Advertisement

ರಂಜಾನ್‌ ಉಪವಾಸ: ಮಧುಮೇಹಿಗಳಲ್ಲಿ ಇರಲಿ ಎಚ್ಚರ 

12:42 PM Jun 17, 2017 | Team Udayavani |

ಬೆಂಗಳೂರು: ಈ ಬಾರಿಯ ರಂಜಾನ್‌ ಉಪವಾಸ ಅವಧಿ ದೀರ್ಘ‌ವಾಗಿದೆ. ಉಪವಾಸ ವೃತ ಆಚರಿಸುವ ಮಧುಮೇಹಿಗಳು ಆರೋಗ್ಯದ ದೃಷ್ಟಿಯಿಂದ ಮಿತ ಆಹಾರ ಸೇವಿಸಬೇಕು ಎಂದು ನೈಟಿಂಗಲ್ಸ್‌ ಸಂಸ್ಥೆ ಮುಖ್ಯ ವೈದ್ಯ ಡಾ. ಜಮೀಲ್‌ ಖಾನ್‌ ತಿಳಿಸಿದ್ದಾರೆ. 

Advertisement

 ಉಪವಾಸದ ಅವಧಿ 15 ಗಂಟೆಗೂ ಹೆಚ್ಚಾಗಿರುವುದರಿಂದ ಮಧುಮೇಹಿಗಳಿಗೆ ಸಕ್ಕರೆ ಮಟ್ಟ ಹೆಚ್ಚಾಗಿರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು. ಅನಿಯಮಿತ ಆಹಾರ ಮಧುಮೇಹಿಗಳಿಗೆ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಹಾಗಾಗಿ ಸೆಹ್ರಿ (ಉಪವಾಸ ಆರಂಭಿಸುವ ಸಮಯ) ಹಾಗೂ ಇಫ್ತಾರ್‌ (ಉಪವಾಸ ಮುಕ್ತಾಗೊಳಿಸುವ ಸಮಯ) ಸಂದರ್ಭದಲ್ಲಿ ಮಿತ ಆಹಾರ ಸೇವಿಸಬೇಕು. 

ಸೆಹ್ರಿ ವೇಳೆ ಮಧುಮೇಹಿಗಳು ಸಿರೀಲ್‌, ನಾನ್‌ ಬ್ರೆಡ್‌, ಬಹುಧಾನ್ಯ ಬ್ರೆಡ್‌, ಬಾಸ್ಮತಿ ಅಕ್ಕಿ, ಬೇಳೆ-ಕಾಳು, ಬೀನ್ಸ್‌, ಹಣ್ಣು ತರಕಾರಿಗಳಂತಹ ಕಾಬೋìಹೈಡ್ರೇಟ್‌ಗಳಿರುವ ಆಹಾರ ಪದಾರ್ಥಗಳನ್ನು ಸೇವಿಸಬಹುದು. ಸಕ್ಕರೆ ಮುಕ್ತ ಪಾನೀಯಗಳು ಮತ್ತು ನೀರನ್ನು ಹೆಚ್ಚಾಗಿ ಕುಡಿಯಬೇಕು. ಎಣ್ಣೆಯಲ್ಲಿ ಕರೆದ ಪದಾರ್ಥಗಳು, ಮಾಂಸಹಾರದಿಂದ ದೂರು ಇರಬೇಕೆಂದು ಅವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next