Advertisement

ರಾಮನಗರ ಜಿಲ್ಲಾ ನ್ಯಾಯಾಧೀಶರಿಗೆ 10 ಸಾವಿರ ದಂಡ

10:31 AM Mar 03, 2017 | |

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ ಯಡಿ ಸಕಾಲಕ್ಕೆ ಸೂಕ್ತ ಮಾಹಿತಿ ನೀಡದ ಅಪರ ಜಿಲ್ಲಾ ನ್ಯಾಯಾಧೀಶರಿಗೆ ದಂಡ ವಿಧಿಸಿರುವ ಅಪರೂಪದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

Advertisement

ಈ ಹಿಂದೆ ಲೋಕಾಯುಕ್ತ  ಉಪ ರಿಜಿಸ್ಟ್ರಾರ್‌ ಆಗಿದ್ದ ಪ್ರಸ್ತುತ ರಾಮನಗರದ 3ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾಗಿರುವ  ಗೋಪಾಲ ಕೃಷ್ಣ ರೈ ಅವರಿಗೆ 10 ಸಾವಿರ ರೂ. ದಂಡ ವಿಧಿಸಿ, ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ವೇತನದಲ್ಲಿ ತಲಾ 5 ಸಾವಿರ ರೂ. ಗಳಂತೆ ದಂಡ ಪಾವತಿಸುವಂತೆ ಆದೇಶ ನೀಡಲಾಗಿದೆ.

2015ರಲ್ಲಿ ಸಲ್ಲಿಕೆಯಾಗಿದ್ದ ಪ್ರಕರಣ ಸಂಬಂಧ ಅಂದಿನ ಲೋಕಾಯುಕ್ತ ಉಪ ರಿಜಿಸ್ಟ್ರಾರ್‌ ಆಗಿದ್ದ ನ್ಯಾ| ಗೋಪಾಲಕೃಷ್ಣ ರೈ, ಲೋಕಾಯುಕ್ತ ರಿಜಿಸ್ಟ್ರಾರ್‌ ಸೂಚನೆಯನ್ನು ನಿರಾಕರಿಸಿ ಮಾಹಿತಿ ನೀಡಿರಲಿಲ್ಲ. ಅಲ್ಲದೆ ಎರಡನೇ ಮೇಲ್ಮನವಿ ವಿಚಾರಣೆ ಸೂಚನೆಯನ್ನೂ ಪಾಲಿಸದ ಹಿನ್ನೆಲೆಯಲ್ಲಿ, ಹಾಲಿ ಜಿಲ್ಲಾ ನ್ಯಾಯಾಧೀಶ ಗೋಪಾಲಕೃಷ್ಣ  ರೈ ಅವರಿಗೆ ದಂಡ ವಿಧಿಸಿ ರಾಜ್ಯ ಮಾಹಿತಿ ಆಯುಕ್ತರಾದ ನ್ಯಾ| ಕೆ.ಎಂ. ಚಂದ್ರೇಗೌಡ ಆದೇಶಿಸಿದ್ದಾರೆ.

ಅದೇ ರೀತಿ ಅರ್ಜಿದಾರ ಆರ್‌ಟಿಐ ಕಾರ್ಯ ಕರ್ತನಿಗೆ ಲೋಕಾಯುಕ್ತ ಸಂಸ್ಥೆಯಿಂದ 15 ದಿನ ಗಳೊಳಗೆ ಮೂರು ಸಾವಿರ ರೂ. ಪರಿಹಾರ ನೀಡುವಂತೆಯೂ ಲೋಕಾಯುಕ್ತ ಆಡಳಿತ ವಿಭಾಗದ ಸಬ್‌ ರಿಜಿಸ್ಟ್ರಾರ್‌ -1 ಆನಂದ ವಾಗಡೆಯವರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಫೆ. 9 ರಂದು 2ನೇ ಮೇಲ್ಮನವಿ ಪ್ರಕರಣವನ್ನು ಇತ್ಯರ್ಥ ಗೊಳಿಸಿ ನೀಡಿರುವ ಈ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ, ಲೋಕಾಯುಕ್ತ ಸಂಸ್ಥೆ ಹೈಕೋರ್ಟ್‌ ಮೊರೆಹೋಗಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next