Advertisement

ವೈದ್ಯರಂತೆ ಫಾರ್ಮಾಸಿಸ್ಟ್‌ಗಳ ಪಾತ್ರ ಮಹತ್ತರವಾದುದು

07:14 PM Oct 03, 2019 | Team Udayavani |

ರಾಮನಗರ: ಆರೋಗ್ಯ ಕ್ಷೇತ್ರದಲ್ಲಿ ಫಾರ್ಮಾಸಿಸ್ಟ್‌ ಪಾತ್ರ ಅತ್ಯಂತ ಪ್ರಮುಖ ಎಂದು ನಗರದ ಎಂಎಂಯು ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಮೊಹಮದ್‌ ಖಲೀಲ್‌ ಹೇಳಿದರು.

Advertisement

ನಗರದ ಶ್ರೀ ರಾಮದೇವರ ಬೆಟ್ಟದ ರಸ್ತೆಯ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಫಾರ್ಮಾಸಿಸ್ಟ್‌ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು, ನರ್ಸ್‌ಗಳ ಹೊಣೆಗಾರಿಕೆ ಎಷ್ಟು ಪ್ರಮುಖವೋ ಫಾರ್ಮಾಸಿಸ್ಟ್‌ ಗಳ ಹೊಣೆಯೂ ಅಷ್ಟೇ ಮಹತ್ವ ಪಡೆದಿದೆ ಎಂದರು.

ಫಾರ್ಮಾಸಿಸ್ಟ್‌ ಅಂದರೆ ಕೇವಲ ಔಷಧ ಕೊಡುವ ಕಾಂಪೌಂಡರ್‌ ಅಲ್ಲ. ಔಷಧಗಳ ಬಗ್ಗೆ ತಿಳಿವಳಿಕೆ ಇರುವ ಅರ್ಹ ವ್ಯಕ್ತಿ. ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪವಿತ್ರವಾದ ವೃತ್ತಿಯಾಗಿದ್ದು ಫಾರ್ಮಾಸಿಸ್ಟ್‌ಗಳಿಲ್ಲದೆ ವೈದ್ಯಕೀಯ ಕ್ಷೇತ್ರ ಅಪೂರ್ಣ ಎಂದರು.

ಆರೋಗ್ಯ ಅರಿವು:ಔಷಧ ತಯಾರಿಕೆ, ಸಂಗ್ರಹ, ವಿತರಣೆ ಮತ್ತು ಮಾರಾಟ ವಿಷಯಗಳಲ್ಲಿ ನಿರ್ವಹಣೆ ಹೊಣೆಯನ್ನು ಫಾರ್ಮಾಸಿಸ್ಟ್‌ಗಳು ನಾಗರಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ವಹಿಸಬೇಕಾದ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

Advertisement

ವಿಶ್ವ ಫಾರ್ಮಾಸಿಸ್ಟ್‌ಗಳ ದಿನವನ್ನು ನಿರಂತರವಾಗಿ ಆಚರಿಸಲಾಗುತ್ತಿದೆ. ಈ ವರ್ಷ ಎಲ್ಲರಿಗೂ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ಚರ್ಚಾ ಸ್ಪರ್ಧೆ:ಫಾರ್ಮಾಸಿಸ್ಟ್‌ ದಿನದ ಮಹತ್ವ ಮತ್ತು ಸಮಾಜದಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರದ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ನಡೆಯಿತು. ಚರ್ಚೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ತಾವು ಭವಿಷ್ಯದಲ್ಲಿ ಸಮಾಜದಲ್ಲಿ ನಿರ್ವಹಿಸಬೇಕಾದ ಪಾತ್ರವನ್ನು ಸ್ಪಷ್ಟ ತಿಳಿವಳಿಕೆ ಮೂಡಿಸಿಕೊಂಡಿದ್ದು ವ್ಯಕ್ತವಾಯಿತು.

ಜಾಗೃತಿ ಜಾಥಾ: ಎಂಎಂಯು ಫಾರ್ಮಾಸಿ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ನಾಗರಿಕರ ಆರೋಗ್ಯ ಸುಧಾರಣೆಯಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸಿದರು. “ಸ್ವಯಂ ವೈದ್ಯ ಪದ್ದತಿ ಬೇಡ’, “ಎಲ್ಲರಿಗೂ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಧಕ್ಕೆ ತಾವು ಬದ್ದ” ಎಂಬಿತ್ಯಾದಿ ಘೋಷಣೆಗಳೊಂದಿಗೆ ನಾಗರಿಕರ ಗಮನ ಸೆಳೆದರು.

ಕಾಲೇಜಿನ ಆವರಣದಿಂದ ಆರಂಭವಾದ ಜಾಥಾ, ಎಂ.ಜಿ.ರಸ್ತೆ, ಮುಖ್ಯ ರಸ್ತೆ ಮೂಲಕ ಸಾಗಿತು. ಡಿ.ಫಾರ್ಮ, ಬಿ.ಫಾರ್ಮದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಕಾಲೇಜಿನ ಉಪನ್ಯಾಸಕರಾದ ಡಾ.ನಿರ್ಮಲ್‌ ಹಾವಣ್ಣನವರ್‌, ಡಾ.ವಸೀಹಾ ಬಾನು, ಡಾ.ವಜೀ ಅಶ್ರಫ್ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next