Advertisement
ಈ ಗುಹೆಗಳಲ್ಲಿ ಲಭಿಸಿರುವ ರಾಮಾಯಣದ ಹಸ್ತಪ್ರತಿಗಳು ಅತೀ ಪ್ರಾಚೀನವಾದ ಟಿಬೆಟಿಯನ್ ಭಾಷೆಯಲ್ಲಿ ಇದೆ. ಭಾರತದ ವಾಲ್ಮೀಕಿ ರಾಮಾಯಣಕ್ಕೂ, ಟಿಬೆಟಿಯನ್ ರಾಮಾಯಣಕ್ಕೂ ಬಹಳಷ್ಟು ವ್ಯತ್ಯಾಸಗಳಿವೆಯಾದರೂ ಭಾರತದಲ್ಲಿ ಪ್ರಚಲಿತವಿರುವ ರಾಮಾಯಣದಲ್ಲಿ ಬರುವ ಬಹುತೇಕ ಪಾತ್ರಗಳು ಟಿಬೆಟಿಯನ್ ರಾಮಾಯಣದಲ್ಲೂ ಬರುತ್ತವೆ ಮತ್ತು ಇಲ್ಲಿಯೂ ರಾಮ-ಸೀತೆಯರೇ ಪ್ರಮುಖ ಪಾತ್ರಧಾರಿಗಳು.ಟಿಬೆಟಿಯನ್ ರಾಮಾಯಣದಲ್ಲಿ ರಾಮನು ದಶರಥನ ಕೊನೆಯ ಮಗನಾಗಿದ್ದು, ಲಕ್ಷಣನು ಮೊದಲ ಪುತ್ರನಾಗಿರುತ್ತಾನಂತೆ. ಜತೆಗೆ ಭರತ ಹಾಗೂ ಶತ್ರುಘ್ನರ ಯಾವುದೇ ಉಲ್ಲೇಖಗಳು ಇದರಲ್ಲಿ ಕಂಡುಬರುವುದಿಲ್ಲ. ಇನ್ನು ಈ ರಾಮಾಯಣದಲ್ಲಿ ಸೀತೆ, ರಾವಣನ ಮಗಳು ಎಂಬ ಉಲ್ಲೇಖವಿದೆ.
Related Articles
Advertisement
ಬರ್ಮಾದಲ್ಲಿ ಯಮ ಎಂದರೆ ರಾಮ ಹಾಗೂ ಮೆಂತಿಡಾ ಎಂದರೆ ಸೀತಾ ಎಂದು ಅರ್ಥ. ಯಮ ಜಟಡಾವು 11ನೇ ಶತಮಾನದಲ್ಲಿ ರಾಜ ಅನವರತನ ಕಾಲದಲ್ಲಿ ಪರಿಚಯಿಸಲಾದ ಜಾತಕ ಕತೆಗಳ ಒಂದು ಭಾಗವೆಂದು ಹೇಳಲಾಗುತ್ತದೆ. ಹೆಚ್ಚಿನ ಭಾಗವು ವಾಲ್ಮೀಕಿ ರಾಮಾಯಣದೊಂದಿಗೆ ಹೋಲಿಕೆಯನ್ನು ಹೊಂದಿದೆ. ಭಾರತದಲ್ಲಿ ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ರಾಮಲೀಲಾವನ್ನು ಪ್ರದರ್ಶಿಸಿದಂತೆ ಅಲ್ಲಿ ಯಮ ಜಟಡಾವನ್ನು ನಾಟಕದ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಮ್ಯಾನ್ಮಾರ್‌ನ ಸಂಸ್ಕೃತಿ, ಜಾನಪದ ಸಂಗತಿಗಳನ್ನು ಇದು ಒಳಗೊಂಡಿದ್ದು ದೃಶ್ಯರೂಪಕದ ಮಾದರಿಯಲ್ಲಿ ಪ್ರದರ್ಶಿಸಲ್ಪಡುತ್ತದೆ.
ರಾಮನ ಕರೆದರೆ ಹನುಮನೂ ಬರುವ ತಾರಕ ಮಂತ್ರ“ಶ್ರೀರಾಮ ಜಯರಾಮ ಜಯಜಯ ರಾಮ’ವನ್ನು ರಾಮತಾರಕ ಮಂತ್ರವೆಂದು ಹೇಳುತ್ತಾರೆ. ಸ್ವತಃ ಶಿವ ಪಾರ್ವತಿಗೆ ಉಪದೇಶಿಸಿದ ಮಂತ್ರ ಇದು ಎಂಬ ಪ್ರತೀತಿಯಿದೆ. ಈ ಮಂತ್ರ ಕ್ಕೊಂದು ವಿಶೇಷವಿದೆ. ಇದು ರಾಮನಿಗೆ ಸಂಬಂಧಿಸಿರುವ ಮಂತ್ರವಾದರೂ, ಇದನ್ನು ಪಠಿಸಿದಾಗ ಅಲ್ಲಿ ಹನುಮನೂ ಬರುತ್ತಾನೆ! ಒಂದು ಮಂತ್ರವನ್ನು ಪಠಿಸಿದಾಗ ಇಬ್ಬರು ದೇವತೆಗಳು ಬರುವ ಏಕೈಕ ಮಂತ್ರ ಇದು ಎಂದು ಖ್ಯಾತವಾಗಿದೆ. ಅಯೋಧ್ಯೆಯಲ್ಲಿ ಮಂದಿರ ಉದ್ಘಾಟನೆಯಾಗುವ ಹೊತ್ತಿನಲ್ಲೇ ಈ ಮಂತ್ರದ ಪಠಣ ದೇಶಾದ್ಯಂತ ತಾರಕಕ್ಕೇರಿದೆ!