Advertisement

ರಾಮನಗರ: ತಾಲ್ಲೂಕು ಪಂಚಾಯತ್‌ ಅಧ್ಯಕ್ಷ ಸ್ಥಾನಕ್ಕೆ ಭದ್ರಯ್ಯ ಅವಿರೋಧ ಆಯ್ಕೆ

02:27 PM May 20, 2020 | sudhir |

ರಾಮನಗರ :ತಾಲ್ಲೂಕು ಪಂಚಾಯಿತಿ‌ ಅಧ್ಯಕ್ಷ ಸ್ಥಾನಕ್ಕೆ ಚನ್ನಮಾನಹಳ್ಳಿ ತಾ.ಪಂ ಕ್ಷೇತ್ರದ‌ ಭದ್ರಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಇಂದು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಅವರು ಭದ್ರಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

ಜಡಿಎಸ್ ಚಿಹ್ನೆಯಲ್ಲಿ ಆಯ್ಕೆಯಾಗಿರುವ ಇವರು ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲದಲ್ಲಿ ಅಧ್ಯಕ್ಷ ಸ್ಥಾನಗಳಿಸಿಕೊಂಡಿದ್ದಾರೆ.

ಜೆಡಿಎಸ್ ೮, ಕಾಂಗ್ರೆಸ್ ೬ ಸದಸ್ಯ ಬಲದ ತಾಪಂನಲ್ಲಿ ಕಾಂಗ್ರೇಸ್ ರಾಜಕೀಯದಾಟದಲ್ಲಿ ಜೆಡಿಎಸ್ ನಾಲ್ವರು ಸದಸ್ಯರು ಕಾಂಗ್ರೇಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ಸದಸ್ಯರುಗಳಾದ ಲಕ್ಷ್ಮಿಕಾಂತ್, ಪ್ರಕಾಶ್, ಪದ್ಮ ರಾಜಣ್ಣ ಅವರು ಚುನಾವಣಾ ಪ್ರಕ್ರಿಯೆಗೆ ಗೈರಾಗಿದ್ದರು. ಒಟ್ಟು 11 ಸದ್ಯರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಬನ್ನಿಕುಪ್ಪೆ (ಬಿ) ಕ್ಷೇತ್ರದ ಸದಸ್ಯ ಗಾಣಕಲ್ ನಟರಾಜು ಅವರ‌ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ‌ ಇಂದು ಚುನಾವಣೆ ನಡೆಯಿತು.

Advertisement

ಎಂ.ಎಲ್.ಸಿ ಸಿ.ಎಂ ಲಿಂಗಪ್ಪ, ಮಾಜಿ ಶಾಸಕ , ಎಚ್.ಸಿ.ಬಾಲಕೃಷ್ಣ, ಜಿ.ಪಂ‌ ಮಾಜಿ ಅಧ್ಯಕ್ಷ‌ ಇಕ್ಬಾಲ್‌ ಹುಸೇನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಬ್ಲಾಕ್ ಅಧ್ಯಕ್ಷರಾದ ಎ.ಬಿ.ಚೇತನ್ ಕುಮಾರ್, ವಿ.ಎಚ್.ರಾಜು, ಎಲ್.ಚಂದ್ರಶೇಖರ್, ಮಾಜಿ ಅಧ್ಯಕ್ಷರಾದ ಗಾಣಕಲ್ ನಟರಾಜು, ಮಹದೇವಯ್ಯ, ತಾಪಂ ಉಪಾಧ್ಯಕ್ಷೆ ರಮಾಮಣಿ, ಮಾಜಿ ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ವರಲಕ್ಷ್ಮಿ, ಚಂದ್ರಕಲಾ, ರೇಣುಕಾ ಪ್ರಸಾದ್ ಸೇರಿದಂತೆ ಕಾಂಗ್ರೆಸ್ ಸದಸ್ಯರು , ಪಕ್ಷದ ಮುಖಂಡರು‌ ಮತ್ತು ಕಾರ್ಯರ್ತರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ಚುನಾವಣೆಗೂ ಮುನ್ನ ಕಾಂಗ್ರೇಸ್‌‌ ಜಿಲ್ಲಾ ಕಚೇರಿಯಲ್ಲಿ ಭದ್ರಯ್ಯ, ಜಗದೀಶ್ ಮತ್ತು ಮಹದೇವಯ್ಯ ತಾವು ಇನ್ಮುಂದೆ ಕಾಂಗ್ರೆಸ್ ಸದಸ್ಯರು ಎಂದು ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next