Advertisement

Ramanagara: ಮೈ-ಬೆಂ ಎಕ್ಸ್‌ಪ್ರೆಸ್‌ ವೇ ಟೋಲ್ ಬಳಿ ಡೀಸಲ್ ಕಳ್ಳರ ಕಾಟ.!

03:28 PM Aug 31, 2023 | |

ರಾಮನಗರ: ಅಪಘಾತಗಳ ಕಾರಣದಿಂದ ಹೆಚ್ಚಾಗಿ ಸುದ್ದಿಯಲ್ಲಿರುವ ಮೈಸೂರು- ಬೆಂಗಳೂರು ಎಕ್ಸಪ್ರೆಸ್ ವೇ ಇದೀಗ ಡೀಸಲ್ ಕಳ್ಳರ ಕಾಟದ ಕಾರಣದಿಂದ ಸುದ್ದಿಯಾಗಿದೆ. ಬಿಡದಿಯ ಶೇಷಗಿರಿಹಳ್ಳಿ ಟೋಲ್ ಬಳಿ ರಾತ್ರಿ ನಿಲ್ಲಿಸಿದ್ದ ಲಾರಿಯಿಂದ ದುಷ್ಕರ್ಮಿಗಳು ಡೀಸಲ್ ಕಳ್ಳತನ ಮಾಡಿದ್ದಾರೆ. ಡೀಸಲ್ ಕಳೆದುಕೊಂಡವರು ತಮ್ಮ ನೋವು ತೋಡಿಕೊಂಡ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Advertisement

ತಾನು ಟೋಲ್ ಬಳಿ ವಾಹನ ನಿಲ್ಲಿಸಿ ಮಲಗಿದ್ದೆ. ಆದರೆ ಬೆಳಗಾಗುವಷ್ಟರಲ್ಲಿ ಲಾರಿಯ ಡೀಸಲ್ ಕಳ್ಳತನ ಮಾಡಿದ್ದಾರೆ. ಡೀಸಲ್ ಟ್ಯಾಂಕ್ ನ ಕ್ಯಾಪ್ ಮುರಿದು ಇಂಧನಕ್ಕೆ ಕನ್ನ ಹಾಕಿದ್ದಾರೆ ಎಂದು ಚಾಲಕ ಅಳಲು ತೋಡಿಕೊಂಡಿದ್ದಾರೆ.

ಡೀಸಲ್ ಕಳ್ಳತನದ ಬಗ್ಗೆ ಹೈವೇ ಪೆಟ್ರೋಲಿಂಗ್ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ. ಅವರು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next