ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಅಡಿಪಾಯ ಕಾಮಗಾರಿ ಆಗಸ್ಟ್ ತಿಂಗಳಲ್ಲಿ ಪೂರ್ಣವಾಗಲಿದೆ ಎಂದು ದೇಗುಲ ನಿರ್ಮಾಣ ಟ್ರಸ್ಟ್‌ನ ಹಿರಿಯರೊಬ್ಬರು ತಿಳಿಸಿದ್ದಾರೆ.
ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ತರಲಾದ 17,000 ಗ್ರಾನೈಟ್ ಕಲ್ಲುಗಳನ್ನು ಬಳಸಿಕೊಂಡು ಅಡಿಪಾಯ ನಿರ್ಮಿಸಲಾಗುತ್ತಿದೆ. ಫೆಬ್ರವರಿಯಲ್ಲಿ ಆರಂಭವಾದ ಕಾಮಗಾರಿ ಆಗಸ್ಟ್‌ನಲ್ಲಿ ಮುಗಿಯಲಿದ್ದು ಅದಾದ ನಂತರ ಅದರ ಮೇಲಿನ ನೆಲಹಾಸು (ಸೂಪರ್ ಸ್ಟ್ರಕ್ಚರ್) ನಿರ್ಮಾಣ ಮಾಡಲಾಗುವುದು.
ಮೇಲಿನ ನೆಲಹಾಸನ್ನು ಕೆತ್ತಿರುವ ರಾಜಸ್ಥಾನಿ ಬನ್ಸಿ ಪರ್ಹಾಪುರ ಕಲ್ಲುಗಳಿಂದ ನಿರ್ಮಿಸಲಾಗುವುದು. ಆ ಕಲ್ಲುಗಳ ಕೆತ್ತನೆ ಕೆಲಸ ಈಗಾಗಲೇ ನಡೆಯುತ್ತಿದೆ. 4.45ಲಕ್ಷ ಘನ ಅಡಿ ಕಲ್ಲು ಬೇಕಾಗಿದ್ದು ಅದರಲ್ಲಿ ಈಗಾಗಲೇ 75,000 ಘನ ಅಡಿ ಕಲ್ಲು ಕೆತ್ತನೆಯಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ಜಮ್ಮು& ಕಾಶ್ಮೀರದ ಕುರಿತು ಪಾಕ್ ನಿಲುವಳಿಗೆ ಭಾರತ ತಿರಸ್ಕಾರ