Advertisement

ಮಳೆ ನಿಂತರೂ ನಿಲ್ಲದ ಕಣ್ಣೀರು

01:22 PM Aug 15, 2019 | Naveen |

ರಾಮದುರ್ಗ: ಮಲಪ್ರಭೆಯ ಪ್ರವಾಹ ಹೊಡೆತಕ್ಕೆ ಸಿಲುಕಿದ 30 ಗ್ರಾಮಗಳು ಸಂಪೂರ್ಣ ಜಲಾವೃತವಾಗಿ ಕೊಟ್ಯಂತರ ಆಸ್ತಿ-ಪಾಸ್ತಿ ನಾಶವಾಗಿ ಜನತೆ ಬದುಕಿ ಬರಿದಾಯಿತು ಎನ್ನುತ್ತಿದ್ದರೆ. ಹಾನಿಯ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿ ನಿರಾಶ್ರಿತರ ಬದುಕಿಗೆ ಆಸರೆಯಾಬೇಕಿದ್ದ ತಾಲೂಕಾಡಳಿತ ಮಾತ್ರ ಸರ್ಕಾರಕ್ಕೆ ರವಿವಾರದ ವರೆಗೆ ತಾಲೂಕಿನಲ್ಲಿ ಕೇವಲ 235 ಮನೆಗಳ ನಾಶ, ಕೇವಲ 92.6 ಹೆಕ್ಟರ್‌ ಮಾತ್ರ ಬೆಳೆ ನಾಶದ ಕುರಿತು ಮಾಹಿತಿ ನೀಡಿರುವದನ್ನು ನೋಡಿದರೆ ಪ್ರವಾಹ ಪೀಡಿತ ಪ್ರದೇಶದ ನೈಜ ಮಾಹಿತಿ ನೀಡವಲ್ಲಿ ತಾಲೂಕಾಡಳಿತ ಸಂಪೂರ್ಣ ವಿಫಲಗೊಂಡಿದೆ.

Advertisement

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಉಂಟಾಗುತ್ತಿರುವ ಪ್ರವಾಹದ ಕುರಿತು ಕ್ಷಣ ಕ್ಷಣಕ್ಕೂ ಸರಕಾರ ಮಾಹಿತಿ ನೀಡುವಂತೆ ಜಿಲ್ಲಾ ಹಾಗೂ ತಾಲೂಕಾಡಳಿತಕ್ಕೆ ಕಟ್ಟು ನಿಟ್ಟಿನ ಆದೇಶ ಮಾಡಿದರೂ ಅದು ರಾಮದುರ್ಗ ತಾಲೂಕಾಡಳಿತ ನೈಜ ಮಾಹಿತಿ ಸರಕಾರಕ್ಕೆ ನೀಡುವಲ್ಲಿ ವಿಫಲವಾಗಿದ್ದು, ಸಂತ್ರಸ್ತರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.

ಅವ್ಯವಸ್ಥೆಯಾದ ಪರಿಹಾರ ಕೇಂದ್ರ: ತಾಲೂಕಿನಲ್ಲಿ ಸುಮಾರು 60 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿದೆ. ಸಂತ್ರಸ್ತರ ನೋವಿಗೆ ಸ್ಪಂದಿಸುತ್ತಿರುವ ದಾನಿಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಆದರೆ ತಾಲೂಕಾಡಳಿತ ಮಾತ್ರ ನೆಪ ಮಾತ್ರಕ್ಕೆ ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಹೇಳುತ್ತಿದ್ದಾರೆ. ಆದರೆ ನಮಗೆ ತಾಲೂಕಾಡಳಿತ ಮಾತ್ರ ಸೌಲಭ್ಯ ಕಲ್ಪಿಸಿಲ್ಲ. ತಾತ್ಕಾಲಿಕವಾಗಿ ತಗಡಿನ ಶೆಡ್ಡು ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಕೆಲ ನೋಂದ ನಿರಾಶ್ರಿತರು ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next