Advertisement
ಜಿಲ್ಲೆಯ ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ ಸಂಗಮದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಬಿನಿ, ಹೇಮಾವತಿ ನದಿಗಳು ಮತ್ತು ಕೆಆರ್‌ಎಸ್ ಜಲಾಶಯದಿಂದ ಹೆಚ್ಚುವರಿ ನೀರು ಕಾವೇರಿ ನದಿ ಪಾತ್ರದಲ್ಲಿ ಹರಿದ ಕಾರಣ ಸಂಗಮದಲ್ಲಿ ಎಂದಿಗಿಂತ ಸುಮಾರು 10 ಅಡಿ ಎತ್ತರಕ್ಕೆ ನೀರು ಹರಿದಿದೆ. ಸಂಗಮದಲ್ಲಿರುವ ಪ್ರವಾಸಿಗರ ಕಟ್ಟಡದವರೆಗೂ ನೀರು ಬಂದಿದೆ. ಹೀಗೆ ಅಪಾರ ಪ್ರಮಾಣದ ನೀರು ಹರಿಯುವಾಗ ನದಿ ಪಾತ್ರದ ಬಳಿ ಇರುವ ಗ್ರಾಮಗಳಿಗೂ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಖುದ್ದ ಪರಿಶೀಲನೆ ನಡೆಸಿರುವುದಾಗಿ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದಾಗಿ ಹೇಳಿದರು.
Related Articles
Advertisement
ಕೆರೆಗಳಿಗೆ ನೀರು ಹರಿಸಲು ಆಗ್ರಹ: ಕೆ.ಆರ್.ಎಸ್ ಜಲಾಶಯದಲ್ಲಿ 124 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು ಇನ್ನು ಇದೆ. ಹೀಗಾಗಿ ಅಧಿಕಾರಿಗಳು ಕಾವೇರಿ ಕೊಳ್ಳದ ಕೆರೆಗಳಿಗೆ ನೀರು ಹರಿಸಲು ಮುಂದಾಗಬೇಕು ಎಂದು ಸಚಿವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮೇಕೆದಾಟು ಯೋಜನೆಗೆ ಅನುಮತಿ ಅಗತ್ಯ: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಅಗತ್ಯ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಇನ್ನೂ ಎನ್ವಿರಾನ್‌ಮೆಂಟಲ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಯೋಜನೆಗೆ ಬೇಕಾದ ಅಡಿಪಾಯವನ್ನು ಮೈತ್ರಿ ಸರ್ಕಾರ ಹಾಕಿ ಕೊಟ್ಟಿದೆ. ಇನ್ನು ಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈ ವೇಳೆ ಎಂ.ಎಲ್.ಸಿ ಎಸ್.ರವಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಿವಕುಮಾರ್ ಬಸಪ್ಪ, ತಾಪಂ ಅಧ್ಯಕ್ಷ ಧನಂಜಯ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಎಸ್‌ಪಿ ಅನೂಪ್ ಶೆಟ್ಟಿ, ಡಿಸಿಎಫ್ ರಮೇಶ್ ಕುಮಾರ್, ಎಸಿಎಫ್ ರಾಜು, ಆರ್‌ಎಫ್ಒ ಕಿರಣ್ ಕುಮಾರ್, ತಹಶೀಲ್ದಾರ್ ಆನಂದಯ್ಯ ಮುಂತಾದವರು ಹಾಜರಿದ್ದರು.