Advertisement

ಸಿಎಸ್‌ಆರ್‌ ನಿಧಿಯಲ್ಲಿ ಅಂಗನವಾಡಿ ನಿರ್ಮಾಣ

06:13 PM Jun 23, 2021 | Team Udayavani |

ರಾಮನಗರ: ಕೈಗಾರಿಕೆಗಳ ಸಿ.ಎಸ್‌.ಆರ್‌.ನಿಧಿಯ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಬಿಡದಿ ಭಾಗದಲ್ಲಿ ಬಾಷ್‌ ಸಂಸ್ಥೆ ಮಕ್ಕಳಕಲಿಕಾ ಸಾಮರ್ಥ್ಯ ಹೆಚ್ಚಿಸುವ ಅಂಗನವಾಡಿಕೇಂದ್ರಗಳನ್ನು ನಿರ್ಮಾಣ ಮಾಡಿಕೊಟ್ಟಿದೆ ಎಂದು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ತಾಲೂಕಿನ ಬಿಡದಿ ಪುರಸಭಾ ವ್ಯಾಪ್ತಿಯಕೆಂಚನಕುಪ್ಪೆ ಗ್ರಾಮ ಮತ್ತು ತಮ್ಮಣ್ಣನದ ದೊಡ್ಡಿಗ್ರಾಮಗಳ ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣನೀಡುವುದಲ್ಲದೆ, ಈ ಕೇಂದ್ರಗಳ ಮೂಲಕ ಆಭಾಗದ ಮಕ್ಕಳು, ಗರ್ಭಿಣಿಯರು,ಬಾಣಂತಿಯರಿಗೆ ಪೌಷ್ಟಿಕ ಆಹಾರದ ಪೂರೈಕೆಯೂ ಆಗುತ್ತಿದೆ. ಗ್ರಾಮೀಣ ಭಾಗದಲ್ಲಿಅಂಗನವಾಡಿ ಕೇಂದ್ರಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.

ಇಂತಹ ಮಹತ್ವ ಇರುವಕೇಂದ್ರಗಳಿಗೆ ಕೈಗಾರಿಕೆಗಳು ಸುಸಜ್ಜಿತ ಕಟ್ಟಡಗಳನ್ನುನಿರ್ಮಿಸುತ್ತಿವೆ ಎಂದರು.ಶೌಚಾಲಯಗಳ ನಿಮಾರ್ಣ: ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಮತ್ತು ಅಲ್ಲಿಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸರ್ಕಾರದಗಮನ ಸೆಳೆಯಲಾಗಿತ್ತು. ಸರ್ಕಾರ ಶೌಚಾಲಯಗಳ ನಿಮಾರ್ಣಕ್ಕೆ ಮುಂದಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next