Advertisement

ಸಂಪುಟ ವಿಸ್ತರಣೆ ಮುಂದೂಡಿಕೆಗೆ ರಾಮಲಿಂಗಾ ರೆಡ್ಡಿ ಅಸಮಾಧಾನ

06:30 AM Dec 07, 2018 | Team Udayavani |

ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆಯ ದಿನಾಂಕವನ್ನು ಮೇಲಿಂದ ಮೇಲೆ ಮುಂದೂಡುತ್ತಿರುವುದಕ್ಕೆ ಕಾಂಗ್ರೆಸ್‌ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಹೈ ಕಮಾಂಡ್‌ ನಾಯಕರ ವಿರುದ್ಧ ಆಸಮಾಧಾನ ಹೊರ ಹಾಕಿದ್ದಾರೆ.

Advertisement

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಚಾರದಲ್ಲಿ ಹೈಕಮಾಂಡ್‌ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಸುಮ್ಮನೆ ದಿನಾಂಕ ನೀಡಿ ಆಕಾಂಕ್ಷಿಗಳನ್ನು ಸತಾಯಿಸುವುದು ಸರಿಯಲ್ಲ. ಅದರ ಬದಲು ಲೋಕಸಭೆ ಚುನಾವಣೆ ನಂತರ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿಬಿಡಲಿ ಎಂದು ಹೇಳಿದ್ದಾರೆ.

ಸಂಪುಟದಲ್ಲಿ ಕೆಲವು ಹಿರಿಯ ಶಾಸಕರನ್ನು ಕಡೆಗಣಿಸಿರುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್‌, ಪರಮೇಶ್ವರ್‌, ಆರ್‌.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್‌ ಅವರನ್ನು ಸಂಪುಟಕ್ಕೆ ತೆಗೆದುಕೊಂಡು, ಎಚ್‌.ಕೆ. ಪಾಟೀಲ್‌, ರೋಷನ್‌ ಬೇಗ್‌ ಹಾಗೂ ನನ್ನನ್ನು ಹೊರಗಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಸಂಪುಟದಲ್ಲಿ ಯುವಕರಿಗೆ ಆದ್ಯತೆ ನೀಡಲು ಆಕ್ಷೇಪವಿಲ್ಲ. ಆದರೆ,  ಹಿರಿಯರನ್ನು ದೂರ ಇಡುವುದು ಸರಿಯಲ್ಲ. ಸಚಿವ ಸ್ಥಾನ ನೀಡಿದರೂ ಸಂತೋಷ, ನೀಡದಿದ್ದರೂ ಸಂತೋಷ, ನಾನೇನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next