ರಾಮನಗರ: ಎರಡನೇ ದಿನ ಬಿಡದಿಯಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಬಿ.ವೈ.ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿ ಜೊತೆಗೂಡಿ ಹೆಜ್ಜೆ ಹಾಕಿದರು.
ಇಬ್ಬರೂ ಮುಖಂಡರು, ಬಿಜೆಪಿ-ಜೆಡಿಎಸ್ ಪ್ರಮುಖ ನಾಯಕರು ಕೈ ಕೈಹಿಡಿದು ಹೆಜ್ಜೆ ಹಾಕುವ ಮೂಲಕ ಮೈತ್ರಿ ಒಗ್ಗಟ್ಟನ್ನು ಪ್ರದರ್ಶಿಸಿದ್ದು ವಿಶೇಷವೆನಿಸಿತ್ತು.
ಪಾದಯಾತ್ರೆಯ ಹಿನ್ನೆಲೆಯಲ್ಲಿ ಬಿಡದಿಯಿಂದ ಕೆಂಗಲ್‌ವರೆಗೆ ಎರಡೂ ಪಕ್ಷದ ಭಾವುಟಗಳು ರಾರಾಜಿಸುತ್ತಿದ್ದವು. ದಾರಿಯುದ್ದಕ್ಕೂ ಬ್ಯಾನರ್‌ಗಳನ್ನು ಹಾಕಿಸಲಾಗಿತ್ತು.
ದಾರಿಯುದ್ದಕ್ಕೂ ಹೂವಿನ ಹಾರ, ತೂರಾಯಿಗಳಿಂದಲೇ ತುಂಬಿ ಹೋಗಿದ್ದ ಇಬ್ಬರು ನಾಯಕರುಗಳೊಟ್ಟಿಗೆ ಬಿಜೆಪಿ-ಜೆಡಿಎಸ್‌ನ ಶಾಸಕರು, ಎಂಎಲ್ಸಿಗಳು ನಡಿಗೆ ಹಾಕಿದರು.
ಶನಿವಾರ ರಾತ್ರಿ ಪಾದಯಾತ್ರೆಯ ಮೂಲಕ ಆಗಮಿಸಿದ ಕಾರ್ಯಕರ್ತರಿಗೆ ಮಂಜುನಾಥ ಕನ್ವೆನನ್ ಹಾಲ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇನ್ನು ಮಾಜಿ ಸಚಿವರು ಹಾಗೂ ಶಾಸಕರಿಗೆ ಈಗಲ್‌ಟನ್, ವಂಡರ್‌ಲಾ, ರವೀಶಿಂಗ್ ಸೇರಿ ವಿವಿಧ ರೆಸಾರ್ಟ್‌ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಿ.ವೈ.ವಿಜಯೇಂದ್ರ ಸೇರಿ ಕೆಲ ಪ್ರಮುಖ ಮುಖಂಡರು ಬೆಂಗಳೂರಿನ ತಮ್ಮ ನಿವಾಸಕ್ಕೆ ಭಾನುವಾರ ಬೆಳಗ್ಗೆ ಮರಳಿದರು.