Advertisement

ಎಲ್ಲೆಡೆ ರಂಜಾನ್‌ ಸರಳ ಆಚರಣೆ

07:08 AM May 26, 2020 | Suhan S |

ಕೊಪ್ಪಳ: ಪ್ರತಿವರ್ಷ ಜಿಲ್ಲಾದ್ಯಂತ ಮುಸ್ಲಿಂ ಸಮಾಜದವರು ಪವಿತ್ರ ರಂಜಾನ್‌ ಹಬ್ಬವನ್ನು ಸರಳವಾಗಿ ಮನೆಯಲ್ಲೇ ಆಚರಣೆ ಮಾಡಿದರು.

Advertisement

ಹೀಗಾಗಿ ಈದ್ಗಾ ಮೈದಾನಗಳೆಲ್ಲವೂ ಭಣಗುಡುತ್ತಿದ್ದವು. ರಂಜಾನ್‌ ಮಾಸದಲ್ಲಿ ಉಪವಾಸ ವ್ರತ ಆಚರಣೆ ಮಾಡಿ ತಮ್ಮ ಕೈಲಾದಷ್ಟು ದಾನ-ಧರ್ಮ ಮಾಡಿ ಮನೆಯಲ್ಲಿ ಎಲ್ಲರೂ ಹೊಸಬಟ್ಟೆ ಧರಿಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿವರ್ಷವೂ ಹಬ್ಬದ ಸಡಗರ ಜೋರಾಗಿರುತ್ತದೆ. ಆದರೆ ಈ ಬಾರಿ ಕೋವಿಡ್  ಮಹಾಮಾರಿ ಎಲ್ಲ ಕ್ಷೇತ್ರಗಳ ಮೇಲೂ ತನ್ನ ಕರಿನೆರಳು ಚಾಚಿದೆ.

ಹೀಗಾಗಿ ಸರ್ಕಾರವೇ ರಂಜಾನ್‌ ಹಬ್ಬವನ್ನು ಮನೆಯಲ್ಲಿಯೇ ಸರಳವಾಗಿ ಆಚರಣೆ ಮಾಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ರಂಜಾನ್‌ ಅತ್ಯಂತ ಸರಳವಾಗಿ ಆಚರಣೆ ಮಾಡಲಾಯಿತು. ಪ್ರತಿವರ್ಷವೂ ಈದ್ಗಾ ಮೈದಾನಗಳು ಹಬ್ಬದ ಪ್ರಾರ್ಥನೆ ವೇಳೆ ಗಿಜುಗುಡುತ್ತಿದ್ದವು. ಹಬ್ಬದ ಶುಭಾಶಯ ಕೋರುತ್ತಿದ್ದರು. ಈ ಬಾರಿ ಈದ್ಗಾ ಮೈದಾನಗಳನ್ನು ಬಂದ್‌ ಮಾಡಲಾಗಿತ್ತು. ಪೊಲೀಸರು ಯಾವುದೇ ಮೈದಾನದಲ್ಲಿ ಸಾಮೂಹಿಕ ಸೇರದಂತೆ ಬ್ಯಾನರ್‌ ಅಳವಡಿಸಿ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವಂತೆ ಮನವಿ ಮಾಡಿದ್ದರು. ಎಲ್ಲೆಡೆಯೂ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next