Advertisement
ಮುಸಲ್ಮಾನರಿಗೆ ರಂಜಾನ್ ಪವಿತ್ರ ಹಬ್ಬವಾಗಿದ್ದು, ಒಂದು ತಿಂಗಳ ಕಾಲ ಉಪವಾಸ ವೃತ ಕೈಗೊಂಡು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ದೇವರ ಆರಾಧನೆ ಮೂಲಕ ಪ್ರಾರ್ಥನೆ ಸಲ್ಲಿಸುವ ಪದ್ಧತಿ ತಲೆತಲಾತರಗಳಿಂದ ನಡೆದುಕೊಂಡು ಬಂದಿದೆ.
Related Articles
Advertisement
ಉಪವಾಸ ಮುರಿಯುವ ಮುನ್ನಾ ಸಮೋಸ ಹಾಗೂ ಇತರೆ ಖಾದ್ಯ ಪದಾರ್ಥಗಳನ್ನು ಮುಂದಿಟ್ಟುಕೊಂಡು ನಿಗದಿತ ಸಮಯದಲ್ಲಿ ಉಪವಾಸವನ್ನು ಅಂತ್ಯ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಸಮೋಸ ಹಾಗೂ ಖರ್ಜೂರುಗಳಿಗೆ ಒಂದು ತಿಂಗಳವರೆಗೂ ಹೆಚ್ಚಿನ ಬೇಡಿಕೆ ಇರುತ್ತದೆ.
ರಸ್ತೆ ಬದಿ ವ್ಯಾಪಾರ ಬಲು ಜೋರು: ಬೆಲೆ ಏರಿಕೆ ನಡುವೆಯೂ ಮುಸ್ಲಿಂ ಬಾಂಧವರು ಪವಿತ್ರ ಹಬ್ಬದ ಆಚರಣೆಗೆ ಸಜ್ಜಾಗುತ್ತಿದ್ದಾರೆ. ನಗರದ ಪ್ರಮುಖ ಮಸೀದಿಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮೋಸ, ಬೋಂಡಾ, ತರಹೇವಾರಿ ಹಣ್ಣುಗಳು, ತಿಂಡಿ ತಿನಿಸುಗಳು ರಸ್ತೆ ಬದಿಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ. ವ್ಯಾಪಾರಿಗಳೂ ಸಹ ಹಬ್ಬದಲ್ಲಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಬೆಲೆ ಏರಿಕೆ ಬಿಸಿ: ಪ್ರತಿ ಸಂಜೆ ಸಮೋಸ ಅಂಗಡಿಯಲ್ಲಿ ಸುಮಾರು 2ಸಾವಿರಕ್ಕೂ ಹೆಚ್ಚು ಸಮೋಸ ಮಾರಾಟವಾಗುತ್ತಿವೆ. ಮುಸ್ಲಿಂ ಬಾಂಧವರು ತಾಮುಂದು ನೀ ಮುಂದು ಎಂದು ಖರೀದಿಸುವಲ್ಲಿ ನಿರತರಾಗುತ್ತಾರೆ. ಮಸೀದಿಯಲ್ಲಿ ಒಟ್ಟಾಗಿ ಕುಳಿತು ಉಪವಾಸ ಮುರಿಯುವುದು ವಾಡಿಕೆಯಾಗಿದೆ.
ಬೆಲೆ ಏರಿಕೆ ಹೆಚ್ಚಾಗಿರುವುದರಿಂದ ಸಮೋಸ ಮಾಡುವುದಕ್ಕೆ ಹೆಚ್ಚಿನ ಬೆಲೆ ನೀಡಿ ಪದಾರ್ಥಗಳನ್ನು ಮಾರುಕಟ್ಟೆಯಿಂದ ತರಬೇಕು. ಹಾಕುವ ಬಂಡವಾಳ ಕೈಗೆಟುಕುವುದಿಲ್ಲ. ಆಗಿನಿಂದ ಮಾಡಿಕೊಂಡು ಬಂದಿರುವ ಸಮೋಸ ಮಾರಾಟವನ್ನು ಮುಂದುವರೆಸಿಕೊಂಡು ಹೋಗಿದ್ದೇವೆ ಎಂದು ವ್ಯಾಪಾರಿ ಫಯಾಜ್ ಹೇಳುತ್ತಾರೆ.
ದರಗಳು ಎಷ್ಟಾದರೂ ಸರಿ: ರಂಜಾನ್ ನಮ್ಮ ಪವಿತ್ರ ಹಬ್ಬವಾಗಿದ್ದು, ಎಷ್ಟೇ ದರಗಳು ಏರಿಕೆಯಾದರೂ ಹಬ್ಬವನ್ನು ಮಾಡುವುದು ಆಗಿನಿಂದಲೂ ಬಂದಿರುತ್ತದೆ. ಸಮೋಸ 30ರೂ. ಆದರೂ, ತಿನ್ನುವ ಮನ ಸೆಳೆಯುತ್ತದೆ. ಒಂದು ಸಮೋಸ 10ರೂ.ಗೆ ಸಿಗುತ್ತದೆ. ಉಪವಾಸ ಮುರಿಯುವ ಮುನ್ನಾ ಮನೆಗಳಿಗೂ ಪಾರ್ಸಲ್ ಕಟ್ಟಿಸಿಕೊಂಡು ಬರುತ್ತೇವೆ. ಜೊತೆಯಲ್ಲಿ ಹಣ್ಣು ಹಂಪಲು, ಖರ್ಜೂರ, ಇತರೆ ಖಾದ್ಯಗಳನ್ನು ತರುತ್ತೇವೆ ಎಂದು ಗ್ರಾಹಕ ಸಿಕಂದರ್ ಪಾಷಾ ಹೇಳುತ್ತಾರೆ.
* ಎಸ್.ಮಹೇಶ್