Advertisement

Arrested: ಲಾಂಗ್ ಹಿಡಿದು ಅಟ್ಟಾಡಿಸಿದ ಪುಡಿ ರೌಡಿಗಳ ಹೆಡೆಮುರಿ ಕಟ್ಟಿದ ಐಜೂರು ಪೊಲೀಸರು..!

10:16 AM Mar 06, 2024 | Team Udayavani |

ರಾಮನಗರ: ಯುವಕನ ಮೇಲೆ ಹಲ್ಲೆಗೆ ಮುಂದಾದ ಪುಡಿ ರೌಡಿಗಳ ಹೆಡೆಮುರಿ ಕಟ್ಟುವಲ್ಲಿ ಐಜೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಮಾ. 1 ರಂದು ಮಹಾಲಿಂಗ ಎಂಬಾತನನ್ನ ಪುಡಿ ರೌಡಿಗಳ ಗುಂಪು ಲಾಂಗ್ ಹಿಡಿದು ಅಟ್ಟಾಡಿಸಿದ್ದರು ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ವಾಗುತ್ತಿದ್ದಂತೆ ಎಚ್ಚೆತ್ತ ಐಜೂರು ಪೊಲೀಸರು ನಾಲ್ವರು ರೌಡಿಗಳನ್ನು ಬಂಧಿಸಿದ್ದಾರೆ.

ಪಿಎಸ್ಐ ತನ್ವೀರ್ ಹುಸೇನ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪುಡಿ ರೌಡಿಗಳನ್ನ ಖಾಕಿ ಪಡೆ ಬಂಧಿಸಿದೆ, ಮಹಾಲಿಂಗ ಎಂಬಾತನನ್ನು ದುಷ್ಕರ್ಮಿಗಳ ಗುಂಪು ಲಾಂಗ್ ಹಿಡಿದು ಅಟ್ಟಾಡಿಸಿದೆ ಈ ವೇಳೆ ಮನೆಯಿಂದ ಓಡಿ ಹೋಗಿ ಎಸ್ಕೇಪ್ ಆಗಿದ್ದ ಮಾಹಾಲಿಂಗ. ಪುಡಿರೌಡಿಗಳು ಅಟ್ಟಾಡಿಸಿರೋ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೂಡಲೇ ಪಿಎಸ್ಐ ತನ್ವೀರ್ ಹುಸೇನ್ ತಂಡ ರೌಡಿಗಳ ಅಡ್ಡೆಗೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದೆ, ಬೆಳಗ್ಗೆಯಿಂದಲೂ ಐಜೂರು ಠಾಣೆಯಲ್ಲಿ ಆರೋಪಿಗಳನ್ನ ವಿಚಾರಣೆ ಮಾಡುತ್ತಿರೋ ಪೊಲೀಸರು.
ಮಧ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ.

ಇದನ್ನೂ ಓದಿ: ಕೇವಲ ಇಬ್ಬರು ಮೂವರಲ್ಲ… ಬಿಜೆಪಿಯಿಂದ ಅನೇಕ ಮಂದಿ ಕಾಂಗ್ರೆಸ್ ಗೆ ಬರಲಿದ್ದಾರೆ: ಡಿಕೆಶಿ

Advertisement

Udayavani is now on Telegram. Click here to join our channel and stay updated with the latest news.

Next