Advertisement
ನೂತನವಾಗಿ ಲೋಕಾರ್ಪಣೆಗೊಂಡ ಪೊಲೀಸ್ ಲೇನ್ ಮಕ್ಕಳ ಪಾರ್ಕ್ ಎದುರಿಗೆ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾ ಮಾನಂದಜಿ ಉಪಸ್ಥಿತಿಯಲ್ಲಿ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ, ಮನಪಾ ಮಾಜಿ ಸದಸ್ಯ ದಿವಾಕರ್ ಪಾಂಡೇಶ್ವರ ಜಂಟಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು. ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಲಕ್ಷ್ಮೀಪ್ರಸಾದ್, ಕ್ಯಾ| ಗಣೇಶ್ ಕಾರ್ಣಿಕ್, ಡಾ| ಜೀವರಾಜ್ ಸೊರಕೆ, ಡಾ| ಧನೇಶ್ ಕುಮಾರ್, ಗುರುದತ್ತ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
Related Articles
ಸ್ವಚ್ಛ ಮಂಗಳೂರು ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆಯ ಸಿಬಂದಿ ಮುಖ್ಯ ರಸ್ತೆ ಮತ್ತು ತೋಡುಗಳನ್ನು ಶುಚಿಗೊಳಿಸಿದರು. ಇನ್ನೊಂದು ತಂಡದಲ್ಲಿದ್ದ ಸುಧೀರ್, ಯೋಗೀಶ್ ಕಾಯರ್ತಡ್ಕ, ಕಾರ್ಯ ಕರ್ತರು ತ್ಯಾಜ್ಯರಾಶಿ ಬೀಳುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ಲಾರಿಗೆ ತುಂಬಿಸಿ ಜಾಗವನ್ನು ಸಮತಟ್ಟುಗೊಳಿಸಿದರು. ಇದೀಗ ಅಲ್ಲಿ ಆಲಂಕಾರಿಕ ಗಿಡಗಳನ್ನಿಡಲಾಗಿದೆ. ಇಂದಿನಿಂದ ಸ್ವಚ್ಛತಾ ಯೋಧರ ಕಣ್ಗಾವಲು ಪಡೆ ಪೊಲೀಸ್ ಲೇನ್‌ನಲ್ಲಿ ಪ್ರತಿನಿತ್ಯ ಕಾವಲು ಕಾಯಲಿದೆ. ಅಕಸ್ಮಾತ್ ಯಾರಾದರೂ ಕಸ ಹಾಕಿದರೆ ಅವರಿಗೆ ತಿಳಿಹೇಳಿ, ರಸ್ತೆಗೆ ಕಸ ಹಾಕದಂತೆ ಮನವೊಲಿಸುವ ಕಾರ್ಯ ಮಾಡಲಿದೆ.
Advertisement
ಮಾರ್ಗಸೂಚಕ ಫಲಕಗಳ ನವೀಕರಣಪಾಂಡೇಶ್ವರದಲ್ಲಿರುವ 3 ಮಾರ್ಗಸೂಚಕ ಫಲಕಗಳನ್ನಿಂದು ನವೀಕರಿಸಲಾಯಿತು. ಬಿ.ಆರ್. ಕರ್ಕೇರಾ ರಸ್ತೆ ಅನ್ನುವ ಹೆಸರಿನ ಎರಡು, ಡಾ| ಎಂ.ವಿ. ಶೆಟ್ಟಿ ರಸ್ತೆ ಎಂಬ ಫಲಕಗಳನ್ನು ತೊಳೆದು ಶುಚಿಗೊಳಿಸಿ, ಹಳದಿ ಕಪ್ಪು ಬಣ್ಣ ಬಳಿದು ಸುಂದರ ಅಕ್ಷರಗಳಿಂದ ಬರೆದು ನವೀಕರಣಗೊಳಿ ಸಲಾಗಿದೆ. ಶ್ರೀದೇವಿ ಆರ್ಟ್ಸ್ ಕರ್ಣ, ಆನಂದ ಅಡ್ಯಾರ್ ಈ ಕಾರ್ಯದಲ್ಲಿ ಸಹಕಾರ ನೀಡಿದರು. ಜಾಗೃತಿ ಕಾರ್ಯ
ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿನಿಯರು ಅಭಿಷೇಕ ವಿ.ಎಸ್. ಜತೆಗೂಡಿ ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಸ್ವಚ್ಛತೆಯ ಕುರಿತು ಮಾಹಿತಿ ನೀಡಿದರು. ಅಂಗಡಿಯ ವರ್ತಕರಿಗೂ ತಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಮನವಿ ಮಾಡಲಾಯಿತು. ಸುರೇಶ್ ಶೆಟ್ಟಿ ಮಲೇ ರಿಯಾ, ಡೆಂಗ್ಯೂ ಕುರಿತು ಜನರಿಗೆ ಮಾಹಿತಿ ನೀಡಿದರು. ಸ್ವತ್ಛ ಮಂಗಳೂರು ಕನಸಲ್ಲ ಸುಮಾರು 200 ಕೈಪಿಡಿಗಳನ್ನು ಹಂಚಲಾಯಿತು.ಈ ಕಾರ್ಯದಲ್ಲಿ ಸಹಕಾರ ನೀಡಿದರು.