Advertisement
ತ್ರಿದೇವಿಯರಾದ ಮಹಾಕಾಳಿ, ಮಹಾಲಕ್ಷ್ಮೀ, ಮಹಾ ಸರಸ್ವತಿಯ ರೂಪವಾಗಿರುವ ದೇವ್‌ಕಾಳಿಯನ್ನು ಮಹಾರಾಜ ರಘು ಪ್ರತಿಷ್ಠಾಪಿಸಿ ಯಾಗ ನೆರವೇರಿಸಿದನು. ಆ ಬಳಿಕವೇ ಆತನಿಗೆ ಯುದ್ಧದಲ್ಲಿ ಜಯ ಪ್ರಾಪ್ತಿಯಾಯಿತು. ಹೀಗಾಗಿ ರಘುವಂಶಸ್ಥರು ದೇವ್‌ಕಾಳಿಯನ್ನು ಕುಲದೇವತೆ ಎಂದು ಪೂಜಿಸುತ್ತಾ ಬರುತ್ತಿದ್ದಾರೆ ಎನ್ನುವ ಪ್ರತೀತಿ ಇದೆ. ಶ್ರೀರಾಮನ ಜನನದ ಬಳಿಕ ರಾಣಿ ಕೌಸಲ್ಯಾದೇವಿ ಇಡೀ ಪರಿವಾರದೊಂದಿಗೆ ಈ ದೇಗುಲಕ್ಕೆ ಬಂದು ಪೂಜೆ ಸಲ್ಲಿಸಿದ್ದರು ಎಂದೂ ಹೇಳಲಾಗುತ್ತದೆ. ರಾಮ ಮಂದಿರ ಉದ್ಘಾಟನೆಗೂ ಮುಂಚೆ ದಿನಕ್ಕೆ 50-60 ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದರು, ಈಗ ಈ ಸಂಖ್ಯೆ 500 ದಾಟಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಅಖೀಲ ಭಾರತೀಯ ಮಂಗ್ ಸಮಾಜ್‌ನ ವತಿಯಿಂದ ಭಕ್ತಾದಿಗಳು 1.8 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ಉಡುಗೊರೆ ನೀಡಿದ್ದು, ಗರ್ಭಗುಡಿ ಸ್ವತ್ಛಗೊಳಿಸಲು ಈ ಪೊರಕೆ ಬಳಸುವಂತೆ ಮನವಿ ಮಾಡಿದ್ದಾರೆ. ಬೆಳ್ಳಿ ಪೊರೆಕೆಯನ್ನು ಹೂವಿನಿಂದ ಅಲಂಕರಿಸಿ, ತಲೆ ಮೇಲೆ ಹೊತ್ತುಕೊಂಡು ಭಕ್ತರು ಮೆರವಣಿಗೆ ನಡೆಸಿದ್ದು, ಬಳಿಕ ಅದನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ.