ರಾಮನಗರ: ಬಿಡದಿ ಟೊಯೋಟಾ ಕಂಪನಿಯು ಅಮಾನತಾಗಿರುವ ನೌಕರರನ್ನು ವಾಪಸ್ ಪಡೆಯುವ ವಿಚಾರವನ್ನು ಪ್ರಸ್ತಾಪಿಸದೆ, ಅಮಾನತು ಪ್ರಕರಣಗಳನ್ನು ನೈಸರ್ಗಿಕ ನ್ಯಾಯ ಹಾಗೂ ಪಾರದರ್ಶಕವಾಗಿ ಶೀಘ್ರ ವಿಚಾರಣೆ ಪೂರ್ಣಗೊಳಿಸಲಾಗುವುದು ಎಂದು ಆಡಳಿತ ಮಂಡಳಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದೆ.
ಅಮಾನತುಗೊಂಡಿರುವ ನೌಕರರನ್ನು ಬೇಷರತ್ ಕೆಲಸಕ್ಕೆ ವಾಪಸ್ ಪಡೆಯಬೇಕು ಎಂದು ಟಿಕೆಎಂ ನೌಕರ ಸಂಘದ ಒತ್ತಾಯಕ್ಕೆ ಕಂಪನಿಯ ಆಡಳಿತ ಮಣಿದಿಲ್ಲ ಎಂಬುದು ಪ್ರಕಟಣೆಯಲ್ಲಿ ಸ್ಪಷ್ಟವಾಗಿದೆ. ಕೆಲಸದ ಒತ್ತಡ ವಿಚಾರದಲ್ಲಿ ಕಾರ್ಮಿಕರು ನಿರಂತರ ಒತ್ತಾಯ ಮಾಡಿದ್ದರು. ಈ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಕಂಪನಿ, ಕೆಲಸದ ಸುಧಾರಣೆ ವಿಚಾರದಲ್ಲಿ ತಾನುನಿರಂತರ ಪ್ರಕ್ರಿಯೆ ನಡೆಸುತ್ತಿರುವುದಾಗಿ, ಕಾರ್ಯಸಾಧ್ಯತೆ ಸಮಸ್ಯೆ ಪರಿಹರಿಸಲು ಸ್ಥಾವರದಲ್ಲಿ ವ್ಯವಸ್ಥೆ ಹೊಂದಿದೆ ಎಂದು ತಿಳಿಸಿದೆ.
ಫೆ.8ರಂದು ಬೆಂಗಳೂರಿನಲ್ಲಿ ಸರ್ಕಾರ ಕರೆದಿದ್ದ ಸಭೆಯಲ್ಲಿ ಟಿಕೆಎಂ ಆಡಳಿತ ಮಂಡಳಿ ಪ್ರತಿನಿಧಿಗಳುಉಪಸ್ಥಿತರಿದ್ದರು. ಈ ಎಲ್ಲಾ ವಿಚಾರ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಟಿಕೆಎಂ ಜನಕೇಂದ್ರಿತ ಕಂಪನಿಯಾಗಿದ್ದು, ನ್ಯಾಯಯುತ ಮತ್ತು ಪಾರದರ್ಶಕ ವಿಧಾನ ಅಳವಡಿಸಿ ಕೊಳ್ಳುವುದೆಂದು ನಂಬಿದೆ. ಸುರಕ್ಷತೆ, ಗುಣಮಟ್ಟ ಖಾತ್ರಿಪಡಿಸಲು ಮೂಲಭೂತ ಅಗತ್ಯ ಹೊಂದಿದೆ ಎಂಬ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದೆ.
ಟೊಯೋಟಾ ಉಪಯೋಗದ ಬಗ್ಗೆ ಮನವರಿಕೆ: 2020ರವರೆಗೆ ಟಿಕೆಎಂ ನೇರವಾಗಿ ಸುಮಾರು 9,500 ಕೋಟಿ ರೂ. ಹೂಡಿಕೆ ಮಾಡಿದೆ. ತನ್ನ ಡೀಲರ್,ಪೂರೈಕೆದಾರರು ಒಟ್ಟು ಹೂಡಿಕೆ 18 ಸಾವಿರ ಕೋಟಿರೂ. ಹಾಗೂ 6,100ಕ್ಕೂ ಹೆಚ್ಚು ಕಾರ್ಮಿಕರಿಗೆ ನೇರವಾಗಿ ಉದ್ಯೋಗ ಒದಗಿಸಲು ನೆರವಾಗಿದೆ. ತನ್ನ ಮೌಲ್ಯ ಸರಪಳಿ ಮೂಲಕ 42 ಸಾವಿರ ಜನರಿಗೆಉದ್ಯೋಗ ಒದಗಿಸಲು ನೆರವಾಗಿದೆ ಎಂದು ಅಂಕಿಅಂಶ ನೀಡಿ ಟೊಯೋಟಾ ಪರೋಕ್ಷವಾಗಿ ಸರ್ಕಾರಕ್ಕೆ ತನ್ನ ಅಸ್ತಿತ್ವದಿಂದಾಗಿರುವ ಉಪಯೋಗದ ಬಗ್ಗೆಹೇಳಿಕೆಯಲ್ಲಿ ತಿಳಿಸಿದೆ.
ಟಿಕೆಎಂ ಪಾವತಿಸಿದ ತೆರಿಗೆ 18 ಸಾವಿರ ರೂ. ಕೋಟಿ: ಟೊಯೋಟಾದ ಮೂಲಕ ಸರ್ಕಾರಕ್ಕೆ ಮತ್ತು ಸಮಾಜಕ್ಕೆ ಆರ್ಥಿಕವಾಗಿ ಆಗಿರುವ ಉಪಯೋಗದ ಬಗ್ಗೆ ಗಮನಸೆಳೆಯಲಾಗಿದೆ. ಕಳೆದೆರಡು ಹಣಕಾಸು ವರ್ಷಗಳಲ್ಲಿಟಿಕೆಎಂ ತನ್ನ ಡೀಲರ್ ಮತ್ತು ಪೂರೈಕೆ ದಾರರರೊಂದಿಗೆಪಾವತಿಸಿದ ಒಟ್ಟು ತೆರಿಗೆ 24 ಸಾವಿರ ಕೋಟಿ ರೂ. ಗಳಾಗಿದ್ದು, 18 ಸಾವಿರ ಕೋಟಿ ರೂ. ಟಿಕೆಎಂ ನಿಂದ ಬಂದದ್ದಾಗಿದೆ. ಇದರಲ್ಲಿ ಜಿಎಸ್‌ಟಿ, ಆದಾಯ, ರಸ್ತೆ, ನೋಂದಣಿ ತೆರಿಗೆ ಸೇರಿವೆ ಎಂದು ಕಂಪನಿ ತಿಳಿಸಿದೆ.
ಸಾಮಾಜಿಕ ಕಳಕಳಿಗೆ 150 ಕೋಟಿ ರೂ. ವೆಚ್ಚ : ರಾಜ್ಯದಲ್ಲಿ ಟಿಕೆಎಂ ಉಪಸ್ಥಿತಿಯಲ್ಲಿ ಉತ್ತಮ ಸಮುದಾಯ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಎರಡು ದಶಕದ ಪ್ರಯಾಣದ ಅವಿಭಾಜ್ಯಅಂಗವಾಗಿದೆ. ಆರೋಗ್ಯ ಮತ್ತು ನೈರ್ಮಲ್ಯ, ಪರಿಸರ,ಶಿಕ್ಷಣ, ಸುರಕ್ಷತೆ ಮುಂತಾದ ಸಾಮಾಜಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿ, ಮತ್ತಷ್ಟು ಬಲಪಡಿಸಲಾಗಿದೆ. 2007ರಿಂದ ಟಿಕೆಎಂ ಮಾಡಿದ ಒಟ್ಟು ಸಿಎಸ್‌ಆರ್ ವೆಚ್ಚ 150 ಕೋಟಿ ರೂ.ಗೂ ಅಧಿಕವಾಗಿದ್ದು, 18 ಲಕ್ಷ ಜನರ ಜೀವವನ್ನು ತಲುಪಲು ಸಹಾಯವಾಗುತ್ತದೆ ಎಂದು ಅಂದಾಜಿಸಿದೆ.
ತಾನೊಂದು ಜವಾಬ್ದಾರಿಯುತ ಮತ್ತು ಕಾನೂನು ಬದ್ಧ ಕಾರ್ಪೋರೇಟ್ ಪ್ರಜೆಯಾಗಿ ಕಳೆದೆರಡು ದಶಕದಿಂದ ನಿರಂತರವಾಗಿ ಪರಸರ, ಸಿಎಸ್‌ಆರ್ ಉಪಕ್ರಮಗಳ ಮೂಲಕ ಸಮಾಜಕ್ಕೆ ಉದ್ಯೋಗ ಮತ್ತು ಆದಾಯ ಒದಗಿಸುವ ಶಕ್ತಿಯುತವಾದ ಸಂಸ್ಥೆಯಾಗಿದೆ. ಕಾರ್ಮಿಕರೊಂದಿಗಿನ ಬಿಕ್ಕಟ್ಟನಿಲ್ಲಿ ತನ್ನನ್ನು ಸರ್ಕಾರ ಮತ್ತು ಸಮಾಜ ಕಡೆಗಣಿಸುವಂತಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ.