Advertisement

ನಮ್ಮಕುಟುಂಬದ ಸಂಸ್ಕೃತಿ ಜನತೆಗೆ ಅರ್ಥವಾಗಿದೆ: ನಿಖೀಲ್‌

06:57 PM Jul 08, 2021 | Team Udayavani |

ರಾಮನಗರ: ನಮ್ಮ ಕುಟುಂಬದ ಸಂಸ್ಕೃತಿಯನ್ನುರಾಜ್ಯದ ಜನರು ಅರ್ಥ ಮಾಡಿಕೊಂಡಿದ್ದಾರೆ, ಬೇರೆಯವರಿಂದ ಕಲಿಯುವ ಅಗತ್ಯವಿಲ್ಲ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ಮಂಡ್ಯ ಸಂಸದೆ ಸುಮಲತಾ ವಿರುದ್ಧ ಕಿಡಿಕಾರಿದರು.

Advertisement

ಇಲ್ಲಿನ ಜಾನಪದ ಲೋಕದಲ್ಲಿ ಆಯೋಜಿಸಿದ್ದಕಾರ್ಯಕ್ರಮದಲ್ಲಿ ಜಾನಪದ ಕಲಾವಿದವರಿಗೆಆಹಾರ ಕಿಟ್‌ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಧ್ಯಮಗಳಲ್ಲಿ ಸಂಸದೆ ಸುಮಲತಾ ಅವರಹೇಳಿಕೆಗಳನ್ನು ತಾವು ಗಮನಿಸಿರುವುದಾಗಿ ತಿಳಿಸಿದರು.

ಅವರಿಂದ ತಮ್ಮ ಕುಟುಂಬ ಏನನ್ನು ಕಲಿಯಬೇಕಿಲ್ಲ.ಎಚ್‌.ಡಿ.ಕುಮಾರಸ್ವಾಮಿಯವರ ಹೇಳಿಕೆಯನ್ನೇ ಅಸ್ತ್ರವನ್ನಾಗಿರಿಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಉದ್ದೇಶ ತಮಗೆ ಕಾಣುತ್ತಿದೆ. ಸಂಸದರಾಗಿ ಅವರು ಹೊಣೆ ಅರಿತುವರ್ತಿಸಬೇಕು ಎಂದರು.

ಅಭ್ಯಂತರವೇನಿಲ್ಲ: ಕೆ.ಆರ್‌.ಎಸ್‌ ಡ್ಯಾಂಗೆ 100ವರ್ಷಗಳ ಇತಿಹಾಸವಿದೆ. ಡ್ಯಾಂ ಬಳಿ ಯಾರೇಅಕ್ರಮ ಗಣಿಗಾರಿಕೆ ನಡೆಸಿದರೂ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ತಮ್ಮ ಕುಟುಂಬ ಯಾರಜತೆಗೂ ಕೈ ಜೋಡಿಸಿಲ್ಲ. ಸಂಸದೆ ಸುಮಲತಾ ಮಂಡ್ಯಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗಳ ವೀಕ್ಷಣೆಗೆ ತೆರಳಿದ್ದಾರೆ.

ವೀಕ್ಷಣೆ ಮಾಡಿಕೊಂಡು ಬರಲಿ. ಆದರೆ,ಜನರಲ್ಲಿ ಗೊಂದಲ ಮೂಡಿಸದಿರಲಿ, ವೈಯಕ್ತಿಕವಾಗಿಯಾರ ಮೇಲೂ ದ್ವೇಷ ಸಾಧಿಸುವ ಮನಸ್ಥಿತಿಯಲ್ಲಿ ಮಾತನಾಡಬಾರದು. ಇದು ಸಂಸದರಿಗೆ ಶೋಭೆ ತರುವುದಿಲ್ಲ. ಮಂಡ್ಯ ಜನತೆ ಸುಮಲತಾ ಅವರನ್ನು5ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಜನರ ಕೆಲಸಮಾಡಲೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next