Advertisement

ಬಿಟ್ ಕಾಯಿನ್ ಪ್ರಕರಣ : ರಾಜ್ಯದಲ್ಲಿ ಬಿಜೆಪಿ ಸರಕಾರ ಪಥನ ಖಚಿತ ; ರಾಮಲಿಂಗಾರೆಡ್ಡಿ

05:19 PM Nov 11, 2021 | Team Udayavani |

ಗಂಗಾವತಿ : ಬಿಟ್ ಕಾಯಿನ್ ಪ್ರಕರಣದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಅಧಿಕಾರಿಗಳು ಪಾಲ್ಗೊಂಡಿದ್ದು ಕೋಟ್ಯಂತರ ರೂ. ವ್ಯವಹಾರ ಮಾಡುವ ವೆಬ್ ಸೈಟ್ ನ್ನು ಹ್ಯಾಕ್ ಮಾಡಲಾಗಿದೆ ಇದರಲ್ಲಿ ಬಿಜೆಪಿಯವರ ಪಾತ್ರ ಪ್ರಮುಖವಾಗಿದೆ ಈ ಕುರಿತು ಕೇಂದ್ರದ ಪ್ರಧಾನ ಮಂತ್ರಿಗಳ ಕಚೇರಿಗೆ ಪತ್ರವನ್ನ ಕೆಲವರು ಬರೆದು ಪ್ರಕರಣವನ್ನು ಇಡಿ, ಸಿಬಿಐಗೆ ಒಪ್ಪಿಸುವಂತೆ ಕೋರಿರುವ ಪ್ರಕರಣ ವ್ಯಾಪಕವಾಗಿ ಹರಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

Advertisement

ಅವರು ತಾಲೂಕಿನ ಕೇಸರಹಟ್ಟಿ ಗ್ರಾಮದಲ್ಲಿ ಉದಯವಾಣಿ ಜತೆ ಮಾತನಾಡಿ, ಬಿಟ್ ಕಾಯಿನ್ ವ್ಯವಹಾರ ವಿಶ್ವದಾದ್ಯಂತ ನಡೆಯುತ್ತಿದೆ ಆದರೆ ಬಿಟ್ ಕಾಯಿನ್ ವ್ಯವಹಾರ ಮಾಡುವವರ ಡಿಜಿಟಲ್ ವೆಬ್ ಸೈಟನ್ನು  ಬಿಜೆಪಿಯ ಕೆಲ ಮುಖಂಡರು ಅಧಿಕಾರಿಗಳು ಹ್ಯಾಕ್ ಮಾಡಿದ್ದರಿಂದ ಕೋಟ್ಯಂತರ ರೂ. ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದ್ದರಿಂದ ಕೂಡಲೇ ಸರಕಾರ ಈ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಕಾಂಗ್ರೆಸ್ ಬಿಜೆಪಿ ಮತ್ತು ಯಾವುದೇ ಇಲಾಖೆಯ ಅಧಿಕಾರಿಗಳು ಈ ಪ್ರಕರಣದಲ್ಲಿ ಪಾಲ್ಗೊಂಡಿದ್ದರೆ ಕೂಡಲೇ ಅವರಿಗೆ ಶಿಕ್ಷೆಯಾಗಲಿ.

ಅಮೇರಿಕಾದ ಹಣಕಾಸು ಅಪರಾಧ ವ್ಯವಹಾರ ನೋಡಿಕೊಳ್ಳುವ ಇಲಾಖೆ ಮತ್ತು ವಿವಿಧ ದೇಶಗಳು ಭಾರತದಲ್ಲಿ ಬಿಟ್ ಕಾಯಿನ್ ಹ್ಯಾಕ್ ಮಾಡಿ ಹಣ ಕೊಳ್ಳೆ ಹೊಡೆಯಲಾಗಿದೆ ಎಂಬ ವಿಷಯವನ್ನು ಪ್ರಧಾನಮಂತ್ರಿ ಕಚೇರಿಗೆ ಪತ್ರದ ಮೂಲಕ ಮನವರಿಕೆ ಮಾಡಲಾಗಿದೆ. ಆದ್ದರಿಂದಲೇ ಪ್ರಧಾನಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಮಾಹಿತಿಯನ್ನು ಪಡೆಯಲು ದೆಹಲಿಗೆ ಬುಲಾವ್ ಮಾಡಿದ್ದಾರೆ ಇದರಿಂದ ರಾಜ್ಯದಲ್ಲಿ ಮತ್ತೊಬ್ಬ ಹೊಸ ಸಿಎಂ ಬರುವ ಸಾಧ್ಯತೆ ಹೆಚ್ಚಾಗಿದೆ .ರಾಜಕೀಯ ಗೊಂದಲಗಳು ಬಿಜೆಪಿ ಆಡಳಿತದಲ್ಲಿ ಹೆಚ್ಚು ಸ್ಥಿರ ಸರ್ಕಾರವನ್ನು ಕಾಂಗ್ರೆಸ್ ಸರ್ಕಾರ ಮಾತ್ರ ನೀಡಬಲ್ಲದು .ಬಿಟ್ ಕಾಯಿನ್ ಪ್ರಕರಣ ಅತ್ಯಂತ ಮಹತ್ವದ್ದಾಗಿದ್ದು ಇದರಲ್ಲಿ ಬಿಜೆಪಿಯವರು ಹೆಚ್ಚಾಗಿ ಪಾಲ್ಗೊಂಡಿದ್ದು ಇವರ ಜತೆಗೆ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಪಕ್ಷಪಾತ ಮಾಡದೆ ಸರ್ಕಾರ ಕೂಡಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಪ್ರಾರಂಭ ಮಾಡಿ ತಪ್ಪಿತಸ್ಥರನ್ನು ಶಿಕ್ಷೆಗೆ ಮಾಡಬೇಕು ಜೊತೆಗೆ ವಿದೇಶಿ ವಿನಿಮಯ ಹಣವನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಣಕಾಸು ಅಪರಾಧ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು .

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರನ್ನು ಎಲ್ಲಿಯೂ ನಿಂದಿಸಿಲ್ಲ ಬಿಜೆಪಿಯಲ್ಲಿರುವ ದಲಿತ ಮುಖಂಡರು ದಲಿತ ಸಮುದಾಯಕ್ಕೆ ಮತ್ತು ಸಂವಿಧಾನಕ್ಕೆ ಅಪಚಾರ ಮಾಡಿದ ಸಂದರ್ಭದಲ್ಲಿ ಬಿಜೆಪಿಯಲ್ಲಿರುವ ದಲಿತ ನಾಯಕರು ಯಾವುದೇ ಧ್ವನಿ ಎತ್ತದೆ ಸುಮ್ಮನಿದ್ದು ದಲಿತರ ಹಕ್ಕುಗಳ ದಮನಕ್ಕೆ ಕಾರಣರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದಾರೆ ಎಲ್ಲಿಯೂ ದಲಿತರನ್ನು ಸಿದ್ದರಾಮಯ್ಯ ಹೀಯಾಳಿಸಿ ಮಾತನಾಡಿಲ್ಲ ಎಂದು ಸಮರ್ಥಿಸಿಕೊಂಡರು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಚ್ ಕೆ ಪಾಟೀಲ್ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next