Advertisement
ಪ್ರತಿ ರವಿವಾರ ಮುಂಜಾನೆ 7ರಿಂದ 10 ಗಂಟೆ ವರೆಗೆ ನಡೆಯುತ್ತಿದ್ದ ಸ್ವತ್ಛತಾ ಕೈಂಕರ್ಯದಲ್ಲಿ 100-200 ಕಾರ್ಯಕರ್ತರು ನಗರದ ಬೇರೆ ಬೇರೆ ಸ್ಥಳಗಳಲ್ಲಿ ಸ್ವತ್ಛತೆ ಕೈಗೊಂಡಿದ್ದಾರೆ. ಜತೆಗೆ ಪಾರ್ಕ್‌ಗಳ ನಿರ್ಮಾಣ, ನೂತನ ಬಸ್ ತಂಗುದಾಣ ನಿರ್ಮಾಣ, ನಾಮ ಫಲಕಗಳ ನವೀಕರಣ, ಅನಧಿಕೃತ ಪೋಸ್ಟರ್ ತೆರವುಗೊಳಿಸಿ ಗೋಡೆಗಳಿಗೆ ಅಂದವಾದ ಚಿತ್ರ ಬರೆಸಿ ಆಕರ್ಷಕವಾಗಿಸುವುದು ಸೇರಿದಂತೆ ಅನೇಕ ಚಟುವಟಿಕೆಗಳನ್ನು ಮಾಡಲಾಗಿದೆ. ಅತೀ ಹೆಚ್ಚು ತ್ಯಾಜ್ಯ ಬೀಳುತ್ತಿದ್ದ ಸುಮಾರು 30 ಸ್ಥಳಗಳನ್ನು ಸ್ವತ್ಛಗೊಳಿಸಿ ಅಲ್ಲಿ ಹೂಗಿಡಗಳನ್ನಿಟ್ಟು ಸುಂದರಗೊಳಿಸ ಲಾಗಿದೆ. ಅನಧಿಕೃತ ಪೋಸ್ಟರ್, ಬ್ಯಾನರ್ ಹಾವಳಿ ನಿಯಂತ್ರಿಸುವಲ್ಲಿ ಯಶಸ್ವಿಯಾ ಗಿದ್ದೇವೆ ಎಂದರು.
108 ಶಾಲೆಗಳಲ್ಲಿ ಸ್ವತ್ಛ ಮನಸ್ಸು ಅಭಿಯಾನ ಮಾಡಲಾಗಿದೆ. ಮೊದಲಿಗೆ 10,757 ವಿದ್ಯಾರ್ಥಿಗಳನ್ನು ಸ್ವತ್ಛತಾ ಸೇನಾನಿಗಳೆಂದು ಆಯ್ಕೆ ಮಾಡಲಾಯಿತು. ಸ್ವತ್ಛತಾ ಚಿಂತನ, ಸ್ವತ್ಛತಾ ಸ್ಪರ್ಧಾ, ಸ್ವತ್ಛತಾ ದಿವಸ್, ಸ್ವತ್ಛತಾ ಮಂಥನ ಹಾಗೂ ಸ್ವತ್ಛತಾ ದರ್ಶನ ಎಂಬ ಪರಿಕಲ್ಪನೆಯಲ್ಲಿ ಒಟ್ಟು ಸುಮಾರು 500 ಕಾರ್ಯಕ್ರಮಗಳನ್ನು ನಡೆಸಲಾಗಿದೆ. 60 ಸಂಪನ್ಮೂಲ ವ್ಯಕ್ತಿಗಳು ಪ್ರತಿ ತಿಂಗಳು ನಿಗದಿತ ಶಾಲೆಗೆ ತೆರಳಿ ಸ್ವತ್ಛತೆಯ ಕುರಿತು ಮೂಡಿಸಿದ್ದಾರೆ. ಪ್ರತೀ ಶಾಲೆಯಿಂದ ಐವರಂತೆ 500 ವಿದ್ಯಾರ್ಥಿಗಳನ್ನು ಸ್ವತ್ಛ ಮಂಗಳೂರು ರಾಯಭಾರಿಗಳು ಎಂದು ಆಯ್ಕೆ ಮಾಡಿ ವಿಶೇಷ ತರಬೇತಿ ನೀಡಲಾಗಿದೆ. ಜಾದೂವಿನ ಮೂಲಕವೂ ಶುಚಿತ್ವದ ಮಹತ್ವವನ್ನು ತಿಳಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಮಾನಾಥ ಕೋಟೆಕಾರ್, ದಿಲ್‌ರಾಜ್ ಆಳ್ವ, ರಂಜನ್ ಉಪಸ್ಥಿತರಿದ್ದರು.
Related Articles
ಸ್ವಾಮಿ ಶ್ರೀ ಏಕಗಮ್ಯಾನಂದಜಿ ಮಾತನಾಡಿ, ಮಂಗಳೂರಿಗೆ ಸೀಮಿತವಾಗಿದ್ದ ಸ್ವತ್ಛತಾ ಅಭಿಯಾನ ವ®ಚು° ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸ ಬೇಕೆಂಬ ಆಶಯದೊಂದಿಗೆ ನಾಲ್ಕನೇ ಹಂತದ ಅಭಿಯಾನದಲ್ಲಿ ಬಂಟ್ವಾಳ ತಾಲೂಕು ಹಾಗೂ ಮಂಗಳೂರು ತಾಲೂಕಿನ 100 ಗ್ರಾಮಗಳಲ್ಲಿ ಸ್ವತ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ದ.ಕ. ಜಿ.ಪಂ. ನೆರವಿನೊಂದಿಗೆ ತಿಂಗಳಲ್ಲಿ ಒಂದು ಶ್ರಮ ದಾನದಂತೆ 700 ಶ್ರಮದಾನ ನಡೆಸಲಾಗಿದೆ. ಸುಮಾರು 30 ಗ್ರಾಮಗಳಿಗೆ ಕುಡಿಯುವ ನೀರಿನ ಘಟಕ, ನಾಮ ಫಲಕಗಳ ಅಳವಡಿಕೆ, ಅವಶ್ಯವಿದ್ದೆಡೆ ಶೌಚಾಲಯಗಳ ದುರಸ್ತಿ, ನೂತನ ವೈಯಕ್ತಿಕ ಶೌಚಾಲಯಗಳ ನಿರ್ಮಾಣದಂತಹ ಕಾರ್ಯಗಳು ಚಾಲ್ತಿಯಲ್ಲಿವೆ ಎಂದರು.
Advertisement