Advertisement
ಪ್ರವಾಸೋದ್ಯಮ ಹೆಚ್ಚಿದಂತೆ ಸಾವಿರಾರು ಮಂದಿಗೆ ಸ್ವ-ಉದ್ಯೋಗಾವಕಾಶವನ್ನು ದೊರಕಿಸಿಕೊಟ್ಟಿದೆ. ಪ್ರವಾಸಿ ಸ್ಥಳಗಳಲ್ಲಿ ಎಳನೀರುಮಾರಾಟ, ದೇವಸ್ಥಾನಗಳ ಮುಂಭಾಗದ ಹೂ, ಹಣ್ಣು ಮುಂತಾದ ಅಂಗಡಿಗಳು, ಟೀ ಸ್ಟಾಲ್‌ಗಳು, ಐಸ್ ಕ್ರೀಂ ಅಂಗಡಿಗಳು, ಹೋಟೆಲ್‌ಗಳು, ಅಲ್ಲದೆ ರಸ್ತೆ ಬದಿಯಲ್ಲಿ ಸೌತೆಕಾಯಿ, ಕಡಲೆಕಾಯಿ ಹೀಗೆ ವಿವಿಧ ರೀತಿಯ ಸಣ್ಣ ಪುಟ್ಟ ವ್ಯಾಪಾರಿಗಳು….. ಹೀಗೆ ಹತ್ತು ಹಲವು ರೂಪದಲ್ಲಿ ಸಾವಿರಾರು ಜನರು ಪ್ರವಾಸಿ ತಾಣಗಳಿಂದಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ದೊರಕಿಸಿಕೊಂಡು ಜೀವನೋಪಾಯಕ್ಕಾಗಿ ಈ ತಾಣಗಳನ್ನೆ ಅವಲಂಬಿಸಿದ್ದಾರೆ.
ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ.
Related Articles
Advertisement
ಪ್ರಮುಖ ಪ್ರವಾಸಿ ಸ್ಥಳಗಳು: ರಾಮದೇವರ ಬೆಟ್ಟ, ರೇವಣಸಿದೇªಶ್ವರ ಬೆಟ್ಟ, ಹಂದಿದಗುಂದಿ ಬೆಟ್ಟ, ಕೂನಗಲ್ ಬೆಟ್ಟ, ಸಾವನದುರ್ಗ, ಮಾಗಡಿ ಕೋಟೆ, ಸಂಗಮ, ಮೇಕೆದಾಟು, ಮಳೂರು ಅಪ್ರಮೇಯಸ್ವಾಮಿ ದೇವಾಲಯ, ಜಾನಪದ ಲೋಕ, ಕಣ್ವ ಜಲಾಶಯ, ಮಂಚನಬೆಲೆ ಜಲಾಶಯ, ಸಾವನದುರ್ಗ, ಮಾಗಡಿ ರಂಗನಾಥ ದೇವಾಲಯ, ಕನಕಪುರದ ಕಬ್ಟಾಳಮ್ಮದೇವಾಲಯ, ಚುಂಚಿಫಾಲ್ಸ್, ಕಲ್ಲಳ್ಳಿ ವೆಂಕಟೇಶ್ವರ ಸ್ವಾಮಿ ದೇವಾಲಯ ಸದ್ಯ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ಸ್ಥಳಗಳು. ಪ್ರತಿ ಸ್ಥಳದಲ್ಲೂ ತನ್ನದೇ
ಆದ ಸ್ಥಳೀಯ ಆಹಾರ ವೈವಿಧ್ಯತೆ ವ್ಯಕ್ತವಾಗುತ್ತಿರುವುದರಿಂದ ಪ್ರವಾಸಿಗರಿಗೆ ಸ್ಥಳೀಯ ಅಚಾರ, ವಿಚಾರಗಳು ಸಹ ಪರಿಚಯವಾಗುತ್ತಿವೆ.