Advertisement

ರಾಮನಗರ: ಭಾನುವಾರದ ಕರ್ಫ್ಯೂ ಯಶಸ್ವಿ!

07:50 AM May 25, 2020 | Lakshmi GovindaRaj |

ರಾಮನಗರ: ಭಾನುವಾರ ಸರ್ಕಾರ ವಿಧಿಸಿದ್ದ ಜನತಾ ಕರ್ಫ್ಯೂ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಜನ ಮನೆ ಬಿಟ್ಟು ಹೊರಬರಲಿಲ್ಲ. ಭಾನುವಾರ  ಬೆಳಗ್ಗೆ ಹಾಲು, ತರಕಾರಿ, ಆಹಾರ ಪದಾರ್ಥಗಳನ್ನು ಖರೀದಿಸಿದ ಜನ ಮನೆ ಸೇರಿದರು.  ಜನರಿಂದ ಗಿಜಿಗುಡುತ್ತಿದ್ದ ಎಪಿಎಂಸಿ ಮಾರುಕಟ್ಟೆ, ರೇಷ್ಮೆ ಗೂಡು ಮಾರು ಕಟ್ಟೆಗಳು, ಮಾವಿನ ಹಣ್ಣು ಮಂಡಿಗಳು, ಮದ್ಯದಂಗಡಿಗಳಿಗೆ ಬೀಗ ಜಡಿಯಲಾ ಗಿತ್ತು.

Advertisement

ಕೆಎಸ್‌ಆರ್‌ಟಿಸಿ ಬಸ್‌, ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಕನಿಷ್ಠ ಮಟ್ಟದಲ್ಲಿತ್ತು. ಪೆಟ್ರೋಲ್‌ ಬಂಕ್‌ಗಳು ಮುಚ್ಚಿದ್ದವು. ಹೋಟೆಲ್‌ಗ‌ಳು, ಟೀ ಅಂಗಡಿಗಳು ಬಂದ್‌ ಆಗಿದ್ದವು. ಔಷಧ ಅಂಗಡಿ, ದಿನಸಿ ಅಂಗಡಿ ಮುಂತಾದ  ಅಗತ್ಯ ವಸ್ತುಗಳ ಅಂಗಡಿ ಹೊರತು ಪಡಿಸಿ ಉಳಿದೆಲ್ಲ ವ್ಯಾಪಾರ ಮಳಿಗೆಗಳು ಬಂದ್‌ ಆಗಿದ್ದವು.

ಜಿಲ್ಲಾ ಕೇಂದ್ರ ರಾಮನಗರದಲ್ಲಿ ಶನಿವಾರ ಸಂಜೆ 7 ಗಂಟೆಯಿಂದಲೇ ಜನತಾ ಕರ್ಫ್ಯೂ ಜಾರಿಗೆ ಬಂದಿತ್ತು. ನಗರದ ಪ್ರಮುಖಸ್ಥಳಗಳಲ್ಲಿ  ಪೊಲೀಸರು ಪಹರೆ ನಿಯೋಜಿಸಲಾಗಿತ್ತು. ಪ್ರಮುಖ ರಸ್ತೆ ಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರು ವಾಹನ ಸಂಚಾರದ ಮೇಲೆ ನಿಗಾ ಇಟ್ಟಿದ್ದರು. ಅಗತ್ಯ ವಸ್ತುಗಳ ಖರೀದಿ ಗೆಂದು ಬಂದ ಜನತೆಗೆ ಪೊಲೀಸರು ಖರೀದಿ ನಂತರ  ತಕ್ಷಣ ಮನೆ ಸೇರುವಂತೆ ಸಲಹೆ ಕೊಡುತ್ತಿದ್ದರು.

ಮಾಸ್ಕ್ ಇಲ್ಲದೆ ವಾಹನ ಸಂಚಾರ ಮಾಡುತ್ತಿದ್ದವರಿಗೆ ಪೊಲೀಸರು ಕೊರೊನಾ ಸೋಂಕು ಪಾಠ ಹೇಳಿದರು. ಉಡಾಫೆ ಮಾಡಿದವರಿಗೆ ಗದರಿ ಎಚ್ಚರಿಸಿದರು. ಭಾನುವಾರ ಜನತಾ ಕರ್ಫ್ಯೂ  ಜಾರಿಯಾಗುವ ವಿಚಾರ ಗೊತ್ತಿದ್ದರಿಂದ ಬಹುತೇಕ ನಾಗರೀಕರು ಶನಿವಾರವೇ ಖರೀದಿ ಮುಗಿಸಿದ್ದರು. ಹೀಗಾಗಿ ಭಾನುವಾರ ಎಂದಿನ ಜನ ಸಂದಣಿಗೆ ಅವಕಾಶವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next