Advertisement
ಮಾ. 31 ರಂದು ಸಂಜೆ ಚರ್ಚ್‌ಗೇಟ್ ಪರಿಸರದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಮುಂಬಯಿ ಆಶ್ರಯದಲ್ಲಿ ನಡೆದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಪದ್ಮನಾಭ ಶೆಟ್ಟಿ ಇವರು ಪ್ರಾಯೋಜಿತ 22 ನೇ ವಾರ್ಷಿಕ ದಿ| ರಮಾನಾಥ ಪಯ್ಯಡೆ ಸ್ಮಾರಕ ಲೀಗ್ ಫುಟ್ಬಾಲ್ ಪಂದ್ಯಾಟದ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಇವರು, ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಫುಟ್ಬಾಲ್ ಮತ್ತು ಕ್ರಿಕೆಟ್‌ಗೆ ಮಹತ್ತರವಾದ ಸ್ಥಾನಮಾನವನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ತುಳು-ಕನ್ನಡಿಗರ ಮಕ್ಕಳು ಪಡೆದುಕೊಳ್ಳಬೇಕು. ಇಲ್ಲಿ ತರಬೇತಿ ಪಡೆದ ಮಕ್ಕಳು ಇಂದು ರಾಷ್ಟ್ರೀಯ, ಅಂತಾರಾಷ್ಟಿÅàಯ ಮಟ್ಟದಲ್ಲಿ ಮಿಂಚುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಭವಿಷ್ಯದಲ್ಲೂ ಅಸೋಸಿಯೇಶನ್‌ಗೆ ನನ್ನಿಂದಾಗುವ ಎಲ್ಲಾ ರೀತಿಯ ಸಹಾಯ, ಸಹಕಾರ ಸದಾ ದೊರೆಯಲಿದೆ ಎಂದು ನುಡಿದು ವಿಜೇತ ತಂಡಗಳನ್ನು ಅಭಿನಂದಿಸಿ ಶುಭಹಾರೈಸಿದರು.
Related Articles
Advertisement
22 ನೇ ವಾರ್ಷಿಕ ದಿ| ರಮಾನಾಥ ಪಯ್ಯಡೆ ಸ್ಮಾರಕ ಲೀಗ್ ಫುಟ್ಬಾಲ್ ಪಂದ್ಯಾಟದ ಫೈನಲ್ ಪಂದ್ಯವು ವಿಜಯ ಉದಯ ತಂಡ ಹಾಗೂ ಕರ್ನಾಟಕ ನ್ಪೋರ್ಟ್ಸ್ ಕ್ಲಬ್ ನಡುವೆ ನಡೆಯಿತು. ಪಂದ್ಯದ ಮೊದಲನೇ 20 ನಿಮಿಷದಲ್ಲಿ ಆಶೀರ್ವಾದ್ ಹೆಗಡೆ ಇವರ ಗೋಲಿನಿಂದ ಉದಯ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದ್ದು, ಈ ಮುನ್ನಡೆ ಪಂದ್ಯ ಮುಗಿಯುವವರೆಗೆ ಸಾಗಿ ಉದಯ ತಂಡವು ಅಂತಿಮವಾಗಿ ಈ ಪಂದ್ಯಾವಳಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಸತ್ಯ ವಿಜಯ ತಂಡಕ್ಕೆ ಮೂರನೇ ಸ್ಥಾನ ಈ ಪಂದ್ಯಾಟದ ಮುಂಚೆ ಮೂರನೇ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ಸತ್ಯವಿಜಯ ಹಾಗೂ ಮಂಗಳೂರು ಬ್ಲೂಸ್ ತಂಡಗಳು ಸೆಣಸಾಡಿದ್ದವು. ಎರಡು ತಂಡಗಳೂ ಅಂತಿಮ ಹಂತದವರೆಗೆ 0-0 ಅಂತರದಿಂದ ಸಮಾಬಲ ಸಾಧಿಸಿದ್ದು, ಆನಂತರ ನಡೆದ ಟ್ರೈಬ್ರೇಕರ್‌ನಲ್ಲಿ ಸತ್ಯವಿಜಯ ತಂಡವು ಮಂಗಳೂರು ಬ್ಲೂಸ್ ತಂಡವನ್ನು 5-4 ಅಂತರಗಳಿಂದ ವಿಜಯ ಸಾಧಿಸಿ ಮೂರನೇ ಸ್ಥಾನವನ್ನು ಪಡೆಯಿತು. ವಿಜಯಿ ತಂಡದ ಪರವಾಗಿ ಸೆನಾರಿಯೋ, ತೇಜಸ್ ಪೂಜಾರಿ, ಮೆಲ್ವಿನ್, ಶಿವಾಂಶ್ ರಾವ್, ತುಷಾರ ಪೂಜಾರಿ ಗೋಲು ಹೊಡೆದರೆ, ಪರಾಜಿತ ತಂಡದ ಪರವಾಗಿ ಉಮೇಶ್ ಸಾಲ್ಯಾನ್, ರಿಶಿಲ್ ಶೆಟ್ಟಿ, ಆರೋನ್ ಮಜಾಡೋ, ಅಸಿಫ್ ಖಾನ್ ಇವರು ಗೋಲು ಹೊಡೆದರು. ವೈಯಕ್ತಿಕ ಪ್ರಶಸ್ತಿ ವಿಜೇತರು
ರಾಜೇಶ್ ಬಂಗೇರ ಇವರು ಉತ್ತಮ ಗೋಲ್ ಕೀಪರ್, ಅಮಿರ್ ಶೇಖ್ ಉತ್ತಮ ಡಿಪೆಂಡರ್, ಬ್ರೆಂಡನ್ ಇವರು ಉತ್ತಮ ಡಿಫೆಂಡರ್ ಹಾಗೂ ತುಷಾರ್ ಪೂಜಾರಿ ಇವರು ಉತ್ತಮ ಫಾರ್‌ವರ್ಡರ್ ಪ್ರಶಸ್ತಿಗಳಿಗೆ ಭಾಜನರಾದರು. ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕ್ರೀಡಾಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕ್ರೀಡಾಸ್ಫೂರ್ತಿಯಿಂದ ಆಡಬೇಕು ಡಾ| ಪಿ. ವಿ. ಶೆಟ್ಟಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಮತ್ತು ಪಂದ್ಯಾವಳಿಯ ಪ್ರಾಯೋಜಕ ಡಾ| ಪದ್ಮನಾಭ ವಿ. ಶೆಟ್ಟಿ ಮಾತನಾಡಿ, ಪಂದ್ಯಾವಳಿಯಲ್ಲಿ ತಂಡಗಳು ಕ್ರೀಡಾಸ್ಪೂರ್ತಿಯನ್ನು ಮೆರೆಯಬೇಕು. ಚರ್ಚೆಗೆ ಆಸ್ಪಧ ನೀಡದೆ ಒಗ್ಗಟ್ಟಿನಿಂದ ಕ್ರೀಡೆಯಲ್ಲಿ ತೊಡಗಬೇಕು. ಆಗ ಮಾತ್ರ ಆಟಗಾರರಲ್ಲಿ ಹುಮ್ಮಸ್ಸು ತುಂಬಲು ಸಾಧ್ಯವಾಗುತ್ತದೆ. ಕಳೆದ 22 ವರ್ಷಗಳಿಂದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ದಿ| ರಮಾನಾಥ ಪಯ್ಯಡೆ ಸ್ಮಾರಕ ಲೀಗ್ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಿದೆ. ಇದರ ಯಶಸ್ಸಿಗೆ ಶ್ರಮಿಸುತ್ತಿರುವ ಅಸೋಸಿಯೇಶನ್‌ನ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಕ್ರೀಡಾಭಿಮಾನಿಗಳು ಹಾಗೂ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳನ್ನು ಈ ಸಂದರ್ಭದಲ್ಲಿ ಅಭಿನಂದಿ ಸುತ್ತಿದ್ದೇನೆ ಎಂದು ನುಡಿದು ವಿಜೇತ ತಂಡಗಳನ್ನು ಅಭಿನಂದಿಸಿ ಭವಿಷ್ಯದಲ್ಲಿ ಇನ್ನಷ್ಟು ಶ್ರೇಯಸ್ಸು ಕ್ರೀಡಾಳುಗಳಿಗೆ ಲಭಿಸಲಿ ಎಂದು ಹಾರೈಸಿದರು.