ರಾಮನಗರ: ಮೀಸಲಾತಿ ಗೊಂದಲದಿಂದಾಗಿ ಜಿಲ್ಲೆಯ 4 ನಗರಾಡಳಿತ ಸಂಸ್ಥೆಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಿಗದಿಯಾಗದೆ, ಕಳೆದ 6 ತಿಂಗಳಿಂದ ಜನಪ್ರತಿನಿಧಿ ಇಲ್ಲದೆ ಆಡಳಿತಾಧಿಕಾರಿಗಳ ಆಳ್ವಿಕೆಗೆ ಒಳಪಟ್ಟಿದೆ. ಇದರಿಂದಾಗಿ ಚುನಾಯಿತ ಸದಸ್ಯರು ಅಧಿಕಾರ ಇದ್ದೂ ಇಲ್ಲದಂತೆ ಸುಮ್ಮನೆ ಕುಳಿತಿದ್ದಾರೆ.
ಹೌದು.., ಜಿಲ್ಲೆಯ ಕನಕಪುರ ನಗರಸಭೆ ಮತ್ತು ಮಾಗಡಿ ಪುರಸಭೆ ಹಾಗೂ ಬಿಡದಿ, ಹಾರೋಹಳ್ಳಿ ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷ ಉಪಾಧ್ಯಕ್ಷ ಅವಧಿ ಈಗಾಗಲೇ ಪೂರ್ಣಗೊಂಡು 6 ತಿಂಗಳು ಕಳೆಯುತ್ತಾ ಬಂದಿದೆಯಾದರೂ ಇನ್ನೂ ಈ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ಚುನಾವಣೆ ನಿಗದಿಯಾಗದ ಪರಿಣಾಮ ಚುನಾಯಿತ ಪ್ರತಿನಿಧಿ ಗಳಿಗೆ ಅಧಿಕಾರ ಇಲ್ಲದಂತಾಗಿದೆ.
ಖಾಲಿ ಉಳಿದಿದ್ದು ಯಾಕೆ: ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಖಾಲಿ ಉಳಿದಿರುವ ನಗರಾಡಳಿತ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ 6 ತಿಂಗಳ ಹಿಂದೆ ಮೀಸಲಾತಿ ನಿಗಧಿ ಮಾಡಿ ಆದೇಶ ಹೊರಡಿಸಿತ್ತು. 15ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂ ಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್ ಮೆಟ್ಟಿಲೇರಿದರು. ಮೀಸಲಾತಿ ಪಟ್ಟಿ ದೋಷಪೂರಿತ ಎಂದು ತೀರ್ಮಾನಿಸಿದ ಹೈಕೋರ್ಟ್ ಮೀಸ ಲಾತಿ ಪಟ್ಟಿಗೆ ತಡೆಯಾಜ್ಞೆ ನೀಡಿದ ಪರಿಣಾಮ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನನೆಗುದಿಗೆ ಬಿದ್ದಿತು. ಅಂದಿನಿಂದ ಇಂದಿನ ವರೆಗೆ ಚುನಾವಣಾ ಪ್ರಕ್ರಿಯೆ ನಡೆಯದ ಪರಿಣಾಮ ನಗರಾಡಳಿತ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಚುನಾಯಿತ ಸದಸ್ಯರಿದ್ದರೂ ಅಧಿಕಾರ ಚಲಾಯಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಸದಸ್ಯರು ಕೈ ಕೈ ಹಿಸುಕಿಕೊಂಡು ಕೂರುವಂತಾಗಿದೆ.
ಅಭಿವೃದ್ಧಿಗೆ ಹಿನ್ನಡೆ: ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ನಗರಸಭೆ ಮತ್ತು ಪುರಸಭೆಗಳಲ್ಲಿ ತಮ್ಮ ಕೆಲಸ ಕಾರ್ಯಗಳಾಗದೆ ಜನತೆ ಪರದಾಡು ತ್ತಿದ್ದು, ಚುನಾಯಿತ ಅಧ್ಯಕ್ಷರು ಇದಿದ್ದೇ ಆದಲ್ಲಿ ಸಾರ್ವಜನಿಕರು ತಮ್ಮ ಕುಂದುಕೊರತೆಯನ್ನು ಪರಿ ಹರಿ ಸಿಕೊಳ್ಳಬಹುದಿತ್ತು. ಆದರೆ, ಎಲ್ಲವೂ ಅಧಿಕಾರಿ ಗಳ ಹಿಡಿತಕ್ಕೆ ಸಿಲುಕಿದ್ದು ಸಾರ್ವಜನಿಕರ ಅಹವಾಲು ಗಳನ್ನು ಪರಿಹರಿಸಲು ಚುನಾಯಿತ ಪ್ರತಿನಿಧಿಗಳು ಇಲ್ಲದಂತಾಗಿದೆ.
ಸರ್ಕಾರ ಗಮನಹರಿಸಲಿ: ನ್ಯಾಯಾಲಯದಲ್ಲಿ ಇದ್ದ ವ್ಯಾಜ್ಯ ಇತ್ಯರ್ಥ ವಾಗಿದ್ದು, ಕೂಡಲೇ ಸ್ಥಳೀಯ ಸಂಸ್ಥೆಗಳಿಗೆ ತುರ್ತಾಗಿ ಚುನಾವಣೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷನ್ನು ನೇಮಕ ಮಾಡುವ ಮೂಲಕ ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಕೂಡಲೇ ಸರ್ಕಾರ ಹಾಗೂ ಜಿಲ್ಲೆಯ ಶಾಸಕರು, ಸಂಸದರು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಮುಂದಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಗರಸಭೆ, ಪುರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆ ಯದಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಗೊಂದಲ ಉಂಟಾದ ಪರಿಣಾಮ ನ್ಯಾಯಾಲಯದಲ್ಲಿ ಪ್ರಕರಣ ಇತ್ತು. ಈ ಕಾರಣದಿಂದ ಚುನಾವಣೆ ವಿಳಂಬ ವಾಗಿದ್ದು, ಇದೀಗ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಮುಖ್ಯ ಮಂತ್ರಿ ಮತ್ತು ಉಪಮುಖ್ಯಮಂತ್ರಿ ಗಳು ತುರ್ತಾಗಿ ಚುನಾವಣೆ ಘೋಷಣೆ ಮಾಡು ವುದಾಗಿ ಹೇಳಿದ್ದು, ಸದ್ಯದಲ್ಲೇ ಚುನಾವಣೆ ನಡೆಯಲಿದೆ.
– ಎಸ್.ರವಿ, ಎಂಎಲ್‌ಸಿ, ಸ್ಥಳೀಯ ಸಂಸ್ಥೆಗಳ ಕ್ಷೇತ್ರ
-ಸು.ನಾ.ನಂದಕುಮಾರ್