Advertisement

ಭಾಸ್ಕರ ಜೋಶಿಗೆ ರಾಮಚಂದ್ರ ಭಟ್ಟ ಸಂಸ್ಮರಣಾ ಪ್ರಶಸ್ತಿ

05:40 PM Nov 28, 2019 | mahesh |

ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ ಭಾಸ್ಕರ ಜೋಶಿ ಶಿರಳಗಿ ಅವರು ಈ ಬಾರಿಯ ಅರೆಶಿರೂರು ದಿ|ರಾಮಚಂದ್ರ ಭಟ್ಟ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ‌ ನ. 30 ರಂದು ಕುಂದಾಪುರದ ಯಳಜಿತ ಗ್ರಾಮದ ಹೆರಗುಡಿ ಶ್ರೀ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಲಿದೆ.

Advertisement

ಭಾಸ್ಕರ ಜೋಶಿ ಅವರು ಉತ್ತರಕನ್ನಡದ ಶಿರಳಗಿಯವರು. ಹದಿನೈದನೆಯ ವಯಸ್ಸಿನಲ್ಲಿ ಯಕ್ಷಗಾನದತ್ತ ಆಕರ್ಷಿತರಾಗಿ ಕೊಳಗಿ ಮೇಳದಲ್ಲಿ ರಂಗ ಪ್ರವೇಶಿಸಿ, ಕೊಳಗಿ ಅನಂತ ಹೆಗಡೆಯವರಿಂದ ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡು, ಮುಂದೆ ಹೊಸ್ತೋಟ ಮಂಜುನಾಥ ಭಾಗವತರ ಮಾರ್ಗದರ್ಶನದಲ್ಲಿ ಪಳಗಿದರು. ಆನಂತರ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಅಧ್ಯಯನ ಮಾಡಿ ಕಾರಂತರ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಗಜಾನನ ಹೆಗಡೆ ಕೆರಮನೆಯವರ ಸಹಕಾರದಿಂದ ಸ್ತ್ರೀವೇಷಧಾರಿಯಾಗಿ ಮಿಂಚಿದರು.

ಇಡಗುಂಜಿ, ಅಮೃತೇಶ್ವರಿ, ಶಿರಸಿ, ಸಾಲಿಗ್ರಾಮ, ಪೆರ್ಡೂರು, ಬಚ್ಚಗಾರು ಮೇಳಗಳಲ್ಲಿ ಗೆಜ್ಜೆಕಟ್ಟಿ ನಲವತ್ತು ವರ್ಷ ರಂಜಿಸಿದರು.ಅವರ ದಾಕ್ಷಾಯಣಿ, ಅಂಬೆ, ಸುಭದ್ರೆ, ಶಾರದೆ, ಸೀತೆ, ದ್ರೌಪದಿ, ವಿಷಯೆ, ನಾಗಶ್ರೀ, ಚಿತ್ರಾವತಿ ಮೊದಲಾದ ಪಾತ್ರಗಳು ಜನಮಾನಸದಲ್ಲಿ ಚಿರಾಯುವಾಗಿವೆ.

ವಿಷ್ಣು ಭಟ್ಟ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next