ರಾಮನಗರ: ಕ್ಷೇತ್ರದ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಸರ್ಕಾರದ ಹಂತದಲ್ಲಿ ಒತ್ತಡ ಹೇರಿ ಶಕ್ತಿಮೀರಿ ಅನುದಾನ ತಂದಿದ್ದೇವೆ ಎಂದು ಶಾಸಕಿಅನಿತಾ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಹುಣಸನಹಳ್ಳಿ ಗ್ರಾಮ ಪಂಚಾಯ್ತಿವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮೀಣಾಭಿವೃದ್ಧಿಹಾಗೂಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗೆಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆ, ಗಣಿ ಮತ್ತು ಭೂ-ವಿಜಾnನ ಇಲಾಖೆ ಅನುದಾನದಡಿ ಹುಣಸನಹಳ್ಳಿಗ್ರಾಪಂ ವ್ಯಾಪ್ತಿಯ ಅಚ್ಚಲು, ಮೊಟ್ಟೆದೊಡ್ಡಿ, ಕೆ.ಪಿ.ದೊಡ್ಡಿ, ಮೂಡ್ಲಳ್ಳಿದೊಡ್ಡಿ, ಹುಣಸನಹಳ್ಳಿ,ದಾಸೇಗೌಡನದೊಡ್ಡಿ, ತುಂಬೇನಹಳ್ಳಿ ಗ್ರಾಮಗಳಲ್ಲಿಚಾಲನೆ ನೀಡಲಾಗಿದೆ.
ಹಂತ ಹಂತವಾಗಿ ಮತ್ತಷ್ಟುಅಭಿವೃದ್ಧಿ ಕೈಗೊಳ್ಳಲಾಗುತ್ತದೆ, ಕೋವಿಡ್ ಕಾರಣಕಾಮಗಾರಿಗಳ ಆರಂಭಕ್ಕೆ ವಿಳಂಬವಾಗಿದೆಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್,ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಬಿಡಿಸಿಸಿಬ್ಯಾಂಕ್ ಮಾಜಿ ನಿರ್ದೇಶಕ ಪಿ. ಅಶ್ವಥ್, ತಾಪಂಸದಸ್ಯ ಲಕ್ಷ್ಮೀಕಾಂತ್, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಪಾಂಡುರಂಗ, ಗ್ರಾಪಂ ಮಾಜಿ ಅಧ್ಯಕ್ಷ ಅಂಕನಹಳ್ಳಿಎಸ್. ಮಹೇಶ್, ಹುಣಸನಹಳ್ಳಿ ಶಿವರಾಜು,ತುಂಬೇನಹಳ್ಳಿ ಮರಿಲಿಂಗಯ್ಯ, ಪ್ರಧಾನಕಾರ್ಯದರ್ಶಿ ಹುಚ್ಚಮ್ಮನದೊಡ್ಡಿ ಲೋಕೇಶ್,ನಂಜಾಪುರ ಚಲುವರಾಜು, ಮುಖಂಡರಾದಯಕ್ಷರಾಜು, ರೇವಣ್ಣ, ಕೃಷ್ಣಪ್ಪ, ದಾಸರಹಳ್ಳಿಮಹೇಶ್, ಶಂಕರ್‌ರಾವ್, ಮೊಟ್ಟೆದೊಡ್ಡಿ ಮಹೇಶ್,ಗೌಡಯ್ಯನದೊಡ್ಡಿ ಜಿ.ಪಿ. ಗಿರೀಶ್ ವಾಸು,ಪಾರ್ವತಮ್ಮ,ಬೈರೇಗೌಡ,ಪ್ರಕಾಶ್,ಗೋಂದರಾಜು,ವೆಂಕಟರಾಜು, ಗೋಪಿ, ಮಂಜುನಾಥ್‌ಹಾಜರಿದ್ದರು