ಚನ್ನಪಟ್ಟಣ: ತಾಲೂಕಿನ ವಂದಾರಗುಪ್ಪೆ ಗ್ರಾಮ ಬಳಿ ಕುವೆಂಪು ಕಾಲೇಜು ಹಿಂಭಾಗದ ದೊಡ್ಡಮಣ್ಣು ಗುಡ್ಡೆ ಅರಣ್ಯ ದಲ್ಲಿ ಸುಮಾರು 20-25ಅಡಿ ಎತ್ತರದ ಬೃಹತ್ ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ವಿಗ್ರಹಗಳು 15 ವರ್ಷಗಳಿಂದ ಅನಾಥವಾಗಿ ಮಲಗಿವೆ.
ಈಡೇರದ ಪ್ರವಾಸಿ ತಾಣದ ಕನಸು: ಕುವೆಂಪು ಕಾಲೇಜಿನ ನಿರ್ಮಾತೃ ಎಲ್. ಎಸ್. ರಾಮಲಿಂಗಯ್ಯ ಅವರಮಹಾತ್ವಕಾಂಕ್ಷಿ ಯೋಜನೆ ಇದು. ಈ ಭಾಗವನ್ನು ಪ್ರವಾಸಿ ತಾಣವಾಗಿ ರೂಪಿಸುವ ಕನಸು ಹೊತ್ತು, ಈ ನಾಲ್ಕು ಬೃಹತ್ ಗಾತ್ರದ ವಿಗ್ರಹಗಳ ಪ್ರತಿ ಷ್ಠಾಪನೆಗೆ ಕಾರ್ಯೋನ್ಮುಖರಾಗಿದ್ದರು.
ಆದರೆ, ಅವರ ಆಶಯ ಈಡೇರಲಿಲ್ಲ. ರಾಮಲಿಂಗಯ್ಯ ಅವರ ಮರಣದ ನಂತರ ಉದ್ದೇಶ ನೆಲಕಚ್ಚಿತು.
ಕಿಡಿಗೇಡಿಗಳಿಂದ ವಿಗ್ರಹಗಳ ವಿರೂಪ: ವಿಗ್ರಹಗಳ ಸುತ್ತಲೂ ಗಿಡಗಂಟಿಗಳು ಬೆಳೆದಿದೆ. ಸದ್ಯ ಆ ವಿಗ್ರಹಗಳಿರುವಆವರಣ ಸ್ವತ್ಛಗೊಳಿಸಿದ್ದಾಗ ಕಿಡಿಗೇಡಿಗಳು ವಿಗ್ರಹಗಳನ್ನು ವಿರೂಪಗೊಳಿಸಿರೋದು ತಡವಾಗಿ ಬೆಳಕಿಗೆ ಬಂದಿದೆ.
ನೆಲಕಚ್ಚಿದ ಯೋಜನೆ: ಈ ವಿಗ್ರಹಗಳನ್ನು ಬೆಟ್ಟಕ್ಕೆ ಸಾಗಿಸುವಾಗ ಶ್ರೀರಾಮನ ವಿಗ್ರಹ ಭಿನ್ನವಾದ ಹಿನ್ನೆಲೆ ಇಡೀ ಯೋಜನೆ ನೆಲಕಚ್ಚಿತು ಎಂದು ಹೇಳಲಾಗುತ್ತಿದೆ. ಆದರೂ, ಬೆಟ್ಟದ ಮೇಲೆ ಈ ವಿಗ್ರಹಗಳು ನಿರ್ಮಾಣಗೊಂಡಿದ್ದರೆ ತಾಲೂಕಿಗೆ ಒಂದು ಕಳಶದಂತೆ ಆಕರ್ಷಣೆ ಹೆಚ್ಚಿಸುತ್ತಿತ್ತು ಎನ್ನುವುದು ಪರಿಸರಪ್ರಿಯರ ಮಾತಾಗಿದೆ.
ಕನಸು ಸಾಕಾರಗೊಳಿಸಿ: ಸಂಬಂಧ ಪಟ್ಟವರು ಈಗಲಾದರೂ ಗಮನಹರಿಸಿ, ದಾನಿ ಎಲ್.ಎಸ್. ರಾಮಲಿಂಗಯ್ಯನವರ ಕನಸನ್ನು ಸಾಕಾರಗೊಳಿಸಬೇಕು. ಅಥವಾ ಆಸಕ್ತರಿಗೆ ವಿಗ್ರಹಗಳನ್ನು ಹಸ್ತಾಂತರ ಮಾಡುವ ಮೂಲಕ ಬೃಹತ್ ವಿಗ್ರಹಗಳು ಮತ್ತಷ್ಟು ವಿರೂಪಗೊಳ್ಳ ದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಮನಗರ ಜಿಲ್ಲಾ ಕ್ಷೇತ್ರ ತಜ್ಞ, ಸಾಹಿತಿ ವಿಜಯ ರಾಂಪುರ ಒತ್ತಾಯಿಸಿದ್ದಾರೆ.