Advertisement

ಮಾ.2ರಿಂದ ಆದಿಚುಂಚನಗಿರಿ ಜಾತ್ರಾ ಮಹೋತ್ಸವ

05:11 PM Feb 28, 2020 | Naveen |

ರಾಮನಗರ: ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಾತ್ರೋತ್ಸವ ಹಾಗೂ ಮಹಾ ಕುಂಬಾಭಿಷೇಕ ಮಹೋತ್ಸವ ಕಾರ್ಯಕ್ರಮ ಮಾ.2ರಿಂದ 10ರವರೆಗೆ ನಡೆಯಲಿದೆ ಎಂದು ಅರ್ಚಕರಹಳ್ಳಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ತಿಳಿಸಿದರು.

Advertisement

ನಗರದ ಶಾಖಾ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿ ಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಡಾ.ಬಾಲ ಗಂಗಾಧರನಾಥ ಮಹಾ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ರೂಪುಗೊಂಡು ಲೋಕಾರ್ಪಣೆಗೊಂಡ ಕಾಲಭೈರವೇಶ್ವರ ಸ್ವಾಮಿ ದೇವಾಲಯಕ್ಕೆ 12 ಸಂವತ್ಸರ ತುಂಬುತ್ತಿರುವ ಸುಸಂದರ್ಭದಲ್ಲಿ 72ನೇ ಪೀಠಾಧ್ಯಕ್ಷರಾದ ಡಾ.ನಿರ್ಮಲಾ ನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಈ ಬಾರಿಯ ಜಾತ್ರೋತ್ಸವ ಹಾಗೂ ಮಹಾ ಕುಂಬಾಭಿಷೇಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಮಾ.9ರ ಸೋಮವಾರ ಬೆಳಗಿನ ಜಾವ ಜಾತ್ರೋತ್ಸವದ ಪ್ರಮುಖ ಆಕರ್ಷಣೆಯಾದ ಗಂಗಾಧರೇಶ್ವರಸ್ವಾಮಿ ಮಹಾ ರಥೋತ್ಸವ ನಡೆಯಲಿದ್ದು, ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅನ್ನದಾನೇಶ್ವರನಾಥ ಸ್ವಾಮೀಜಿ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಬಿಡದಿಯ ಬಿಜಿಎಸ್‌ ಸೇವಾ ಸಮಿತಿ ಅಧ್ಯಕ್ಷ ಸಿ,ಉಮೇಶ್‌, ಜೆಡಿಎಸ… ಮುಖಂಡ ಹೋಟೆಲ್ ಉಮೇಶ…, ರೈತ ಮುಖಂಡ ಸಿ.ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಚುಂಚನಗಿರಿಗೆ ವಿಶೇಷ ಬಸ್‌ ವ್ಯವಸ್ಥೆ : ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಾತ್ರೋತ್ಸವ-2020 ಹಾಗೂ ಮಹಾ ಕುಂಬಾಭಿಷೇಕ ಮಹೋತ್ಸವ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಗಂಗಾಧರೇಶ್ವರಸ್ವಾಮಿ ಮಹಾ ರಥೋತ್ಸಕ್ಕೆ ತೆರಳುವ ಭಕ್ತರ ಅನಕೂಲಕ್ಕಾಗಿ ರಾಮನಗರ ಸರ್ಕಾರಿ ಬಸ್‌ ನಿಲ್ದಾಣದಿಂದ ಮಾ.8ರ ಭಾನುವಾರ ಬೆಳಗ್ಗೆ
6ರಿಂದ ರಾತ್ರಿ 9.30 ಗಂಟೆಯವರೆಗೆ ಪ್ರತಿ 30 ನಿಮಿಷಕ್ಕೊಂದರಂತೆ ವಿಶೇಷ ಬಸ್‌ಗಳು ಸಂಚಾರ ಮಾಡಲಿವೆ. ಮಾ.9ರಂದು ಆದಿಚುಂಚನ ಗಿರಿಯಿಂದ ರಾಮನಗರಕ್ಕೆ ವಾಪಸ್‌ ಬರಲು ಕೂಡ ವಿಶೇಷ ಬಸ್‌ಗಳು ಸಂಚರಿಸಲಿವೆ. ಜಿಲ್ಲೆಯ ಭಕ್ತರು ಇದರ ಪ್ರಯೋಜನ ಪಡೆದು ಕೊಳ್ಳಬಹುದಾಗಿದೆ ಎಂದು ರಾಮನಗರ ಜಿಲ್ಲಾ ಸಾರಿಗೆ ಘಟಕದ ವ್ಯವಸ್ಥಾಪಕರು ತಿಳಿಸಿದರು.

Advertisement

ರಾಮನಗರದಲ್ಲಿ ಅರವಂಟಿಗೆ: ಆದಿಚುಂಚ ನಗಿರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.8ರಂದು ರಾಮನಗರ ಕೆಎಸ್‌ ಆರ್‌ ಟಿಸಿ ಬಸ್‌ ನಿಲ್ದಾಣದ ಆವರಣದಲ್ಲಿ ಬಿಜಿಎಸ್‌ ಭಕ್ತ ವೃಂದ ರಾಮನಗರ ತಾಲೂಕು, ಬಿಡದಿಯ ಬಿಜಿಎಸ್‌ ಸೇವಾ ಸಮಿತಿ ಹಾಗೂ ಕೆಎಸ್‌ ಆರ್‌ ಟಿಸಿ ನೌಕರರ ಬಳಗ ರಾಮನಗರ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ 6ನೇ ವರ್ಷದ ಅರವಂಟಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next