ಕುದೂರು: ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಹಿಂಪಡೆದರೂ ಜನ ಅದರಿಂದ ಹೊರಬಂದಿಲ್ಲಎಂಬುದಕ್ಕೆ ಎರಡೂ ದಿನ ಗ್ರಾಮದಲ್ಲಿ ಕಂಡು ಬಂದ ದೃಶ್ಯವೇ ಸಾಕ್ಷಿ.
ಸರ್ಕಾರದ ಆದೇಶದಂತೆ ಬೀದಿಬದಿ ವ್ಯಾಪಾರಿಗಳು, ದಿನಸಿ ಇತರೆ ಅಂಗಡಿ ಮುಂಗಟ್ಟುತೆಗೆದಿದ್ದರೂ ಜನರು ಮಾತ್ರ ಮನೆಯಿಂದಹೊರಬರಲು ಹಿಂದೇಟು ಹಾಕಿದರು. ಅಲ್ಲದೆ,ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವಾಹನಗಳ ಸಂಖ್ಯೆಯಲ್ಲೂ ಇಳಿಮುಖವಾಗಿತ್ತು.
ಕರಾವಳಿ, ಮಲೆನಾಡು ಭಾಗಕ್ಕೆ ಪ್ರವಾಸಕ್ಕೆ ಹೋಗಿದ್ದವರ ವಾಹನಗಳೂ ಕಂಡು ಬರಲಿಲ್ಲ.ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬರದೇಗ್ರಾಮದಲ್ಲಿನ ಹೋಟೆಲ್‌ಗಳು, ದಿನಸಿ, ತರಕಾರಿ,ಮಾಂಸದಂಗಡಿಗಳೂ ಮಧ್ಯಾಹ್ನದ ಮೇಲೆ ಖಾಲಿಹೊಡೆಯುವಂತಾಗಿತ್ತು. ವಿಕೇಂಡ್ ಕರ್ಫ್ಯೂರದ್ದುಗೊಳಿಸಿದ್ದರಿಂದ ನಷ್ಟದ ಪ್ರಮಾಣವನ್ನುತುಂಬಿಕೊಳ್ಳಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಹೋಟೆಲ್, ಫುಟ್‌ಪಾತ್ ವ್ಯಾಪಾರಿಗಳು ತೀವ್ರ ನಿರಾಸೆ ಅನುಭವಿಸುವಂತಾಗಿತ್ತು.
ವಿಕೇಂಡ್ ಕರ್ಫ್ಯೂ ರದ್ದಾದರೂ ಬಸ್‌ಗಳಲ್ಲೂಪ್ರಯಾಣಿಕರ ಸಂಖ್ಯೆ ತುಂಬಾ ವಿರಳವಾಗಿತ್ತು.ವಾರಾಂತ್ಯದಲ್ಲಿ ಬೆಂಗಳೂರು ಸೇರಿದಂತೆವಿವಿಧೆಡೆಗಳಿಗೆ ಪ್ರಯಾಣ ಮಾಡುವವರ ಸಂಖ್ಯೆಗ್ರಾಮದಲ್ಲಿ ಹೆಚ್ಚು ಇರುತ್ತಿತ್ತು. ಸರ್ಕಾರಿ, ಖಾಸಗಿಬಸ್‌ಗಳು ಪ್ರಯಾಣಿಕರು ಇಲ್ಲದೆ ಖಾಲಿ ಓಡಾಟ ನಡೆಸಬೇಕಾಯಿತು.
ಮೆಡಿಕಲ್‌ಗಳಿಗೆ ವ್ಯಾಪಾರ: ಪ್ರತಿ ಮನೆಯಲ್ಲಿಒಬ್ಬರಾದರೂ ಜ್ವರ, ಶೀತ, ಕೆಮ್ಮು ಗಂಟಲು ನೋವಿನಿಂದ ನರಳುತ್ತಿದ್ದು, ಸರ್ಕಾರಿ ಆಸ್ಪತ್ರೆ,ಖಾಸಗಿ ಕ್ಲಿನಿಕ್‌ಗಳಲ್ಲಿ ತುಂಬಿರುವ ದೃಶ್ಯ ಕಳೆದ15 ದಿನಗಳಿಂದ ಕಂಡು ಬರುತ್ತಿದೆ. ಮೆಡಿಕಲ್‌ಶಾಪ್‌ಗಳಲ್ಲಿ ಜ್ವರ, ಕೆಮ್ಮಿನ ಮಾತ್ರೆಗಳಿಗೆ ಭಾರೀಬೇಡಿಕೆ ಇದೆ. ದಿನಸಿ, ಹೋಟೆಲ್‌ಗಳಿಗೆ ಭೇಟಿ ನೀಡದ ಜನರು, ಮೆಡಿಕಲ್‌ಗಳ ಮುಂದೆ ನಿಂತಿದ್ದ ದೃಶ್ಯ ಕಂಡು ಬಂತು.
ಸರ್ಕಾರವೇನೋ ವ್ಯಾಪಾರಿಗಳು, ಜನಸಾಮಾನ್ಯರ ಹಿತದೃಷ್ಟಿಯಿಂದ ವಾರಾಂತ್ಯಕರ್ಫ್ಯೂ ಹಿಂಪಡೆದಿದೆ. ಆದರೆ, ಕೊರೊನಾನಿಯಮ ಪಾಲಿಸಬೇಕು. ಆ ಮೂಲಕ ಆರೋಗ್ಯಕಾಪಾಡಿಕೊಳ್ಳುವಂತೆ ಮನವಿ ಮಾಡಿದೆ. ಹೀಗಾಗಿವ್ಯಾಪಕವಾಗಿ ಹರಡುತ್ತಿರುವ ಕೊರೊನಾಸೋಂಕು ನಿಯಂತ್ರಿಸಲು ನಾಗರಿಕರ ಜವಾಬ್ದಾರಿಹೆಚ್ಚಿದೆ. ಈ ಬಾರಿ ಕೊರೊನಾ ಸೋಂಕುಗಂಭೀರವಾಗಿಲ್ಲದಿದ್ದರೂ ದೇಹ ದುರ್ಬಲ ಮಾಡುವುದರಿಂದ ಮಡದಿ ಮಕ್ಕಳನ್ನುಕಟ್ಟಿಕೊಂಡು ಪ್ರವಾಸಕ್ಕೆ ಹೋಗುವ ಧೈರ್ಯ ಮಾಡದವರು ಬಹಳ ವಿರಳ.