Advertisement
ಈ ಸಂಬಂಧ ನಗರದಲ್ಲಿ ಕರ್ನಾಟಕ ರೈತ ಸಂಘಹಾಗೂ ಹಸಿರು ಸೇನೆಯ ಜಿಲ್ಲಾ ಘಟಕ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಅರಣ್ಯ ಇಲಾಖೆಯ ವಿರುದ್ಧ ಗುಡುಗಿದರು.
Related Articles
Advertisement
ಮಾನದಂಡದ ಪ್ರಕಾರ ಪರಿಹಾರವಿಲ್ಲ: ಕಾಡುಪ್ರಾಣಿಗಳ ದಾಳಿಯಿಂದಾದ ನಷ್ಟಕ್ಕೆ ಅರಣ್ಯ ಇಲಾಖೆಯೇ ನಷ್ಟ ಪರಿಹಾರ ಕೊಡಬೇಕಾಗಿದೆ. ಆದರೆ,ಇಲಾಖೆಯ ಮಾನದಂಡದ ಪ್ರಕಾರವು ಅಧಿಕಾರಿಗಳು ನಷ್ಟ ಭರಿಸಿಕೊಡುತ್ತಿಲ್ಲ, ತೆಂಗಿನ ಮರವೊಂದನ್ನು ಆನೆ ಉರುಳಿಸಿ, ಹೋದರೆ ರೈತನಿಗೆಸಿಗುವುದು 1500 ರೂ, ಮಾವಿನ ಮರಕ್ಕೆ 1200ರೂ ಈ ಪರಿಹಾರ ಸಾಲದಾಗಿದೆ.ಕಾಡು ಪ್ರಾಣಿಗಳದಾಳಿಯಿಂದ ರೈತ ಮೃತಪಟ್ಟರೆ ಅರಣ್ಯ ಇಲಾಖೆ 5ಲಕ್ಷ ರೂ ಪರಿಹಾರ ಕೊಡುತ್ತದೆ. ಒಬ್ಬ ರೈತನ ಬೆಲೆಕೇವ 5 ಲಕ್ಷ ರೂ ಮಾತ್ರವೇನಾ ಎಂದು ಪ್ರಶ್ನಿಸಿದರು. ಪ್ರತಿಭಟನೆಯ ವೇಳೆ ರೈತನ ಬೆಳೆ ಹಾನಿಗೆಕನಿಷ್ಠ5 ಪಟ್ಟು ಹೆಚ್ಚಿನ ಪರಿಹಾರವನ್ನುಕೊಡಬೇಕುಎಂದು ಆಗ್ರಹಿಸಲಾಗುವುದು ಎಂದರು.
ಸಂಸತ್ ಭವನದ ಮುಂಭಾಗ ಪ್ರತಿಭಟನೆ:ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳದಿದ್ದರೆ ತಮ್ಮಸಂಘಟನೆ ದೆಹಲಿಯಲ್ಲಿ ಸಂಸತ್ ಭವನದಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.
ಜಿಲ್ಲಾ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗಮ್ಮ, ಚನ್ನಪಟ್ಟಣ ಘಟಕದ ಅಧ್ಯಕ್ಷರಮೇಶ್, ರಾಮನಗರ ತಾಲೂಕು ಘಟಕದಅಧ್ಯಕ್ಷ ಸೀಬಕಟ್ಟೆಕೃಷ್ಣಪ್ಪ, ಮಾಗಡಿ ಘಟಕದ ಅಧ್ಯಕ್ಷಗೋವಿಂದರಾಜು, ಕನಕಪುರ ಘಟಕದ ಅಧ್ಯಕ್ಷಅನಂತರಾಮ, ಸಂಘಟನಾ ಕಾರ್ಯದರ್ಶಿ ಪಾದರಹಳ್ಳಿ ಕೃಷ್ಣಪ್ಪ, ಚನ್ನಪಟ್ಟಣದ ರೈತ ಮುಖಂಡಮಲ್ಲಿಕಾರ್ಜುನ, ರೈತ ಸಂಘದ ಪ್ರಮುಖರಾದವಿ.ಎಸ್.ಸುಜೀವನ್ ಕುಮಾರ್, ರಾಮಣ್ಣ, ದೇವರಾಜ್, ಕುಳ್ಳೇಗೌಡ, ಭಾರತೀಯ ವಿದ್ಯಾರ್ಥಿ ಪರಿಷತ್‌ನಕುಮಾರ್ ಭಾಗವಹಿಸಿದ್ದರು.