Advertisement

ಹಂಪಿ ರಾಮ ದೇಗುಲದಲ್ಲಿ ವಿದೇಶಿಯರಿಂದ ರಾಮಕೋಟಿ ಜಪ

08:44 PM Dec 11, 2022 | Team Udayavani |

ಹೊಸಪೇಟೆ: ಪ್ರಸಿದ್ಧ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ಹಂಪಿಗೆ ಆಗಮಿಸಿದ ದೇಶ-ವಿದೇಶಿ ಪ್ರವಾಸಿಗರು, ಭಾನುವಾರ ಹಂಪಿಯ ರಾಮನ ದೇಗುಲದಲ್ಲಿ ರಾಮಕೋಟಿ ಪಾರಾಯಣ ಮಾಡುವ ಮೂಲಕ ಗಮನ ಸೆಳೆದರು.

Advertisement

ಹಂಪಿಯ ಮಾಲ್ಯವಂತ ರಘುನಾಥ ದೇವಾಲಯದ ವೀಕ್ಷಣೆಗೆ ತೆರಳಿದ ವಿದೇಶಿ ಪ್ರವಾಸಿಗರು, ದೇವಾಲಯದಲ್ಲಿ ನಡೆಯುತ್ತಿದ್ದ ರಾಮಜಪ ಪಾರಾಯಣ ಕಂಡು ಮಾರು ಹೋಗಿ ರಾಮಜಪ ಮಾಡುವ ಮೂಲಕ ರಾಮಭಕ್ತರ ಪ್ರೀತಿಗೆ ಪಾತ್ರರಾದರು.

ಹಂಪಿಗೆ ಭೇಟಿ ನೀಡಿದ ಇಸ್ರೇಲ್ ದೇಶದ ಸುಮಾರು 20 ಪ್ರವಾಸಿಗರು ಮಾಲ್ಯವಂತ ರಘುನಾಥ ದೇಗುಲದಲ್ಲಿ ಸೂರ್ಯಸ್ತವನ್ನು ನೋಡಲು ಬಂದಿದ್ದರು. ಈ ವೇಳೆ ದೇಗುಲದಲ್ಲಿ ರಾಮ ನಾಮ ಕೋಟಿ ಹಾಗೂ ಹನುಮಾನ್ ಚಾಲೀಸಾವನ್ನು ನಿರಂತರವಾಗಿ ನಡೆಯುವ ಭಜನೆಯಲ್ಲಿ ಪಾಲ್ಗೊಂಡರು.

ಭಜನೆಗೆ ಮಾರುಹೋದ ವಿದೇಶಿಗರು ರಾಮ ಮಂತ್ರ ಪಠಣದಲ್ಲಿ ಮಗ್ನರಾದರು. ಹಿಂದೂ ಧರ್ಮ ಹಾಗೂ ರಾಮಾಯಣ ಬಗ್ಗೆ ತಿಳಿದುಕೊಂಡಿದ್ದು, ಇಂಥ ಪವಿತ್ರ ಸ್ಥಳಗಳಿಗೆ ಬಂದಾಗ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಎಂದು ವಿದೇಶಿ ಪ್ರವಾಸಿಗರು ಅನಿಸಿಕೆ ಹಂಚಿಕೊಂಡರು. ಹಂಪಿ ಆಧ್ಯಾತ್ಮಿಕ ಶ್ರದ್ಧಾ ಕೇಂದ್ರವಾಗಿದ್ದು ಪೌರಾಣಿಕ ಪ್ರಸಿದ್ಧಿ ಹೊಂದಿದೆ. ಈ ನಡುವೆಯೂ ಆನೆಗುಂದಿಯ ಹನುಮನ ಜನ್ಮಸ್ಥಳ ಅಂಜನಾದ್ರಿ ಕ್ಷೇತ್ರ ಕೂಡ ಪ್ರಸಿದ್ಧಿ ಹೊಂದುತ್ತಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next