ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಲು ಅನುಮತಿ ಕೇಳಿದರೆ ಸರ್ಕಾರ ಕೊಟ್ಟಿಲ್ಲ. ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷನಾದ ನನಗೂ ಪರಿಶೀಲನೆಗೆ ಅನುಮತಿ ಇಲ್ಲ. ಸರ್ಕಾರ ಎಲ್ಲವನ್ನೂ ಮುಚ್ಚಿಡುತ್ತಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಜಿಲ್ಲಾಧಿಕಾರಿಗಳ ಜೊತೆ ಸಭೆಗೆ ನಿರ್ಧರಿಸಿದ್ದರು. ಅವಕಾಶ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸಿದ್ದರಾಮಯ್ಯಗೆ ಸಭೆ ನಡೆಸಲು ಅವಕಾಶ ಕೊಟ್ಟಿಲ್ಲ. ಸರ್ಕಾರ ಬೇಕೆಂದೇ ಅವಕಾಶ ತಪ್ಪಿಸಿದೆ ಎಂದರು.
ಇದನ್ನೂ ಓದಿ:ಸೋಂಕಿತ ಸೀನುವಾಗ ಹೊರಬರುವ ಏರೋಸಾಲ್ 10 ಮೀಟರ್ ದೂರ ಹೋಗಬಹುದು : ಕೇಂದ್ರ
ನಾನು ಕೂಡ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ. ನಮ್ಮ ಸಮಿತಿಗೂ ಸಾಕಷ್ಟು ದೂರುಗಳು ಬರುತ್ತವೆ. ಕೋವಿಡ್ ಹಿನ್ನೆಲೆಯಲ್ಲಿ ಸ್ಪೀಕರ್ ಸಭೆ ರದ್ಧು ಮಾಡಿದ್ದರು. ಈಗ ನಾವು ದೂರು ಪರಿಶೀಲನೆಗೆ ಮುಂದಾಗಿದ್ದೆವು, ನಾನು ಮೇ6 ರಂದೇ ಪತ್ರ ಬರೆದಿದ್ದೆ ಆದರೆ ಸ್ಪೀಕರ್ ಇಲ್ಲಿಯವರೆಗೆ ಅವಕಾಶ ಕೊಟ್ಟಿಲ್ಲ ಸರ್ಕಾರ ಬೇಕೆಂದೇ ಇಂತಹ ಪ್ರಯತ್ನ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ಹೊರಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಭಾಪತಿ ಬಿ.ಎಲ್. ಶಂಕರ್, ವಕ್ತಾರ ರಮೇಶ್ ಬಾಬು ಉಪಸ್ಥಿತರಿದ್ದರು