Advertisement

Ramanagara; ಡಿವೈಡರ್‌ಗೆ ಕಾರು ಢಿಕ್ಕಿ: ಕೇರಳ ಮೂಲದ ಯುವಕ ಮೃತ್ಯು

08:23 PM Oct 05, 2023 | Team Udayavani |

ರಾಮನಗರ: ಡಿವೈಡರ್‌ಗೆ ಕಾರು ಢಿಕ್ಕಿ ಹೊಡೆದು ಕೇರಳ ಮೂಲದ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಹಾಲು ಶಿಥಿಲೀಕರಣ ಘಟಕದ ಮುಂಭಾಗ ನಡೆದಿದೆ.

Advertisement

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೆನಲ್ಲಿ ಅವಘಡ ಸಂಭವಿಸಿದ್ದು, ಕೇರಳದ ನಿವಾಸಿ ಅನಾಥ್(35) ಮೃತ ವ್ಯಕ್ತಿ. ತನ್ನ ಹುಂಡೈ ಐ20 ಕಾರಿನಲ್ಲಿ ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುತ್ತಿದ್ದ ಅನಾಥ್, ನಿಯಂತ್ರಣ ತಪ್ಪಿ ಬೈರಾಪಟ್ಟಣ ಸಮೀಪ ಡಿವೈಡರ್‌ಗೆ ಕಾರು ಢಿಕ್ಕಿಯಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ತಲೆ ಛಿದ್ರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next