Advertisement

ಪೂಜಾರಿ ಗೆ ತಲೆ ಬಾಗಿದ ರೈ ; ಮುನಿಸು ಮರೆತು ಪ್ರಚಾರ ಸಾಧ್ಯತೆ!

01:24 PM Apr 18, 2018 | Team Udayavani |

ಮಂಗಳೂರು: ಕರಾವಳಿಯ ಕಾಂಗ್ರೆಸ್‌ ಪಾಳಯದಲ್ಲಿ ನಡೆದ ಮಹತ್ವದ ವಿದ್ಯಮಾನವೊಂದರಲ್ಲಿ  ಜಿಲ್ಲಾ ಉಸ್ತುವಾರಿ  ಸಚಿವ ರಮನಾಥ ರೈ ಅವರು ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ  ಆಶೀರ್ವಾದ ಪಡೆದಿದ್ದಾರೆ. 

Advertisement

ಬುಧವಾರ ಬೆಳಗ್ಗೆ ಕಾಂಗ್ರೆಸ್‌ ನಾಯಕರೊಂದಿಗೆ ಪೂಜಾರಿ ಅವರ ನಿವಾಸಕ್ಕೆ ತೆರಳಿ ಶಿರಬಾಗಿ  ನಮಿಸಿದ ರೈ ಅವರು ಆಶೀರ್ವಾದ ಪಡೆದರು. ಕೆಲ ಕಾಲ ಇಬ್ಬರು ನಾಯಕರು ಮಾತುಕತೆ ನಡೆಸಿದರು.

ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆ ಎಂದು ನಿರಂತರವಾಗಿ ಪೂಜಾರಿ ಅವರು ಪಕ್ಷದ ವಿರುದ್ಧವೇ ವಾಗ್ಧಾಳಿ ನಡೆಸುತ್ತಿದ್ದರು. ಆ ಬಳಿಕ ಅವರಿಗೆ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ನಿರ್ಭಂದ ಹೇರಲಾಗಿತ್ತು.

ರಮನಾಥ್‌ ರೈ ಅವರ ವಿರುದ್ಧವೂ ಹಲವು ಬಾರಿ ಬಹಿರಂಗ ಟೀಕೆ ಮಾಡಿದ್ದ ಪೂಜಾರಿ ಅವರು ಆರ್‌ಎಸ್‌ಎಸ್‌ ಮುಖಂಡ  ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರನ್ನು ಹೊಗಳಿ  ಮಕ್ಕಳ ಊಟ ಕಸಿದ ರಮನಾಥ್‌ ರೈ ರಾಕ್ಷಸ ಎಂದು ಕಿಡಿ ಕಾರಿದ್ದರು.

ಇನ್ನೊಂದೆಡೆ ರಮನಾಥ ರೈ ನನ್ನ ತಾಯಿಯನ್ನು ಕೀಳು ಶಬ್ಧ ಬಳಸಿ ನಿಂದಿಸಿದ್ದಾರೆ ಎಂದು ವೇದಿಕೆಯಲ್ಲೇ ಪೂಜಾರಿ ಕಣ್ಣೀರಿಟ್ಟಿದ್ದರು. 

Advertisement

ಪೂಜಾರಿ ಅವರ ಆಪ್ತ ಹರಿಕೃಷ್ಣ ಬಂಟ್ವಾಳ್‌ ಅವರು ಈಗಾಗಲೆ ಬಿಜೆಪಿ ಸೇರ್ಪಡೆಯಾಗಿದ್ದು ರಮನಾಥ್‌ ರೈ ವಿರುದ್ಧ ಸಮರ ಸಾರಿದ್ದಾರೆ. 

ಈ ಬಾರಿ ಬಂಟ್ವಾಳ ಕ್ಷೇತ್ರದಲ್ಲಿ ರಮನಾಥ ರೈ ಮತ್ತು ರಾಜೇಶ್‌ ನಾಯಕ್‌ ಅವರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿದೆ. 

ಕೇತ್ರದಲ್ಲಿ ಬಿಲ್ಲವ ಸಮಾಜದ ಮತದಾರರು ನಿರ್ಣಾಯಕವಾಗಿದ್ದು ಆ ಮತಗಳನ್ನು ಸೆಳೆಯಲು ಪೂಜಾರಿ ಅವರ ಪ್ರಚಾರ ಅನಿವಾರ್ಯ ಎಂಬ ಕಾರಣಕ್ಕೆ ರೈ ಅವರು ಭೇಟಿಯಾಗಿ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next