Advertisement
ರಾಮಕೃಷ್ಣ ಮಿಷನ್ ಮಂಗಳೂರು, ನಾಗರಿಕ ಸಲಹಾ ಸಮಿತಿ ಸುರತ್ಕಲ್, ವಿವಿಧ ಸಮಾನ ಮನಸ್ಕ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಎಂ.ಆರ್.ಪಿ.ಎಲ್. ಸಂಸ್ಥೆಯ ನೆರವಿನೊಂದಿಗೆ ನಡೆಯುವ ರಾಮಕೃಷ್ಣ ಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನದ 28ನೇ ವಾರದ ಶ್ರಮದಾನವನ್ನು ಶನಿವಾರ ಗೋವಿಂದದಾಸ ಕಾಲೇಜು ಪರಿಸರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಂಘ – ಸಂಸ್ಥೆಗಳು ಸ್ವತ್ಛತೆಗೆ ಸಹಕಾರಕೊಡುವುದರೊಂದಿಗೆ ಸ್ವಚ್ಛತಾ ಅರಿವು, ಶ್ರಮದಾನದಲ್ಲಿ ಭಾಗವಹಿಸಿದಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯ ಎಂದರು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ಜನರಲ್ಲಿ ಸ್ವಚ್ಛತೆಯ ಅರಿವು ಕಡಿಮೆ ಪ್ರಮಾಣ ದಲ್ಲಿದ್ದು, ಪ್ರತಿಯೋರ್ವರು ಸ್ವತ್ಛತೆ ತಮ್ಮ ಆದ್ಯ ಕರ್ತವ್ಯವೆಂದು ತಿಳಿದಲ್ಲಿ ಸ್ವಚ್ಛ ಸುಂದರ ಭಾರತದ ಕನಸು ನನಸಾಗುವುದರಲ್ಲಿ ಯಾವುದೇ ಸಂದೇಹ ಬೇಡ. ರಾಮಕೃಷ್ಣ ಮಿಷನ್ ಮಾರ್ಗ ದರ್ಶನದಲ್ಲಿ ಸ್ವಯಂ ಸೇವಕರು ಸ್ವಚ್ಛತೆ ನಡೆಸುವುದರಿಂದ ಪ್ರೇರಣೆ ಪಡೆದು ಬಹಳಷ್ಟು ಜನರು ಸ್ವಯಂ ಸ್ಫೂರ್ತಿಯಿಂದ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಶ್ಲಾಘನೀಯ ಎಂದರು.
Related Articles
Advertisement
ಕ್ರೀಡಾ ತರಬೇತುದಾರರಾದ ಸಂದೀಪ್ ಕಡಂಬೋಡಿ, ರಾಕೇಶ್ ಹೊಸಬೆಟ್ಟು, ಸಾದೀಕ್, ಉದಯ ಕುಮಾರ್, ವಿನೋದ್ ಕುಮಾರ್, ಸುಜಿತ್ ಕುಮಾರ್ ಜಮುನ ಸಿಂಗ್, ಮುಂತಾದವರ ನಾಯಕತ್ವದಲ್ಲಿ ವಿದ್ಯಾರ್ಥಿಗಳು ನಾಲ್ಕು ಗುಂಪುಗಳಾಗಿ ಶ್ರಮದಾನದಲ್ಲಿ ಭಾಗವಹಿಸಿದರು.
ದೇಶ ಕಟ್ಟುವಲ್ಲಿ ಭಾಗವಹಿಸಿನಾಗರಿಕ ಸಲಹಾ ಸಮಿತಿ ಸಂಚಾಲಕ ಡಾ|ಕೆ ರಾಜ್‌ಮೋಹನ್ ರಾವ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಸಾಧಿ ಸುವ ಹಂಬಲ ತೀವ್ರವಾಗುತ್ತದೆ. ಅದರೊಂದಿಗೆ ಸ್ವಚ್ಛ ಸುರತ್ಕಲ್ ಅಭಿಯಾನವು ತಮ್ಮದೆಂದು ಭಾವಿಸಿ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಪ್ರತಿಯೋರ್ವರೂ ಭಾಗವಹಿಸ ಬೇಕಾದ ಅಗತ್ಯವನ್ನು ತಿಳಿಸಿದರು. ಸ್ವಚ್ಛತಾ ಜಾಗೃತಿ ಅರಿವು
ಗೋವಿಂದದಾಸ ಕಾಲೇಜಿನ ಉಪಪ್ರಾಂಶುಪಾಲ ಕೃಷ್ಣಮೂರ್ತಿ, ಪ್ರೊ| ರಮೇಶ್ ಭಟ್, ಶಿಕ್ಷಕಿ ಸಾವಿತ್ರಿ ರಮೇಶ್ ಭಟ್, ಶೇಖರ ದೇವಾಡಿಗ ಮೊದಲಾದವರ ನೇತೃತ್ವದಲ್ಲಿ ವರ್ತಕರಿಗೆ ಪರಿಸರವಾಸಿಗಳಿಗೆ ಸ್ವತ್ಛತೆಯ ಅರಿವು ಮೂಡಿಸಲಾಯಿತು. ರಾಮಕೃಷ್ಣ ಮಿಷನ್ ಸ್ವಚ್ಛ ಸುರತ್ಕಲ್ ಅಭಿಯಾನದ ಸಂಯೋಜಕ ಸತೀಶ್ ಸದಾನಂದ್ ಸ್ವಯಂ ಸೇವಕರಿಗೆ ಅಗತ್ಯ ಮಾಹಿತಿ ನೀಡಿದರು.