Advertisement
ದ್ವಿವಿಧ ಪೂಜಾ ಪರಂಪರೆ ಮರ್ಯಾದ ಪುರುಷೋತ್ತಮ ರಾಮನನ್ನು ಜಗದೊಡೆಯ ಎಂದೇ ಪೂಜಿಸಿದರೂ, ಅಯೋಧ್ಯೆಯಲ್ಲಿ ಆತನಿನ್ನೂ ಬಾಲಕ. ಸಹಸ್ರಾರು ವರ್ಷಗಳಿಂದಲೂ ರಾಮನನ್ನು ಬಾಲ ರೂಪದಲ್ಲೇ ಪೂಜಿಸುತ್ತಾ ಬರಲಾಗಿದೆ. ಇದಕ್ಕಾಗಿ ಅಲ್ಲಿನ ದೇಗುಲಗಳಲ್ಲಿ ಅನುಸರಿಸುವ ವಿಶೇಷ ಪೂಜಾ ವಿಧಾನವೇ ರಾಮನಂದಿ!. ಶ್ರೀ ಜಗದ್ಗುರು ರಮಾನಂದಾಚಾರ್ಯರು ಈ ಸಂಪ್ರದಾಯವನ್ನು ಆರಂಭಿಸಿದರು ಎನ್ನಲಾಗುತ್ತದೆ. ಪ್ರೌಢಾವಸ್ತೆಯ ರಾಮನ ಆರಾಧನೆಗೆ ರಾಮಾನುಜಚಾರ್ಯ ಪೂಜಾ ವಿಧಾನ ಅನುಸರಿಸುವಂತೆಯೇ ರಾಮಲಲ್ಲಾನ ಪೂಜಿಸುವ ಎಲ್ಲ ದೇಗುಲಗಳೂ ಈ ರಾಮನಂದಿ ಪೂಜಾ ವಿಧಾನವನ್ನು ಅನುಸರಿಸುತ್ತವೆ.
ರಾಮನಂದಿ ಪೂಜಾ ವಿಧಾನದ ಪ್ರಮುಖ ವೈಶಿಷ್ಟéವೇ ರಾಮನನ್ನು ನಿದ್ದೆಯಿಂದ ಎಬ್ಬಿಸುವುದಂತೆ. ದಿನಂಪ್ರತಿ ಮುಂಜಾನೆ ಮಲಗಿರುವ ಮಗುವನ್ನು ಎಬ್ಬಿಸುವಂತೆಯೇ ರಾಮಲಲ್ಲಾನ ವಿಗ್ರಹವನ್ನು ಎಚ್ಚರಗೊಳಿಸುವುದರೊಂದಿಗೆ ಈ ಪೊಜಾವಿಧಿ ಆರಂಭಗೊಳ್ಳುತ್ತದೆ. ಬಳಿಕ ಆತನಿಗೆ ಅಭ್ಯಂಜನ (ಸ್ನಾನ) ಮಾಡಿಸಿ, ಚಂದನ, ಜೇನು ತುಪ್ಪ ಲೇಪಿಸಿ, ಬಣ್ಣದ ಬಟ್ಟೆಗಳನ್ನು ತೊಡಿಸಿ, ಆತನಿಗೊಪ್ಪುವ ಅಲಂಕಾರವನ್ನು ಮಾಡಲಾಗುತ್ತದೆ. ನಂತರ ಬಾಲ ರಾಮನಿಗೆ ಏನು ಇಷ್ಟವೋ ಅದೇ ತಿನಿಸನ್ನು ನೇವೇದ್ಯ ಮಾಡಿ, ಆರತಿ ಮಾಡಲಾಗುತ್ತದೆ. ಆತನ ನಿದ್ದೆ, ಆಟ, ಸೇವೆ ಎಲ್ಲವನ್ನೂ ಮಾಡುತ್ತಾ ಬೆಳಗ್ಗಿನಿಂದ ರಾತ್ರಿಯವರೆಗೆ 16 ವಿಧಿವಿಧಾನಗಳನ್ನು ಈ ರಾಮನಂದಿ ಸಂಪ್ರದಾಯದ ಅನ್ವಯ ನೆವೇರಿಸಲಾಗುತ್ತದೆ. ರಾಮನ ಪ್ರಾಣಪ್ರತಿಷ್ಠೆ ದಿನದಂದು ಇಡೀ ಅಯೋಧ್ಯೆಯ ಎಲ್ಲ ದೇಗುಲಗಳಲ್ಲೂ ಇದೇ ಪೂಜಾ ವಿಧಿ ನಡೆಯಲಿದೆ. ಮುಸಲ್ಮಾನರಿಂದ ವಿಗ್ರಹ ಕೆತ್ತನೆ
ರಾಮ ಮಂದಿರ ಆವರಣದಲ್ಲಿ ನೆಲೆಗೊಳ್ಳಲಿರುವ ಪ್ರಭು ಶ್ರೀರಾಮನ ವಿವಿಧ ರೂಪದ ವಿಗ್ರಹಗಳ ಕೆತ್ತನೆ ಬಹುತೇಕ ಪೂರ್ಣಗೊಂಡಿವೆ. ವಿಶೇಷವಂದರೆ ಇವುಗಳನ್ನು ಕೆತ್ತನೆ ಮಾಡಿರುವುದು ಪಶ್ಚಿಮ ಬಂಗಾಳದ ಖ್ಯಾತ ಮುಸ್ಲಿಂ ಶಿಲ್ಪಿಗಳು. ಹೌದು, ಮೊಹಮ್ಮದ್ ಜಲಾಲುದ್ದೀನ್ ಹಾಗೂ ಅವರ ಮಗ ಬಿಟ್ಟು ಫೈಬರ್ ರಾಮನ ಮೂರ್ತಿಗಳನ್ನು ತಯಾರಿಸಿದ್ದಾರೆ. ಆಳೆತ್ತರ ಈ ಶಿಲ್ಪಗಳು ಮಂದಿರ ಹೊರಾಂಗಣದಲ್ಲಿದ್ದರೂ ಮಳೆ, ಬಿಸಿಲು ಎಲ್ಲ ಸಮಯದಲ್ಲಿಯೂ ಸ್ಥಿರವಾಗಿರಬಲ್ಲಂಥದ್ದಾಗಿವೆ. ಜಾಲತಾಣದಲ್ಲಿ ಮೊಹಮ್ಮದ್ ಅವರ ಕಲೆ ನೋಡಿ ಅಯೋಧ್ಯೆಯಿಂದಾ ಆರ್ಡರ್ ನೀಡಲಾಗಿದ್ದು, ಕಲೆಯೇ ನನ್ನ ಧರ್ಮ ಎಂದು ಜಲಾಲುದ್ದೀನ್ ಹೇಳಿಕೊಂಡಿದ್ದಾರೆ.
Related Articles
ಮಂದಿರ ಉದ್ಘಾಟನೆ ಸಮಾರಂಭಕ್ಕೆ ಬಳಕೆ ಮಾಡಲೆಂದು ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಿಂದ ಅರಿಶಿಣವನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ಥೈಲ್ಯಾಂಡ್‌ನಲ್ಲಿ ಅಯುತ್ಯಾ ಎಂಬ ಜಾಗವನ್ನು ಮಿನಿ ಅಯೋಧ್ಯೆ ಎಂದೇ ಗುರಿತಿಸಲಾಗುತ್ತದೆ. ಅಲ್ಲಿಂದಲೇ ಅರಿಶಿಣವನ್ನು ತರಿಸಲಾಗಿದೆ ಎಂದು ಮಂದಿರ ಟ್ರಸ್ಟ್ ತಿಳಿಸಿದೆ. ಇತ್ತ ಉ.ಪ್ರದೇಶದ ನೆರೆ ರಾಜ್ಯ ಮಧ್ಯಪ್ರದೇಶವೂ ಮಂದಿರ ಉದ್ಘಾಟನೆಗೆ ಕೈ ಜೋಡಿಸಿದ್ದು, ಅಯೋಧ್ಯೆಗೆ ತೆರಳುವವರಿಗೆ ತಿಲಕ ಇಟ್ಟು, ಎಲ್ಲ ರೀತಿಯ ಸೌಕರ್ಯ ಏರ್ಪಡಿಸಿಕೊಡುವುದಾಗಿ ಹೇಳಿದೆ.
Advertisement