Advertisement
ಗೇರು ಹಣ್ಣು ಮತ್ತು ನಾವುಗೇರು ಹಣ್ಣು ತಿಂದರೆ ಆರೋಗ್ಯಕ್ಕೆ ಲಾಭ ಜಾಸ್ತಿ ಎನ್ನುವುದು ನಮ್ಮ ಹಿರಿಯರು ಕಂಡುಕೊಂಡ ಸತ್ಯ. ಹಸಿದ ಹೊಟ್ಟೆಗೆ ಆಹಾರವಾಗಿ ಬಳಸುತ್ತಿದ್ದ ಗೇರು ಸಾಮಾನ್ಯ ಜನರ ಪಾಲಿಗೆ ವರದಾನವಾಗಿತ್ತು. ಧಾರಾಳವಾಗಿ ಫಸಲು ಬಿಡುತ್ತಿದ್ದ ಗೇರು ಹಣ್ಣುಗಳನ್ನು ಗೋವುಗಳಿಗೆ ಆಹಾರವಾಗಿಯೂ ಉಪಯೋಗಿಸುತ್ತಿದ್ದರು.ಇಂದೂ ದೇಶದ ಹಲವಾರು ಕಡೆಗಳಲ್ಲಿ ಇದನ್ನು ಕಾಣಬಹುದು.
ಅನಾಕಾರ್ದಿಕ್ ಎಂಬ ಆಮ್ಲವನ್ನು ಹೊಂದಿರುವ ಈ ಹಣ್ಣು ಬ್ಯಾಕ್ಟೀರಿಯಾ ನಿರೋಧಕ. ಆದುದರಿಂದ ಹೊಟ್ಟೆಯಲ್ಲಿನ ಜಂತುಗಳಿಗೆ ರಾಮಬಾಣವಾಗಿರುವ ಗೇರುಹಣ್ಣು ವಿಟಮಿನ್ ಸಿ, ಬಿ1, ಬಿ3 ಮಾತ್ರವಲ್ಲದೆ ಕ್ಯಾಲಿÏಯಂ, ಬೀಟಾ ಕ್ಯಾರೋಟಿನ್ ಅಂಶಗಳನ್ನೂ ಹೇರಳವಾಗಿ ಒಳಗೊಂಡಿದೆ. ಅತಿವೇಗವಾಗಿ ಗಾಯಗಳನ್ನು ಗುಣ ಮಾಡುವ ಗೇರುಹಣ್ಣು ಮೂಳೆ ಸವೆತ ನಿವಾರಣೆಗೂ ಉಪಯುಕ್ತ. ಕೆಂಪು ರಕ್ತಕಣಗಳನ್ನು ವೃದ್ಧಿಯಾಗಿಸಿ ಕಣ್ಣಿನ ಊತ, ಕಣ್ಣಿನ ಪೊರೆಯ ತೊಂದರೆಗಳನ್ನು ನೀಗಿಸುವ ಗೇರುಹಣ್ಣು ಸೇವಿಸುವುದರಿಂದ ಹƒದಯದ ಸ್ನಾಯುಗಳು ಬಲಿಷ್ಠವಾಗುತ್ತದೆ. ಹಾಗೆಯೇ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯಬಲ್ಲ ಗುಣವನ್ನೂ ಹೊಂದಿರುವುದಾಗಿ ಇತ್ತೀಚೆಗಿನ ಸಂಶೋಧನೆಗಳಲ್ಲಿ ಸಾಭೀತಾಗಿರುವುದಾಗಿ ಹೇಳಲಾಗುತ್ತದೆ. ದೇಹಕ್ಕೆ ಬೇಕಾದ ಕಬ್ಬಿಣದ ಅಂಶವೂ ಧಾರಾಳವಾಗಿರುವ ಗೇರು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂಬುವುದು ಬಲ್ಲವರ ಅಭಿಪ್ರಾಯ.
Related Articles
ಬಹಳ ಹಿಂದಿನಿಂದಲೇ ವೈನ್ ತಯಾರಿಗಾಗಿ ಬಳಸುವ ವಸ್ತುಗಳಲ್ಲಿ ಗೇರುಹಣ್ಣಿಗೂ ಪ್ರಮುಖ ಸ್ಥಾನವಿದೆ. ಹಣ್ಣನ್ನು ಹುಳಿ ಬರಿಸಿ, ಕುದಿಸಿ ಬಟ್ಟಿ ಇಳಿಸಿ ತೆಗೆದ ವೈನ್ ಆರೋಗ್ಯಕ್ಕೆ ಉತ್ತಮ ಹಾಗೂ ಹೊಟ್ಟೆ ಸಂಬಂ ಕಾಯಿಲೆಗಳನ್ನು ನಿವಾರಿಸಿ, ಜೀರ್ಣಕ್ರೀಯೆ ಚೆನ್ನಾಗಿ ಆಗುವಂತೆ ಮಾಡುತ್ತದೆ. ಪ್ರಸ್ತುತ ಕಾಲಘಟ್ಟದಲ್ಲು ಗೇರುಹಣ್ಣಿನ ವೈನ್ ತನ್ನ ಪ್ರಾಧಾನ್ಯತೆಯನ್ನು ಉಳಿಸಿಕೊಂಡಿದೆ.
Advertisement
ಪೋರ್ಚುಗೀಸಿನಿಂದ ಭಾರತಕ್ಕೆಬ್ರೆಜಿಲ್ನ ಮುಖ್ಯ ಬೆಳೆಯಾದ ಗೇರನ್ನು ಭಾರತಕ್ಕೆ ತಂದವರು ಪೋರ್ಚುಗೀಸರು ಎಂದು ಚರಿತ್ರೆ ಹೇಳುತ್ತದೆ. ಕರಾವಳಿ ತೀರದ ಗುಡ್ಡಗಾಡುಗಳಲ್ಲಿ ಮೆಲ್ಲ ಮೆಲ್ಲನೆ ಹರಡಿ ಹಬ್ಬಿಕೊಂಡ ಗೇರು ಹಣ್ಣು ಇಂದು ಭಾರತಕ್ಕೆ ಆದಾಯ ತರುತ್ತಿರುವ ಎರಡನೆ ಅತಿದೊಡ್ಡ ಬೆಳೆ. ಹಳ್ಳಿಗಳಲ್ಲಿ ಗೇರು ತೋಪುಗಳು ಈಗಲೂ ಕಾಣಬಹುದಾಗಿದೆ. ಗೋಡಂಬಿಗೆ ಬೇಡಿಕೆ
ಗೇರು ಹಣ್ಣಿನಂತೆ ಗೇರುಬೀಜವೂ ಮಾರುಕಟ್ಟೆ ಯಲ್ಲಿ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಆಹಾರ ಪದಾರ್ಥಗಳಲ್ಲಿ, ಸಿಹಿತಿನಿಸುಗಳಲ್ಲಿ ಧಾರಾಳ ವಾಗಿ ಉಪಯೋಗಿಸಲ್ಪಡುವ ಗೋಡಂಬಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಆರೋಗ್ಯಕ್ಕೆ ಒಳ್ಳೆಯ ಪುಷ್ಠಿ ನೀಡುವ ಗೋಡಂಬಿಗೆ ಮಾರುಕಟ್ಟೆಯಲ್ಲಿ ಕಿಲೋ ಒಂದಕ್ಕೆ 400ರಿಂದ600ರ ವರೆಗೆ ನೀಡಬೇಕಾಗುತ್ತದೆ.ಬೆಳೆಗಾರರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಕಿಲೋ ಗ್ರಾಂಗೆ 125-140ರ ವರೆಗೂ ಧಾರಣೆ ಲಭಿಸುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ಗೋಡಂಬಿಗೆ ಹೆಚ್ಚಿನ ಬೆಲೆ ಇರುವುದರಿಂದ ರಫ್ತಿನಲ್ಲಿಯೂ ನಮ್ಮ ದೇಶ ಮುಂದಿದೆ.ರುಚಿಯಲ್ಲೂ ಗೋಡಂಬಿಯದು ಎತ್ತಿದ ಕೈ. ಹುರಿದು ಅಥವಾ ಹಸಿಯಾಗಿಯೇ ಸೇವಿಸ ಬಹುದಾದ ಗೋಡಂಬಿಯಿಂದ ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅತಿಯಾದ ಬೇಡಿಕೆಯಿದೆ. - ವಿದ್ಯಾಗಣೇಶ್ ಆಣಂಗೂರು