು ನಡೆಸಿದ ಕೆಲವು ಅಧ್ಯಯನಗಳಿವೆ. ಆದರಲ್ಲಿ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯ ನಿವೃತ್ತ ನಿರ್ದೇಶಕರಾದ ಡಾ. ಎಸ್. ಬದ್ರಿನಾರಾಯಣನ್ ಅವರ ಅಧ್ಯಯನ ಬಹುಮುಖ್ಯವಾದ್ದು. ಅವರ ಅಧ್ಯಯನದ ಪ್ರಕಾರ, ರಾಮಸೇತು ಯಾವುದೇ ಕಾರಣಕ್ಕೂ ತನ್ನಿಂತಾನೆ ರಚನೆಯಾದ್ದಲ್ಲ, ಅದು ಮನುಷ್ಯಕೃತವೇ ಆನ್ನುವುದಕ್ಕೆ ಸಾಕಷ್ಟು ಭೂಸಂರಚನಾ ದಾಖಲೆಗಳಿವೆ. ಇವತ್ತಿಗೂ ಆ ಭಾಗದಲ್ಲಿ ಮಣ್ಣಿನ ಪದರಗಳ ಅಧ್ಯಯನ ನಡೆದರೆ ಸಹಸ್ರಮಾನಗಳ ಹಿಂದಿನ ಮರಗಳ ರಾಶಿಯ ಒಂದಿಲ್ಲೊಂದು ಬಗೆಯ ಕಾರ್ಬನ್ ಕುರುಹುಗಳು ದೊರೆಯುತ್ತವೆ ಎಂಬುದು ಅವರ ವಾದ.
Related Articles
Advertisement
ಹೀಗೆ, ಇಡೀ ರಾಮಾಯಣದ್ದು ಒಂದು ತೂಕವಾದರೆ, ಆ ರಾಮಾಯಣದ ಜೀವಂತ ಸ್ಮಾರಕದಂತೆ ಉಳಿದುಕೊಂಡಿರುವ ರಾಮಸೇತುವಿನದು ಇನ್ನೊಂದೇ ತೂಕ.
-ನವೀನ ಗಂಗೋತ್ರಿ