ರಾಮನಗರ: ತಾಲೂಕಿನ ಬಿಡದಿ ಬಳಿಯಕೇತಗಾನಹಳ್ಳಿಯ ಬಳಿಯ ತೋಟಗಳಲ್ಲಿಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು,ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ಕೇತಗಾನಹಳ್ಳಿ ಬಿಡದಿ ಪಟ್ಟಣದ ಒಂದು ಭಾಗ.
ಹೀಗಾಗಿಯೇ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೇತಗಾನಹಳ್ಳಿಯ ತೋಟಗಳುಮತ್ತು ಬಾಲಾಜಿ ಲೇಔಟ್‌ಬಳಿ ಇರುವ ತೋಟಗಳಲ್ಲಿ ಎರಡು ಆನೆಗಳು ಅಡ್ಡಾಡುತ್ತಿರುವುದನ್ನು ಭಾನುವಾರ ಬೆಳಗ್ಗೆ ಗ್ರಾಮಸ್ಥರು ಗಮನಿಸಿದ್ದಾರೆ. ಇಲ್ಲಿ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣಅವರಿಗೆ ಸೇರಿದ ತೋಟವಿದೆ.
ಆನೆಗಳು ಇಲ್ಲೇಇದೆ ಎಂದು ಆ ಭಾಗದ ನಾಗರಿಕರು ಪ್ರತಿಕ್ರಿಯಿಸಿದ್ದಾರೆ.ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ, ಜನರಕೂಗಾಟ, ಚೀರಾಟದಿಂದಾಗಿ ಆನೆಗಳುಬಾಲಾಜಿ ಲೇಔಟ್‌ಬಳಿಯ ನೀಲಗಿರಿ ತೋಪಿನಲ್ಲಿ ಅಡಗಿವೆ ಎಂದು ಹೇಳಲಾಗಿದೆ. ಅರಣ್ಯಇಲಾಖೆಯ ಸಿಬ್ಬಂದಿ ಆನೆಗಳು ಅಲ್ಲಿಂದಹೊರ ಬರದಂತೆ ಎಚ್ಚರವಹಿಸಿದ್ದಾರೆ.
ಕಾಡಿಗೆ ಆನೆಗಳನ್ನು ಅಟ್ಟಲು ತೀರ್ಮಾನ:ರಾಮನಗರ ವಲಯ ಅರಣ್ಯಾಧಿಕಾರಿಕಿರಣ್‌ಕುಮಾರ್ ಅವರ ಮಾರ್ಗದರ್ಶನದಲ್ಲಿಬಿಡದಿ ಉಪ ವಲಯ ಅರಣ್ಯಾಧಿಕಾರಿವೆಂಕಟೇಶ್, ಅರಣ್ಯ ರಕ್ಷಕರಾದ ನಾರಾಯಣ,ಚಂದ್ರು, ಶ್ರೀನಿವಾಸ, ರವಿ, ಶಾಂತಕುಮಾರ್‌ಮತ್ತು ಸಿಬ್ಬಂದಿ ರಾತ್ರಿ ಕಾರ್ಯಾಚರಣೆ ನಡೆಸಿಕಾಡಿನ ಕಡೆಗೆ ಆನೆಗಳನ್ನು ಅಟ್ಟಲು ನಿರ್ಧರಿಸಿದ್ದಾರೆ. ಆನೆಗಳನ್ನು ಹುಲ್ತಾರ್ ಅರಣ್ಯದಮೂಲಕ ಸಾವನದುರ್ಗ ಅರಣ್ಯದ ಕಡೆಗೆಅಥವಾಕಗ್ಗಲೀಪುರದ ಮೂಲಕ ಬನ್ನೇರುಘಟ್ಟಅರಣ್ಯದ ಕಡೆಗೆ ತೆರಳುವಂತೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಲಿದ್ದಾರೆ.
ಆನೆಗಳು ಬಹುಶಃ ಬನ್ನೇರುಘಟ್ಟ ರಾಷ್ಟ್ರೀಯಅರಣ್ಯ ಪ್ರದೇಶದಿಂದ ಕಗ್ಗಲೀಪುರ, ಹೆಜ್ಜಾಲಮೂಲಕ ಬಂದಿರಬಹುದು ಎಂದು ತಿಳಿದುಬಂದಿದೆ.ಕೇತಗಾನಹಳ್ಳಿ ಸಮೀಪದ ತೋಟದಲ್ಲಿ ಆನೆಗಳು ಇರುವ ಸುದ್ದಿ ಕಾಳಿYàಚಿನಂತೆ ಹರಡಿದ್ದರಿಂದ ಜನಸಾಗರ ನೆರೆದಿತ್ತು. ಸ್ಥಳದಲ್ಲಿ ಅರಣ್ಯಇಲಾಖೆಯ ಡಿಸಿಎಫ್ ದೇವರಾಜು, ವಲಯಅರಣ್ಯಾಧಿಕಾರಿ ಕಿರಣ್‌ಕುಮಾರ್ ಮತ್ತುಸಿಬ್ಬಂದಿ, ಪೊಲೀಸರು ಮೊಕ್ಕಾಂ ಹೂಡಿದ್ದಾರೆ.