ಉಡುಪಿ:ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್ ಭಾರೀ ಮುಖಭಂಗಕ್ಕೀಡಾಗಿದೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯರಾಜಕಾರಣದ ಗಮನ ಸೆಳೆದಿದ್ದ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ , ಸಚಿವ ರಮಾನಾಥ್ ರೈ ಅವರು ಸೋಲನ್ನು ಅನುಭವಿಸಿದ್ದಾರೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಮಾನಾಥ ರೈ ಅವರನ್ನು ಬಿಜೆಪಿಯ ರಾಜೇಶ್ ನಾಯ್ಕ್ ಉಳೇಪಾಡಿ ಅವರು ಭರ್ಜರಿ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿ.ಶಕುಂತಳಾ ಶೆಟ್ಟಿ ಅವರನ್ನು ಬಿಜೆಪಿಯ ಸಂಜೀವ ಮಠಂದೂರು ಸೋಲಿಸುವ ಮೂಲಕ ಜಯಗಳಿಸಿದ್ದಾರೆ.
ಇವಿಎಂ ವಿರುದ್ಧ ದೂರು ಕೊಟ್ಟ ರೈ, ಶಕುಂತಳಾ ಶೆಟ್ಟಿ
ಬಂಟ್ವಾಳ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬಿದ್ದ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳಾದ ರಮಾನಾಥ್ ರೈ ಹಾಗೂ ಶಕುಂತಳಾ ಶೆಟ್ಟಿ ಅವರು ಮತಎಣಿಕೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಇವಿಎಂ ವಿರುದ್ಧ ದೂರು ನೀಡಿದ್ದಾರೆ.