Advertisement

ಅವತಾರಪುರುಷ ಶ್ರೀರಾಮ

12:47 PM Apr 21, 2021 | Team Udayavani |

ಒಬ್ಬ ಈಜು ಬಾರದಿರುವ ಮನುಷ್ಯ ಪ್ರವಾಹದಲ್ಲಿ ಸಿಲುಕಿದಾಗ, ಈಜಿನಲ್ಲಿ ಪರಿಣಿತನಾದವನು ಬಂದು, ಪ್ರವಾಹದಲ್ಲಿ ಸಿಲುಕಿದವನನ್ನು ಪಾರು ಮಾಡುತ್ತಾನೆ. ಪಾರು ಮಾಡಿದವನ ಪೂರ್ಣ ಕಾರ್ಯವನ್ನು ನೋಡದಿದ್ದರೆ ಇವನೂ ಒಬ್ಬ ಪ್ರವಾಹದಲ್ಲಿ ನಮ್ಮಂತೆಯೇ ಸಿಲುಕಿರುವವನು ಎಂದಷ್ಟೇ ಭಾವಿಸಬಹುದು.

Advertisement

ಹಾಗೆಯೇ ಲೌಕಿಕ ಜೀವನವನ್ನು ಮಾಡುತ್ತಿರುವ ಮನುಷ್ಯರ ಮಧ್ಯದಲ್ಲಿ ಒಬ್ಬ ಅವತಾರ ಪುರುಷನು ಜನಿಸಿದರೂ ಆತ ಸಾಮಾನ್ಯ ಜನರಿಗೆ ಉಳಿದೆಲ್ಲ ಮನುಷ್ಯರಂತೆಯೇ ಕಾಣುತ್ತಾನೆ. ಅವತಾರಪುರುಷನ ಗುಣ, ನಡವಳಿಕೆಗಳನ್ನು ಗುರುತಿಸಲು ಸಾಮಾನ್ಯ ದೃಷ್ಟಿ ಸಾಲದು. ಅವತಾರ ಪುರುಷರು ಲೌಕಿಕವಾದ ಜೀವನವನ್ನೇ ಮಾಡುತ್ತಿದ್ದರೂ, ಅವರ ಜೀವನದ ಉದ್ದೇಶ ಲೋಕಕಲ್ಯಾಣವೇ ಆಗಿರುತ್ತದೆ. ಪ್ರವಾಹದಿಂದ ಪಾರು ಮಾಡುವವನ ಉದಾಹರಣೆಯನ್ನು ಶ್ರೀರಂಗ ಮಹಾಗುರುಗಳು ಕೊಟ್ಟು, ಅವತಾರಪುರುಷರಿಗೂ- ಸಾಮಾನ್ಯ ಮನುಷ್ಯರಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ್ದಾರೆ.

ಶ್ರೀರಾಮನಲ್ಲಿ ಜಿತೇಂದ್ರಿಯತ್ವವಿತ್ತು; ಸ್ಥಿತ ಪ್ರಜ್ಞತ್ವವಿತ್ತು; ತಪಸ್ಸಿನಿಂದ ಮಾತ್ರ ಅರಿತುಕೊಳ್ಳಬಹುದಾದ ಶ್ರೀರಾಮನ ನಡೆಯು, ಅವನ ಜೀವನದ ಒಂದೊಂದು ಹೆಜ್ಜೆಯೂ ಧರ್ಮಮಯವಾಗಿತ್ತು ಎಂಬುದನ್ನು ಅರಿತು ರಾಮೋ ವಿಗ್ರಹವಾನ್‌ ಧರ್ಮಃ’ (ಮೂರ್ತಿಮತ್ತಾದ ಧರ್ಮವೇ ಶ್ರೀರಾಮನು) ಎಂದು ಮಹರ್ಷಿ ವಾಲ್ಮೀಕಿಯವರು ಕೊಂಡಾಡಿದ್ದಾರೆ. ಶ್ರೀರಾಮನು ಆದರ್ಶ ಪುತ್ರ, ಆದರ್ಶ ಪತಿ,ಆದರ್ಶ ರಾಜ ಹಾಗೂ ಆದರ್ಶ ಮಿತ್ರನಾಗಿದ್ದಾನೆ. ವಾಲ್ಮೀಕಿಗಳು ತಮ್ಮ ತಪೋದೃಷ್ಟಿಯಿಂದ ಕಂಡಶ್ರೀರಾಮನಲ್ಲಿದ್ದ ಧರ್ಮದ ನಡೆಯಿಂದ ಕೂಡಿದ ಸೂಕ್ಷ್ಮ ವಿಷಯಗಳನ್ನು ಗುರುತಿಸುವ ಮನಸ್ಸನ್ನು ಶ್ರೀರಾಮನೇ ಅನುಗ್ರಹಿಸ ಬೇಕೆಂದು ಪುಣ್ಯತಮವಾದ ಈ ಶ್ರೀರಾಮನವಮಿಯ ಶುಭ ಸಂದರ್ಭದಲ್ಲಿ ಶ್ರೀರಾಮನನ್ನೇ ಪ್ರಾರ್ಥಿಸೋಣ.

 

-ಶ್ರೀವಿದ್ಯಾ .ಸಿ. ಭಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next