Advertisement

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ: ರಾಮದಾಸ್‌

11:38 PM Aug 31, 2019 | Team Udayavani |

ಮೈಸೂರು: ಬಿಜೆಪಿಗೆ ಬಹಳ ಜನ ಅತಿಥಿಗಳು ಬಂದಿರುವುದರಿಂದ ಮೊದಲು ಅವರಿಗೆ ಆದ್ಯತೆ ನೀಡಬೇಕಿದೆ. ಹೀಗಾಗಿ, ನನಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ನೋವು ಇಲ್ಲ. ಬೇಸರವೂ ಇಲ್ಲ. ದಸರಾ ಕಾರ್ಯಕ್ರಮಗಳಲ್ಲಿ ಇನ್ನು ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ದೇವೋಭವ ಎನ್ನುವ ಸಂಸ್ಕೃತಿ ನಮ್ಮದು. ಹೀಗಾಗಿ, ಪಕ್ಷಕ್ಕೆ ಬರುವ ಅತಿಥಿಗಳಿಗೆ ಮೊದಲು ಉಣ ಬಡಿಸಲಿ, ನಂತರ ನಮ್ಮದು ಎಂದರು. ಗಜಪಯಣದೊಂದಿಗೆ ದಸರಾ ಆರಂಭವಾಗುತ್ತದೆ. ವೀರನಹೊಸಳ್ಳಿಯಲ್ಲಿ 11.30ರವರೆಗೆ ಗಜಪಡೆ ಪೂಜೆಗೆ ಮುಹೂರ್ತ ನಿಗದಿಯಾಗಿತ್ತು.

ಹೀಗಾಗಿ, ಮುಹೂರ್ತ ಮೀರಬಾರದು ಎಂಬ ಕಾರಣಕ್ಕೆ 11ಗಂಟೆಗೆ ಪ್ರಧಾನಿ ಮತ್ತು ಮುಖ್ಯಮಂತ್ರಿ ಹೆಸರಲ್ಲಿ ಪೂಜೆ ಸಲ್ಲಿಸಿ, ಅರ್ಜುನನಿಗೆ ಫ‌ಲ ತಾಂಬೂಲ ನೀಡುವಾಗ ನಾನೊಬ್ಬನೇ ಇದ್ದೆ. ಇತ್ತೀಚೆಗೆ ಸುಳ್ಯ ಬಳಿ ಅಪಘಾತವಾಗಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು. ಆದ್ದರಿಂದ ದಸರಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಾಗಿಲ್ಲ. ಇದರ ಹೊರತಾಗಿ ಮಂತ್ರಿ ಸ್ಥಾನ ಕೊಟ್ಟಿಲ್ಲ ಎಂಬ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next